ಮರೆಯದಿರುವರೋ ನಿನ್ನ ಸ್ಮರಣೆಯಾ ನೀನು ಪ
ಗರಿಯಾ ಚರಿಯಾ ಮರಿಯಾ ನೆರಿಯಾ | ಸೇರಿ ಕ್ರೂರ ಮಾರಿದಾರಿ ಜಾರಿ ದೂರಸಾರದೇ ಅ.ಪ
ಕಡಲಶಯನೆಚ್ಚರಾ ಕಳೆದು ಹೊರಿಯಲುದರಾ | ಬಿಡದೋಲೈಸಿ ಘನಮದರಾ | ಕಡಿಯಾ ಕಿಡಿಯಾ ನುಡಿಯಾ ಪಡಿಯಾ | ಬೇಡಿ ಕಾಡಿ ಓಡಿ ಆಡ ಬ್ಯಾಡ ಗಾಢ ಮೂಢನೇ 1
ತರಳ ಪ್ರಾಯ ಮುಪ್ಪಿಂದೆ ತೀರಲಾಯುಷ್ಯ ಬರುದೇ | ಯರಗುವಾಯಮ ತಾ ನಿಲದೇ | ತ್ವರಿಯಾ ಧರಿಯಾ ಕುರಯಾ ಮರಿಯಾ | ವೈರಿ ಮೀರಿ ಹಾರಿ ತೂರಿ ಹೊರುವಂದದಿ 2
ಮಿನಗು ಬೆಳಗ ಘನ ಮಹಿಪತಿ ಸುತ ಪ್ರಿಯನಾ | ಅನುಭದಿಸದಿಹುದೇನಾ | ಅನುವೇ ಮನವೇ ಗುಣವೇ ದನವೇ | ಜ್ಞಾನ ಹೀನ ಮಾನ ದೀನ ಆನನದಲೀ 3
***
No comments:
Post a Comment