Sunday, 1 August 2021

ಧ್ಯಾನವ ಕೊಡು ಹರಿಯೆ ನಿರಂತರ ಧ್ಯಾನವ ಕೊಡು ಹರಿಯೆ ankita lakshmikanta


kruti by ಲಕ್ಷ್ಮೀನಾರಯಣರಾಯರು Lakshminarayanaru 


ಧ್ಯಾನವ ಕೊಡು ಹರಿಯೆ | ನಿರಂತರ

ಧ್ಯಾನವ ಕೊಡು ಹರಿಯೆ ಪ


ನೀನೆ ಗತಿಯೆಂದಾನುಪೂರ್ವಕ

ಧ್ಯಾನ ಮಾಳ್ವರ ಜನ್ಮಕರ್ಮಗ

ಳೇನು ನೋಡದೆ ಪೊರೆವೆ ನಿನ್ನ

ಸುನಾಮವೆ ಸುರಧೇನುವೆಂದು ಅ.ಪ.


ನಿನ್ನ ನಾಮವ ನೆನೆದು | ಅಜಾಮಿಳನು

ಧನ್ಯನು ತಾನಾದನು ಈ ಭುವನದಿ

ತನ್ನ ದೇಹಾತುರದೊಳನ್ಯರ

ಬನ್ನ ಬಿಡಿಸುತಲಿದ್ದ ಖಳನು

ನಿನ್ನ ನಾಮಸ್ಮರಣೆ ಮಾತ್ರದಿ

ಘನ್ನ ಮುನಿಪತಿ ಎನ್ನಿಸಿದನು 1


ದುರುಳ ದುಶ್ಯಾಸನನು | ಸಭೆಯೊಳಗಂದು

ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ

ಮುರಹರನೆ ಹಾ ಕೃಷ್ಣ ದ್ವಾರಕಾ-

ಪುರನಿಲಯ ಪರಮಾತ್ಮ ಭಕ್ತರ

ಸುರತರುವೆ ಎಲ್ಲಿರುವೆ ಏತಕೆ

ಮರೆವೆ ಎನ್ನುತ ಮೊರೆಯೆ ಪೊರೆದೆಯೊ 2


ನರಕ ಕೂಪದೊಳು ಬಿದ್ದು | ಏಳುತ್ತ ಮುಳುಗುತ

ಪರಿಪರಿ ಭಾಷೆಯಲಿ ಮುಂದೋರದೆ

ಹೊರಳುತ್ಹೊರಳುತ ಮರುಕಗೊಳುತ

ಹರಿಹರಿ ನಾರಾಯಣೆನ್ನಲು

ಸುರಲೋಕವನ್ನಿತ್ತು ಸಲಹಿದೆ

ವರದ ಲಕ್ಷ್ಮೀಕಾಂತ ಶಾಶ್ವತ 3

***

ರಾಗ - : ತಾಳ -


ಧ್ಯಾನವ ಕೊಡು ಹರಿಯೆ l ನಿರಂತರ

ಧ್ಯಾನವ ಕೊಡು ಹರಿಯೆ ll ಪ ll


ನೀನೆ ಗತಿಯೆಂದಾನುಪೂರ್ವಕ

ಧ್ಯಾನ ಮಾಳ್ಪರ ಜನ್ಮಕರ್ಮಗ

ಳೇನು ನೋಡದೆ ಪೊರೆವೆ ನಿನ್ನ

ಸುನಾಮವೆ ಸುರಧೇನುವೆಂದು ll ಅ ಪ ll


ನಿನ್ನ ನಾಮವ ನೆನೆದು l  ಅಜಾಮಿಳನು

ಧನ್ಯನು ತಾನಾದನು ಈ ಭುವನದಿ

ತನ್ನ ದೇಹಾತುರದೊಳನ್ಯರ

ಬನ್ನ ಬಿಡಿಸುತಲಿದ್ದ ಖಳನು

ನಿನ್ನ ನಾಮಸ್ಮರಣೆ ಮಾತ್ರದಿ

ಘನ್ನ ಮುನಿಪತಿ ಎನ್ನಿಸಿದನು ll 1 ll


ದುರುಳ ದುಶ್ಶಾಸನನು l  ಸಭೆಯೊಳಗಂದು 

ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ

ಮುರಹರನೆ ಹಾ ಕೃಷ್ಣ ದ್ವಾರಕಾ-

ಪುರನಿಲಯ ಪರಮಾತ್ಮ ಭಕ್ತರ

ಸುರತರುವೆ ಎಲ್ಲಿರುವೆ ಏತಕೆ

ಮರೆವೆ ಎನ್ನುತ ಮೊರೆಯೆ ಪೊರೆದೆಯೊ ll 2 ll


ನರಕ ಕೂಪದೊಳು ಬಿದ್ದು l  ಏಳುತ್ತ ಮುಳುಗುತ

ಪರಿಪರಿ ಭಾಷೆಯಲಿ ಮುಂದೋರದೆ

ಹೊರಳುತ್ಹೊರಳುತ ಮರುಕಗೊಳುತ

ಹರಿಹರಿ ನಾರಾಯಣೆನ್ನಲು 

ಸುರಲೋಕವನ್ನಿತ್ತು ಸಲಹಿದೆ

ವರದ ಲಕ್ಷ್ಮೀಕಾಂತ ಶಾಶ್ವತ ll 3 ll


ದಾಸರ ಲಕ್ಷ್ಮೀನಾರಾಯಣರ ಕೀರ್ತನೆ

ಅಂಕಿತ - ಲಕ್ಷ್ಮೀಕಾಂತ

***


 

No comments:

Post a Comment