ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನರಹರಿಯೆ ಪ.
ನಾರಾಯಣ ನರಹರಿಯೆ ಹಯವದನ
ಸ್ವಾಮಿ ನೀ ಎನಗೆ ದಯವಾಗೊ ಅ.ಪ.
ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು
ಆಗಮವ ತಂದು ಅಜಗಿತ್ತೆ
ಆಗಮವ ತಂದು ಅಜಗಿತ್ತೆ ಹಯವದನ
ಆದಿಮೂರುತಿಯೆ ದಯವಾಗೊ 1
ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದ
ಪ್ರೇಮದಿ ಸುರರಿಗಮೃತವ
ಪ್ರೇಮದಿ ಅಮೃತವನಿಕ್ಕಿದ ಹಯವದನ
ಸ್ವಾಮಿ ನೀ ಎನಗೆ ದಯವಾಗೊ 2
ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು
ರÀೂಢಿಯ ನೆಗಹಿ ಜಗಕಿತ್ತೆ
ರÀೂಢಿಯ ನೆಗಹಿ ಜಗಕಿತ್ತೆ ಹಯವದನ
ಪ್ರೌಢ ನೀ ಎನಗೆ ದಯವಾಗೊ 3
ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ
ಕುಶಲದಿಂ ಕರುಳ ಮಾಲೆಯ
ಕುಶಲದಿಂ ಮಾಲೆ ಧರಿಸಿದ ಹಯವದನ
ಬಿಸಜಾಕ್ಷ ಎನಗೆ ದಯವಾಗೊ 4
ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ
ವ್ಯೋಮಕ್ಕೆ ಚರಣವ ನೀಡಿದೆ
ವ್ಯೋಮಕ್ಕೆ ಚರಣವ ನೀಡಿದ ಹಯವದನ
ವಾಮನ ಎನಗೆ ದಯವಾಗೊ 5
ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ
ಹಡೆದ ತಂದೆಯ ಮಾತು ಸಲಿಸಿದೆ
ಹಡೆದ ತಂದೆಯ ಮಾತು ಸಲಿಸಿದ ಹಯವದನ
ಒಡೆಯ ನೀ ಎನಗೆ ದಯವಾಗೊ 6
ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ
ಭೂತ ರಾವಣನ ಮಡುಹಿದೆ
ಭೂತ ರಾವಣನ ಮಡುಹಿದೆ ಹಯವದನ
ಖ್ಯಾತ ನೀ ಎನಗೆ ದಯವಾಗೊ 7
ಗೊಲ್ಲರ ಒಡನಾಡಿ ಬಲ್ಲಿದಸುರÀನ ಕೊಂದು
ಮಲ್ಲರೊಡನಾಡಿ ಮಡುಹಿದೆ
ಮಲ್ಲರೊಡನಾಡಿ ಮಡುಹಿದ ಹಯವದನ
ಫುಲ್ಲಾಕ್ಷ ಎನಗೆ ದಯವಾಗೊ 8
ತ್ರಿಪುರರ ಸತಿಯರಿಗುಪದೇಶವನಿಕ್ಕಿ
ತ್ರಿಪುರರನೆಲ್ಲ ಮಡುಹಿದೆ
ತ್ರಿಪುರರನೆಲ್ಲ ಮಡುಹಿದ ಹಯವದನ
ನಿಪುಣ ನೀ ಎನಗೆ ದಯವಾಗೊ 9
ತೇಜಿಯನೇರಿ ರಾಹುತನಾಗಿ ನೀ ಮೆರೆದೆ
ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ
ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಹಯವದನ
ಭೋಜ ನೀ ಎನಗೆ ದಯವಾಗೊ 10
ವಾದಿರಾಜರಿಗೊಲಿದು ಸ್ವಾದೆಪುರದಲಿ ನಿಂದು
ವೇದದ ಕಥೆಯನರುಹಿದೆ
ವೇದದ ಕಥೆಯನರುಹಿದ ಹಯವದನ
ಮಾಧವ ನೀ ಎನಗೆ ದಯವಾಗೊ 11
***
No comments:
Post a Comment