ಶ್ರೀ ಕಾರ್ಪರ ನರಹರಿ ದಾಸರು
ರಾಗ : ಕಾಂಬೋಧಿ ತಾಳ : ಝಂಪೆ
ಶ್ರೀಮದಕ್ಷೋಭ್ಯತೀರ್ಥರ ದಿವ್ಯ ಚರಿತಂ ।
ಕಾಮಿತ ಪ್ರದವಹುದು ಶೃಣ್ವತಾಂ ಸತತಂ ।। ಪಲ್ಲವಿ ।।
ಈ ಮಹಿಯೊಳವತರಿಸಿ ಭೂಮಿಜಾ ಸಹಿತ । ಶ್ರೀ ।
ರಾಮನಂಘ್ರಿದ್ವಯವ ಪೂಜಿಸುತಲಿ ।
ಭೂಮಿ ನಿರ್ಜರಜರಸ್ತೋಮ ವಂದಿತರಾಗಿ ।
ವ್ಯೋಮಕೇಶಾಂಶರೆಂದೆನಿಸಿ ಮೆರೆದಂಥ ।। ಚರಣ ।।
ಮೋದತೀರ್ಥರ ಮತ ಮಹೋದಧಿಗೆ । ಪೂರ್ಣನು ।
ದೀಧಿತಿಯರೆಂದೆನಿಸಿ ದಿಗ್ವಲಯದಿ ।
ಭೇದ ಬೋಧಕ ಸೂತ್ರವಾದದಿಂದಲಿ । ಮಹಾ ।
ವಾದಿ ವಿದ್ಯಾರಣ್ಯ ಯತಿವರನ ಜಯಿಸಿದ ।। ಚರಣ ।।
ವಿಠ್ಠಲನ ಪಾದ ಮದುಮ ಷಟ್ಟದರೆಂದೆನಿಸಿ ।
ಸ್ವಪ್ನ ಸೂಚಿತ ಚಂದ್ರಭಾಗ ತಟದಿ ।
ಶ್ರೇಷ್ಠ ಕುದುರೆಯ ನೇರಿ ನದಿಯ ಜಲವ ಕುಡಿದವರ ।
ಇಷ್ಟರೆನ್ನುತ ಕರೆದು ಕೊಟ್ಟರಾಶ್ರಮವ ।। ಚರಣ ।।
ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬ ।
ದೃಷ್ಟಿಯಿಂದಿವರಿಗೆ ಸುಮುಹೂರ್ತದಿ ।
ಪಟ್ಟ ಗಟ್ಟಿದರು ಜಯತೀರ್ಥ ನಾಮವ ನೀಡುತ ।
ತೊಟ್ಟರಾಜ್ಞೆಯನು ದಿಗ್ವಿಜಯ ಮಾಡಿರಿ ಎಂದು ।। ಚರಣ ।।
ದೇಶ ದೇಶದಿ ಬರುವ ಭೂಸುರೋತ್ತಮರ । ಅಭಿ ।
ಲಾಷೆಗಳನೆಲ್ಲ ಪೂರೈಸಿ ಪೊರೆವ ।
ಶ್ರೀಶ ಕಾರ್ಪರ ಕ್ಷೇತ್ರ ವಾಸ ಅಶ್ವತ್ಥ । ನರ ।
ಕೇಸರಿಯ ನೋಲಿಸಿದ ಯತೀಶರಿವರೆಂದು ।। ಚರಣ ।।
****
No comments:
Post a Comment