Saturday 14 December 2019

ಬೇಡಲೇತಕೆ ಪರರ ದೇಹಿಯೆಂದು ankita jagannatha vittala

by ಜಗನ್ನಾಥದಾಸರು
ರಾಗ - ಕಾಂಬೋಧಿ (ಭೂಪ್ ) ಝಂಪೆತಾಳ

ಬೇಡಲೇತಕೆ ಪರರ ದೇಹಿಯೆಂದು ||ಪ||
ನೀಡುವ ದೊರೆ ನಮಗೆ ನೀನಿರಲು ಸರ್ವದಾ ||ಅ.ಪ||

ಗ್ರಾಸವನು ಬೇಡೆ ದೂರ್ವಾಸ ಮುನಿಗನ್ನನಾ-
ಯಾಸದಿಂ ತತ್ಕಾಲದಲಿ ಕಲ್ಪಿಸಿ
ಆ ಸಂಯಮಿಗೆ ಉಣಿಸಿ ದಣಿಸಿದ ಮಹಾದಾತ
ದಾಶರಥೆ ನಿನ್ನ ಬಿಟ್ಟನ್ಯದೇವತೆಗಳನು ||೧||

ಖೂಳ ದುಶ್ಶಾಸನನು ದ್ರೌಪದಿಯ ಸಭೆಯೊಳು ದು-
ಕೂಲವನು ಸೆಳೆಯೆ ದ್ವಾರಕಾಮಂದಿರ
ಶ್ರೀಲೋಲ ಶ್ರೀಕೃಷ್ಣ ಕರುಣಿಸು ಕರುಣಿಸೆನೆ
ಪಾಂಚಾಲಿ ಮೊರೆ ಕೇಳಿ ದಿವ್ಯಾಂಬರನಿಚಯವಿತ್ತೆ ||೨||

ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ
ಬಡತನವ ಕಳೆದೆ ಒಪ್ಪಿಡಿ ಅವಲಿಗೆ
ಪೊಡವಿಯನ್ನಾಳಿದೆ ಕ್ರಿಮಿಗೊಲಿದು , ಕರುಣದಲಿ
ಜಡಜಸಂಭವ ಮೃಡಬಿಡೌಜರೀಪ್ಸಿತ ಕೊಡುತೆ ||೩||

ತಾಪಸೋತ್ತಮ ಮೃಕಂಡಾತ್ಮಜಗೆ ಕಲ್ಪಾಯು
ನೀ ಪೂರ್ತಿ ಮಾಡಿ ಅಲ್ಪಾಯು ಕಳೆದೆ
ಆ ಪರ್ವತೇಶ್ವರನ ಪಟ್ಟಣವ ಸಾರ್ದ ಸಾಂ-
ದೀಪತನಯನ ತಂದ ಸರ್ವಾಂತರ್ಯಾಮಿ ||೪||

ಕಲ್ಪಕಲ್ಪಗಳಲ್ಲಿ ವಿಶ್ವಜೀವರಿಗನ್ನ-
ಕಲ್ಪಕನು ನೀನಿರಲು ಭ್ರಾಂತಿಯಿಂದ
ಅಲ್ಪ ಮಾನವರಿಗಾಲ್ಪರಿದರೇನಹುದು ಅಹಿ-
ತಲ್ಪ ಜಗನ್ನಾಥವಿಠ್ಠಲ ಕಲ್ಪತರುವಿರಲು ||೫||
***

pallavi

bEDa bEDa lEtake parara dEhi endu

anupallavi

nIDuve dore namage nIniralu sarvadA

caraNam 1

grAsavanu bEDe durvAsa muni gannanAyAasadim tatkAladali kalpisi
A sayyamige uNisi daNisida mahAdAta dAsharathE ninna biTTanya dEvategaLanu

caraNam 2

khULa dusshAsananu draupaidiya sabheyoLu dukUlavanu saLeya dvArakAmandira
shrI lOla shrI krSNa karuNisu karuNisene pAncAli more kELI divyAmabara nicayavittE

caraNam 3

maDadi kaLuhalu banda brAhmaNana piDisuva baDatanava kaLede oppiDa avalige
poDaviyennALiside krimigolidu karuNadali jaDa sambhava mrga biDau jaripsita koDutE

caraNam 4

tApasOttama mrkaNDAtma jage kalpAyu nI pUri mADi alpAyu kaLede
A parvatEshvarana paTTaNava sArdha sAndIpa tanayana tanda sarvAntaryAmi

caraNam 5

kalp kalpagaLalli vishva jIvariganna kalpakanu nIniralu bhrAntiyinda
alpa mAnavarigAlparEnahudu ahitalpa jagannAtha viThaLa kalpataru viravu
***

ಬೇಡಲೇತಕೆ ಪರರ ದೇಹಿಯೆಂದು ಪ

ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ.

ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ
ಯಾಸದಿಂ ತತ್ಕಾಲದಲಿ ಕಲ್ಪಿಸಿ
ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ
ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1

ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು
ಕೂಲವನು ಸೆಳೆಯೆ ದ್ವಾರಕ ಮಂದಿರಾ
ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ
ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2

ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ
ಬಡತನವ ಕಳೆದೆ ಒಪ್ಪಿಡಿಯವಲಿಗೆ
ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ
ಮೃಡ ಬಿಡೌಜರೀಪ್ಸಿತ ಕೊಡುವೆ 3

ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು
ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು
ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ
ದೀಪ ತನಯನ ತಂದ ಸರ್ವಾಂತರ್ಯಾಮಿ 4

ವಿಶ್ವ ಜೀವರಿಗನ್ನ
ಕಲ್ಪಕನೆ ನೀನಿರಲು e್ಞÁನ ದ್ರವ್ಯ
ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ
ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
*******

No comments:

Post a Comment