Sunday 1 August 2021

ನೋಡು ನೋಡು ನಾರೀಮಣಿಯೆ ನೋಡು ನೋಡು ನಿನ್ನಾ ಕಣ್ಮನ ದಣಿಯಾ ankita shreeda vittala

 ..

kruti by Srida Vittala Dasaru  Karjagi Dasappa


ನೋಡು ನೋಡು ನಾರೀಮಣಿಯೆ ಪ


ನೋಡು ನೋಡು ನಿನ್ನಾ ಕಣ್ಮನ ದಣಿಯಾ ಅ.ಪ.


ಮುದ್ದು ಸೂಸುವ ಸಲೆ ಮುಗುಳ್ನಗೆ ಮೊಗವಾ

ತಿದ್ದಿದ ಕಸ್ತೂರಿ ತಿಲಕದ ಫಣಿಯಾ 1


ಸಾರ ಗಂಭೀರ ಶೃಂಗಾರ ವಿಹಾರಾ

ಚಾರು ಸೌಂದರ್ಯವೈಯ್ಯಾರ ಸುಗುಣಿಯಾ 2


ಶ್ರೀದವಿಠ್ಠಲ ಸಾಕ್ಷಾತ್ತ್ರಿಜಗನ್ಮಯಾ

ಇಂದ್ರಶರಾ ಜಗನ್ಮೋಹನ ಖಣಿಯಾ 3

***


No comments:

Post a Comment