Monday, 6 September 2021

ಸುಧೀಂದ್ರಕಂದ ಛಂದದಿಂದ ಬಂದ ಬೃಂದಾವನದಿಂದ ankita lakumeesha

 ankita ಲಕುಮೀಶ 

ರಾಗ: [ಶಿವರಂಜಿನಿ] ತಾಳ: [ಆದಿ]


ಸುಧೀಂದ್ರಕಂದ ಛಂದದಿಂದ ಬಂದ ಬೃಂದಾವನದಿಂದ

ಬಂದಾ ಬೃಂದಾವನದಿಂದ 


ಒಂದೇ ಮನದಿಂದ ವಂದಿಪ ಜನರಿಗಾ-

ನಂದವ ನೀಡಲು ನಂದನಂದನ ಪ್ರಿಯಾ  1

ಇಂದಿರೆಯರಸ ಗೋವಿಂದನ ಒಲಿಸುತ

ಗಂಧ ತುಲಸಿ ಮಾಲದಿಂದೊಪ್ಪುತಲಿ ಗುರು  2

ಪರಿಮಳ ರಚಿಸುತ ಧರೆಯೊಳು ಬೀರುತ

ಹರುಷದಿ ಸುಜನರ ಪೊರೆಯುತಲಿ ಯತಿ   3

ಪರಮಪಾವನಚರಿತ ದುರಿತಗಳ ತರಿವಾತ

ವರಮಂತ್ರಗೃಹನಾಥ ಶ್ರೀ ರಾಘವೇಂದ್ರದಾತ  4

ಹಿಂದಕೆ ಪ್ರಹ್ಲಾದ ಎಂದೆನಿಸಿ ಪಿತಗೆ

ಸಿಂಧೂರವರದ ಮುಕುಂದಾನ ತೋರಿದ  5

ವ್ಯಾಸರಾಜನೆನಿಸಿ ಭೂಸುರರ ಪೋಷಿಸಿ

ಶ್ರೀಸುಧಾಮಸಖ ವಾಸುದೇವನ ಭಜಿಸಿ  6

ಸುಕುಮಾರ ಸುಂದರ ಲಕುಮೀಶ ದೇವನೆ

ಲೊಕಗಳಿಗೆಲ್ಲ ಏಕದೈವವೆನುತ  7

***


No comments:

Post a Comment