Wednesday, 1 September 2021

ಕೇಳಿ ಬಂದೆ ಕೇಳಿ ಬಂದೆ ನಿನ್ನ ಮೊರೆಹೊಕ್ಕವರ ಕೈಯ್ಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಕೇಳಿ ಬಂದೆ ಪ 


ಕೇಳಿ ಬಂದೆ ನಿನ್ನ ಮೊರೆಹೊಕ್ಕವರ ಕೈಯ್ಯಾ | ಇಳೆಯೊಳಗ ಬಿಡನೆಂಬ ಬಿರುದವ ನಾ1 

ಸುಗ್ರೀವ ತಾ ಪುಗೆ ಒಡಲವನು ವಾಲಿಯನು | ನಿಗ್ರಹಿಸಿರಾಜ್ಯ ಪದವಿತ್ತನೆಂದು 2 

ಶರಧಿ ಧಡಿಯಲಿ ವಿಭೀಷಣನು ಶರಣವನು | ಬರಲು ಧೃಡ ಸಂಪತ್ತು ನಿತ್ತನೆಂದು 3 

ಖಂಡಿಸಿ ಕೌರವರ ಬಳಗವನು ಸೈನ್ಯವನು | ಪಾಂಡವರನು ಸ್ಥಾಪನೆ ಗೈದಾನೆಂದು 4 

ಏನ್ನನು ಪೇಕ್ಷಿಸದಿರು ನೀನು ಕಾರಣನು | ಸನ್ನುತ ಮಹಿಪತಿ ಸುತ ಜೀವನಾ 5

***


No comments:

Post a Comment