..
ಬಾರೊ ಬಾರೊ ಭಾಗ್ಯದ ಸಿರಿನಲ್ಲ
ಕೇಳುತಲೆನ ಸೊಲ್ಲ
ಬಾರೊ ಬಾರೆನುತಲಿ ಭಕ್ತವತ್ಸಲನೆ
ಬಾರಿ ಬಾರಿಗೆ ನಿನ್ನ ಬೇಡಿಕೊಂಬುವೆನು ಪ
ಕಡಲೊಳು ಮುಣಿಗಜಗ್ವೇದವ ತರುವ
ಕ್ಷೀರಾಂಬುಧಿ ಕಡೆವ
ಕಡು ಕ್ರೋಡರೂಪದಿ ಬೇರನೆ ಕಡಿವ
ಅಸುರನ ಒಡಲೊಡೆವ
ಬಡವನಾಗ್ಯಜ್ಞ ಶಾಲೆಗೆ ನಡೆವ
ಕೊಡಲಿಯನೆ ಪಿಡಿವ
ಹೊಡೆದ್ಹತ್ತು ಶಿರ ಕಾಳಿ ಮಡುವ್ಹಾರಿ ತ್ರಿಪುರರ
ಮಡದೇರನ್ವೊಲಿಸ್ವಾಜಿ ಹಿಡಿದೇರೋಡಿಸುವನೆ 1
ಕಣ್ಣು ತೆರೆದೆವೆಯಿಕ್ಕದಲೆ ನೋಡಿ
ಬೆನ್ನಲಿ ಗಿರಿ ಹೂಡಿ
ಮಣ್ಣುಕೆದರುತಲವನ ದಾಡೆ
ಕರುಳ್ಹಾರವ ಮಾಡಿ
ಸಣ್ಣ ತ್ರಿಪಾದ ದಾನವ ಬೇಡಿ
ಮನ್ನಿಸಿ ತಪ ಮಾಡಿ ಅ-
ರಣ್ಯ ಚರಿಸಿ ದಧಿ ಬೆಣ್ಣೆಗಳನು ಕದ್ದು
ಹೆಣ್ಣುಗಳನೆ ಕೆಡಿಸ್ಹಯವನ್ನೇರಿ ಮೆರೆವನೆ 2
ನಾರುತ್ತ ಮೈಯ ನೀರೊಳಗಿರುವ ಮಂ-
ದಾರವನ್ಹೊರುವ
ಕ್ವಾರೆ (ಕೋರೆ?)ಯಲಿ ಧರೆಯ ಮ್ಯಾಲಕೆ ತರುವ
ಕರಿ (ಕರೆಯೆ?) ಕಂಬದಿ ಬರುವ
ಘೋರ ತ್ರಿವಿಕ್ರಮನಾಗಿ ತೋರುವ
ತಾಯಿಯ ಶಿರ ತರಿವ
ನಾರ್ವಸ್ತ್ರಬಿಗಿದುಟ್ಟ ಭೀಮೇಶಕೃಷ್ಣನೆ
ನಾರೇರ ವ್ರತ ಭಂಗ ಮಾಡಿ ತುರುಗವೇರಿ3
***
No comments:
Post a Comment