Saturday, 14 December 2019

ಪಿಡಿ ಎನ್ನ ಕೈಯ್ಯ ರಂಗಯ್ಯ ankita jagannatha vittala

ಜಗನ್ನಾಥದಾಸರು
ಪಿಡಿ ಎನ್ನ ಕೈಯ್ಯ ರಂಗಯ್ಯ ಪ

ಪಿಡಿ ಎನ್ನ ಕೈಯ ಪಾಲ್ಗಡಲ ಶಯನ ಮೋಹ
ಮಡುವಿನೋಳ್ ಬಿದ್ದು ಬಾಯ್ಬಿಡುವೆ ಬೇಗದಿ ಅ

ನೀರಜನಾಭಾ ನಂಬಿದೆ ನಿನ್ನ ನೀರಪ್ರದಾಭಾ
ಕಾರುÀಣ್ಯ ನಿಧಿ ಲಕ್ಷ್ಮೀನಾರಸಿಂಹನ ಪರಿ
ವಾರಸಹಿತ ಈ ಶರೀರದೊಳಡಗಿರ್ದು
ಘೋರತರ ಸಂಸಾರ ಪಂಕದಿ
ಚಾರು ವರಿವನ ದೂರ ನೋಡುವ
ರೇ ರಮಾಪತೆ ಗಾರುಮಾಡದೆ
ಚಾರುವಿಮಲ ಕರಾರವಿಂದದಿ 1

ಅನಿಮಿತ್ತ ಬಂಧೋ ನೀನೇ ಗತಿ ಗುಣ ಗಣಸಿಂಧೋ
ವಿಧಿ ಭವಸಂಕ್ರಂ
ದನ ಮುಖ್ಯ ವೇದ ಸನ್ಮುನಿ ಗಣಾರ್ಚಿತ ಪಾದಾ
ಅನುಜ ತನುಜಾಪ್ತಾನುಗ ಜನನೀ
ಸದನ ಸಂ
ಹನÀನ ಮೊದಲಾದಿನಿತು ಸಾಕುವ
ಘನತೆ ನಿನ್ನದು ಜನುಮ ಜನುಮದಿ 2

ಶ್ರೀ ಜಗನ್ನಾಥವಿಠ್ಠಲ ದ್ವಿಜರಾಜ ವರೂಥ
ಓಜಕಾಮಿಕ ಕಲ್ಪ ಭೂಜ ಭಾಸ್ಕರ ಕೋಟಿ
ತೇಜ ಮನ್ಮನದಿ ವಿರಾಜಿಸು ಪ್ರತಿದಿನ
ಈ ಜಗತ್ರಯ ಭಂಜನನೆ ಬಹು
ಸೋಜಿಗವಲಾ ನೈಜ ನಿಜನಿ
ವ್ರ್ಯಾಜದಿಂದಲಿ ನೀ ಜಯಪ್ರದ
ನೈಜ ಜನರಿಗೆ ಹೇ ಜಗತ್ಪತೇ 3
***

pallavi

piDi enna kayya rangayya

anupallavi

piDi enna kayya pAlgaDaloDeyene mOha maDuvinOLgiddu bAibiDuve bEgane bandu

caraNam 1

nIrajanAbha nambide ninna nirapradAbhA kAruNyanidhi lakSmI nArasimhanE
parivAra sahita I sharIradoLaDagiddu ghOratara samsArA pankadi cArivaridenO
dUranOLpare hE ramApatE gAru mADade cAru vimala karAravindadi

caraNam 2

aNimitta bandhu nInE gati guNagaNa sindhu anaghane sEvisuvenO vidhi bhava sankrandana
mukhya dEva sanmunigaNARcita pAda anuja tanujAgraja sadANuga janani janaka pashu krashI
ghrana sadana samhanana modalAdinitu sAkuva ghanate ninnadu

caraNam 3

shrI jagannAtha viThala dvijarAja varUtha Oja kAmita kalpa bhUja bhAskarakOTi tEja
manmanadi virAjisu pratidina I jagatraya bhAjanane balu sOjigavalA naijane nirvyAjadin
nIne jayaprada naija janarige hE jagatpatE
***

No comments:

Post a Comment