..
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ಲಕ್ಷುಮಿ ಅರಸನೇ ಪ.
ನಾರಾಯಣ ಲಕ್ಷುಮಿಅರಸನೆ ಹಯವದನ
ಸ್ವಾಮಿ ನೀ ಒಲಿದು ದಯವಾಗು ಅ.ಪ.
ಕಾಮವೆಂಬ ಕೊಂಡ ಕ್ರೋಧವೆಂಬ ಕನ್ನಡಿ (ಕೆಂಗಿಡಿ?)
ಲೋಭಮೋಹಗಳನುವಾದೊ
ಲೋಭಮೋಹಗಳನುವಾದೊ ಹಯವದನ
ಸ್ವಾಮಿ ನೀ ಒಲಿದು ದಯವಾಗು 1
ಮನುಗಳ ಕಾಲದಲ್ಲಿ ಜಲದೊಳಗವತರಿಸಿ
ಜಗವೇಳು ಧರೆಯ ನೆಗಹಿದೆ
ಜಗವೇಳು ಧರೆಯ ನೆಗಹಿದೆ ಹಯವದನ
ಮತ್ಸ್ಯವತಾರ ದಯವಾಗು 2
ಕೂರ್ಮಾವತಾರದಲಿ ಭೂಮಿಯ ನೆಗಹಿದೆ
ಕೂಡೆ ಸಜ್ಜನರ ಸಲಹಿದೆ
ಕೂಡೆ ಸಜ್ಜನರ ಸಲಹಿದೆ ಹಯವದನ
ಕೂರ್ಮಾವತಾರ ದಯವಾಗು 3
ವರಾಹಾವತಾರದಲಿ ದುರುಳ ದಾನವಗಂಜಿ
ಕೋರೆದಾಡೆಯಲಿ ನೆಗಹಿದೆ
ಕೋರೆದಾಡೆಯಲಿ ನೆಗಹಿದೆ ಹಯವದನ
ವರಾಹಾವತಾರ ದಯವಾಗು 4
ಸೊಕ್ಕಿದ ಅಸುರನ ಕರುಳ ಕುಕ್ಕಿ ಮಾಲೆಯ ಮಾಡಿ
ಭಕ್ತನಿಗಭಯ ಸಲಿಸಿದೆ
ಭಕ್ತನಿಗಭಯ ಸಲಿಸಿದೆ ಹಯವದನ
ಅಪ್ಪ ನರಸಿಂಹ ದಯವಾಗು 5
ವಾಮನನಾಗಿ ನೀ ಭೂಮಿದಾನವ ಬೇಡಿ
ಭೂಮಿ ಪಾದದಲಿ ಅಳೆದೆಯೊ
ಭೂಮಿ ಪಾದದಲಿ ಅಳೆದೆಯೊ ಹಯವದನ
ವಾಮನಾವತಾರ ದಯವಾಗು 6
ಹೆತ್ತವಳ ಶಿರ ಕಡಿದು ಕ್ಷತ್ರಿಯಕುಲ ಸವರಿ
ಮತ್ತೆ ಕೊಡಲಿಯ ಪಿಡಿದೆಯೊ
ಮತ್ತೆ ಕೊಡಲಿಯ ಪಿಡಿದೆಯೊ ಹಯವದನ
ಅಪ್ಪ ಭಾರ್ಗವನೆ ದಯವಾಗು 7
ಸೀತೆಗೋಸ್ಕರವಾಗಿ ಸೇತುವೆ ಕಟ್ಟಿಸಿದೆ
ಪಾತಕಿ ರಾವಣನ ಮಡುಹಿದೆ
ಪಾತಕಿ ರಾವಣನ ಮಡುಹಿದೆ ಹಯವದನ
ಖ್ಯಾತ ರಘುನಾಥ ದಯವಾಗು 8
ಕೃಷ್ಣಾವತಾರದಲಿ ದುಷ್ಟಕಂಸನ ಕೊಂದೆ
ಹೆತ್ತವಳ ಬಂಧನ ಬಿಡಿಸಿದೆ
ಹೆತ್ತವಳ ಬಂಧನ ಬಿಡಿಸಿದೆ ಹಯವದನ
ಕೃಷ್ಣಾವತಾರ ದಯವಾಗು 9
ಉತ್ತಮ ಸತಿಯರ ಹೆಚ್ಚಿನ ವ್ರತ ಸವರಿ
ಮತ್ತೆ ಹಯವೇರಿ ಮೆರೆದೆಯೊ
ಮತ್ತೆ ಹಯವೇರಿ ಮೆರೆದೆಯೊ ಹಯ[ವದನ
ಉತ್ತಮ ಬೌದ್ಧ ಕಲ್ಕಿ ದಯವಾಗು] 10
ಅಂಗಜನಯ್ಯನೆ ಮಂಗಳಮಹಿಮನೆ
ಗಂಗೆಯ ಪೆತ್ತ ಗರುವನೆ
ಗಂಗೆಯ ಪೆತ್ತ ಗರುವನೆ ಹಯವದನ
ಮಂಗಳ ಮಹಿಮ ದಯವಾಗು 11
ವಾದಿರಾಜರಿಗೊಲಿದೆ ಸ್ವಾದೆಪುರದಲಿ ನಿಂತೆ
ವೇದಾಂತ ಕಥೆಯ ಹರಹಿದೆ
ವೇದಾಂತ ಕಥೆಯ ಹರಹಿದೆ ಹಯವದನ
ವೇದಮೂರುತಿಯೆ ದಯವಾಗು 12
***
No comments:
Post a Comment