Sunday 13 June 2021

ಹಸೆಗೆ ಬಾರೈರಾಮಾ ಬಿಸಜಾಪ್ತ ವಂಶಲಲಾಮ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ

ಹಸೆಗೆ ಬಾರೈರಾಮಾ
ಬಿಸಜಾಪ್ತ ವಂಶಲಲಾಮ ಅ.ಪ
ಮಾನಸ ಪೀಠಕೆ ಜಾನಕಿದೇವಿ ಸಹಿತಾ ಆನತರಿಗೆ ಸೌಖ್ಯವ ಬೀರುತಲಿ 1 ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು ಧರ್ಮಸ್ಥಾಪಿಸೆ ಧರಣಿ ಮಂಡಲದಿ 2 ಹನುಮಂತ ಜಾಂಬವ ಇನತನಯಾಂಗದಾದಿ ಘನಕಪಿವೀರರು ಕಾದುಕೊಂಡಿರುವರು 3 ಕಾಮಾದಿ ವರ್ಗಂಗಳ ನಿರ್‍ನಾಮವಾಗಿ ಪೋಪಂತೆ ನೀಮನವಲಿದನುಗ್ರಹಿಸಿ ಬೇಗದಿ 4 ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು ಅಂತರಾತ್ಮಕ ಗುರುರಾಮ ವಿಠಲನೆ 5
***

No comments:

Post a Comment