Monday, 13 December 2021

ಕುರುಡು ನಾಯಿ ತಾ ಸಂತೆಗೆ ಬಂತಂತೆ ankita purandara dasa KURUDU NAAYI TAA SANTEGE BANTANTE








dakshina kannada


RESTART MOBILE IF AUDIO IS NOT PLAYING  CLICK-> HOME

or just scroll down for other devaranama 


ಕುರುಡು ನಾಯಿ ತಾ ಸಂತೆಗೆ ಬಂತಂತೆ
ಅದು ಏತಕೆ ಬಂತೋ ||ಪ||

ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ
ಹೆಂಡಿರ ಮಕ್ಕಳ ನೆಚ್ಚಿತಂತೆ
ಕೊಂಡು ಹೋಗುವಾಗ ಯಾರಿಲ್ಲವಂತೆ ||

ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ
ಮರೆತರಿನ್ನು ವ್ಯರ್ಥವಂತೆ
ನರಕದೊಳಗೆ ಬಿದ್ದಿತಂತೆ ||

ವೇದವಾದಗಳನೋದಿತಂತೆ
ಗಾದೆ ಮಾಡಿ ಬಿಟ್ಟಿತಂತೆ
ಹಾದಿ ತಪ್ಪಿ ನಡೆದು ಯಮನ
ಬಾಧೆಗೆ ತಾ ಗುರಿಯಾಯಿತಂತೆ ||

ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ
ಕಾನನಕಾನನ ತಿರುಗಿತಂತೆ
ತಾನು ತನ್ನನೆ ಮರೆಯಿತಂತೆ ||

ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ
ರಂಗ ಪುರಂದರವಿಠಲನ ಮರೆತು
ಭಂಗ ಬಹಳ ಪಟ್ಟಿತಂತೆ ||
****

Line-by-Line Transliteration (IAST)
kuruḍu nāyi tā santege bantante |
adu ētake bantō || pa ||

khaṇḍa sakkare hitavillavante |
khaṇḍa elubu kaḍiditante |
heṇḍira makkaḷa neccitante |
koṇḍu hōguvāga yārillavante ||

bharadi aṅgaḍi hokkitante |
tiruvi doṇṇeli ikkidarante |
maretarinnu vyarthavante |
narakadoḷage bidditante ||

vēdavādagaḷanōditante |
gāde māḍi biṭṭitante |
hādi tappi naḍedu yamana |
bādhege tā guriyāyitante ||

nānā janmavanettitante |
mānavanāgi huṭṭitante |
kānanakānana tirugitante |
tānu tannane mareyitante ||

maṅgana kaiya māṇikyadante |
hāṅgū hīṅgū kaḷedītante |
raṅga purandaraviṭhalana maretu |
bhaṅga bahaḷa paṭṭitante ||
***

Pronunciation & Recitation Guide
The Retroflex 'ḍ', 'ṇ', and 'ḷ': In kuruḍu (blind), khaṇḍa (sugar/piece), and makkaḷa (children), curl your tongue back to the roof of your mouth for a hard, resonant sound.

The Soft 't': In santege (market) and mānavanāgi (as a human), the 't' is dental—tongue touching the back of your front teeth.

The Nasal 'ṅ': In aṅgaḍi (shop) and maṅgana (monkey), the 'n' is a nasal sound similar to the 'ng' in "sing."

The 'sh' Sound: In bhaṅga (humiliation), ensure the 'bh' has a slight puff of air, followed by a resonant 'ng'.

Repetitive 'ante': The suffix -ante (it seems/it is said) should be recited with a touch of irony or storytelling flair, as if you are sharing a curious observation.

Vowel Length: Stretch the 'ō' in bantō (why did it come?) to emphasize the philosophical "question" at the heart of the song.

The 'L' Sound: In oḷage (inside) and bahaḷa (very much), use the heavy Kannada 'ḷ' by curling the tongue deeply.

Pace: Recite with a rhythmic, slightly brisk tempo (Eka Taala), mirroring the chaotic energy of a busy marketplace.
***

ಇದು ಶ್ರೀ ಪುರಂದರದಾಸರ ಅತ್ಯಂತ ಕಟುಸತ್ಯವನ್ನು ಸಾರುವ 'ನಿಂದಾಸ್ತುತಿ' ಅಥವಾ 'ಲೌಕಿಕ ವಿಡಂಬನೆ'ಯ ಕೃತಿ. ಮನುಷ್ಯನ ಅಜ್ಞಾನ ಮತ್ತು ವಿಷಯ ಸುಖಗಳ ಬೆನ್ನು ಹತ್ತಿ ಹೋಗುವ ಸ್ವಭಾವವನ್ನು ದಾಸರು ಒಂದು 'ಕುರುಡು ನಾಯಿ'ಯ ರೂಪಕದ ಮೂಲಕ ಅದ್ಭುತವಾಗಿ ವಿವರಿಸಿದ್ದಾರೆ.

ಸಾರಾಂಶ (Summary)
ಈ ಹಾಡಿನ ಮುಖ್ಯ ಸಾರಾಂಶ 'ಅಜ್ಞಾನ ಮತ್ತು ಲೌಕಿಕ ವ್ಯಾಮೋಹದ ವ್ಯರ್ಥತೆ'. ದೇವರಿಲ್ಲದ, ಆತ್ಮಜ್ಞಾನವಿಲ್ಲದ ಮನುಷ್ಯನು ಸಂತೆಗೆ ಬಂದ ಕುರುಡು ನಾಯಿಯಂತೆ. ಹಿತವಾದ ಸಕ್ಕರೆಯನ್ನು (ದೈವಭಕ್ತಿ) ಬಿಟ್ಟು ಹಳಸಲು ಎಲುಬನ್ನು (ಲೌಕಿಕ ಸುಖ) ಕಡಿಯುವ ನಾಯಿಯ ಪಾಡನ್ನು ಮನುಷ್ಯನಿಗೆ ಹೋಲಿಸಿ, ಭಗವಂತನನ್ನು ಮರೆತರೆ ಬದುಕು ಹೇಗೆ ಭಂಗವಾಗುತ್ತದೆ ಎಂಬುದನ್ನು ದಾಸರು ಇಲ್ಲಿ ಎಚ್ಚರಿಸಿದ್ದಾರೆ.


ಅರ್ಥ (Meaning Verse-wise)
ಪಲ್ಲವಿ:
ಕಣ್ಣು ಕಾಣದ ಕುರುಡು ನಾಯಿಯೊಂದು ಸಂತೆಗೆ (ಈ ಜಗತ್ತು ಎಂಬ ಸಂತೆಗೆ) ಬಂದಿತಂತೆ. ಅದಕ್ಕೆ ದಾರಿಯೂ ತಿಳಿಯದು, ಅಲ್ಲಿ ಏನು ಮಾಡಬೇಕೆಂದೂ ಗೊತ್ತಿಲ್ಲ; ಅದು ಏತಕ್ಕೆ ಬಂತೋ ಎಂದು ದಾಸರು ಆಶ್ಚರ್ಯಪಡುತ್ತಾರೆ.

ಚರಣ 1 (ತಪ್ಪು ಆದ್ಯತೆಗಳು):
ಸಿಹಿಯಾದ ಕಲ್ಲುಸಕ್ಕರೆಯಂತಹ ಹರಿಯ ನಾಮ ಅದಕ್ಕೆ ಹಿತವೆನಿಸುವುದಿಲ್ಲವಂತೆ. ಬದಲಿಗೆ, ಸಾರವಿಲ್ಲದ ಎಲುಬನ್ನು (ಸಂಸಾರದ ಸುಖ) ಕಡಿಯುವುದರಲ್ಲೇ ಅದಕ್ಕೆ ಸವಿಯಿದೆಯಂತೆ. ಹೆಂಡತಿ ಮಕ್ಕಳೇ ಸರ್ವಸ್ವ ಎಂದು ನಂಬಿದೆ, ಆದರೆ ಈ ಲೋಕದಿಂದ ಹೋಗುವಾಗ ಯಾರೂ ಜೊತೆಗೆ ಬರುವುದಿಲ್ಲ ಎಂಬ ಕಟುಸತ್ಯ ಅದಕ್ಕೆ ತಿಳಿದಿಲ್ಲ.

ಚರಣ 2 (ಅಜ್ಞಾನದ ಶಿಕ್ಷೆ):
ಆಸೆಯಿಂದ ಅಂಗಡಿಯೊಳಗೆ (ಲೌಕಿಕ ಆಸೆಗಳು) ನುಗ್ಗಿದಾಗ, ಅಲ್ಲಿನವರು ದೊಣ್ಣೆಯಿಂದ ಬಾರಿಸಿದರಂತೆ (ಜೀವನದ ಸಂಕಷ್ಟಗಳು). ಭಗವಂತನನ್ನು ಮರೆತ ಜೀವನ ವ್ಯರ್ಥವಾಗಿ, ಕೊನೆಗೆ ನರಕದ ಪಾಲಾಗುತ್ತದೆಯಲ್ಲಾ ಎಂದು ದಾಸರು ಮರುಗುತ್ತಾರೆ.

ಚರಣ 3 (ಬರಿ ಪಾಂಡಿತ್ಯದ ವ್ಯರ್ಥತೆ):
ವೇದ-ಪುರಾಣಗಳನ್ನು ಓದಿದರೂ ಅದು ಕೇವಲ ಮಾತಿಗೆ ಮಾತ್ರ ಸೀಮಿತವಾಯಿತು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ ಬರಿ 'ಗಾದೆ'ಗಳಂತೆ ಹೇಳಿ ಬಿಟ್ಟಿತು. ಹೀಗೆ ಸರಿಯಾದ ಹಾದಿ ತಪ್ಪಿ ನಡೆದಿದ್ದರಿಂದ ಯಮನ ಬಾಧೆಗೆ (ಮೃತ್ಯುವಿನ ಭಯಕ್ಕೆ) ಗುರಿಯಾಯಿತು.

ಚರಣ 4 (ಜನ್ಮಗಳ ಅಲೆದಾಟ):
ಅನೇಕ ಜನ್ಮಗಳನ್ನು ಎತ್ತಿ ಕೊನೆಗೆ ಶ್ರೇಷ್ಠವಾದ 'ಮಾನವ' ಜನ್ಮವನ್ನೇನೋ ಪಡೆಯಿತು. ಆದರೆ ತನ್ನ ನಿಜವಾದ ಸ್ವರೂಪವನ್ನು ಮರೆತು, ಕಾಡಿನಿಂದ ಕಾಡಿಗೆ ಅಲೆಯುವ ಪ್ರಾಣಿಯಂತೆ ಲೌಕಿಕ ವಿಷಯಗಳಲ್ಲೇ ಅಲೆದಾಡಿ ವ್ಯರ್ಥವಾಯಿತು.

ಚರಣ 5 (ದುರಂತ ಅಂತ್ಯ):
ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಅದಕ್ಕೆ ಬೆಲೆ ತಿಳಿಯದೆ ಹೇಗೆ ಹಾಳು ಮಾಡುತ್ತದೆಯೋ, ಹಾಗೆಯೇ ಮನುಷ್ಯನು ಈ ಅಮೂಲ್ಯವಾದ ಜನ್ಮವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾನೆ. ಶ್ರೀ ರಂಗ ಪುರಂದರವಿಠಲನನ್ನು ಮರೆತಿದ್ದರಿಂದ ಜೀವನದಲ್ಲಿ ಬಹಳ ಅವಮಾನ ಮತ್ತು ಕಷ್ಟಗಳನ್ನು ಅನುಭವಿಸಬೇಕಾಯಿತು.
***

This biting, satirical composition by Sri Purandara Dasa is a "Nindastuti"—a song that uses harsh metaphors to wake the human soul from its spiritual slumber. He uses the vivid imagery of a "Blind Dog" to represent a person who is spiritually ignorant and lost in the chaos of the material world.

Executive Summary
The theme of this song is "The Folly of Materialism." Purandara Dasa compares the human soul to a blind dog that wanders into a busy marketplace (the world). Instead of seeking the "sugar" of divine grace, the dog chases "dry bones" (temporary pleasures). The song warns that without self-realization and devotion to God, a human life—no matter how many scriptures one reads—is as wasted as a precious gem in the hands of a monkey.

Verse-wise Meaning
Refrain (Pallavi):
A blind dog has wandered into the marketplace (Sante). Why did it even come there? It cannot see the path, nor does it know what it is looking for. (This refers to a person entering the world without a spiritual goal).

Verse 1 (False Priorities):
It finds no sweetness in refined sugar (divine chanting), but instead, it delights in biting a dry, tasteless bone (sensual pleasures). It trusts its wife and children to be its ultimate support, forgetting that when the time comes to leave this world, no one will accompany it.

Verse 2 (The Punishment of Ignorance):
In its greed, the dog rushes into a shop (worldly desires), only to be turned back and beaten with a stick (the hardships and pains of life). Having forgotten the Divine, its efforts become futile, and it eventually falls into the depths of "hell" or suffering.

Verse 3 (Empty Scholarship):
The person might have read the Vedas and engaged in philosophical debates, but it was all for show—reduced to mere proverbs (Gaade) without practice. By losing the true path, they become a target for the afflictions of Yama (the God of Death).

Verse 4 (The Cycle of Births):
The soul has taken countless births and finally attained this precious human form. Yet, like an animal wandering from forest to forest, it continues to roam aimlessly, completely forgetting its true identity and its Creator.

Verse 5 (The Tragic End):
Like a precious ruby (Maanikya) in the hands of a monkey (Mangana), who has no idea of its value and eventually loses it, the human wastes this life. By forgetting Ranga Purandara Vithala, the soul suffers great humiliation and distress.
***

ರಾಗ ಪೂರ್ವಿ ಆದಿತಾಳ (raga, taala may differ in audio)

Kurudu naayi taa samtege bantante || pa ||
adu yaatake banto || a.pa.||

Khanda sakkare hitavillavante | khandaa elabu kaddeetante |
hendiru makkala neccitante | kondu hoguvaaga yaarillavante || 1 ||

Naanaa janmavanettitante | maanavanaagi puttitante |
kaanana kaanana tirugitante | taane tannanu maretitante || 2 ||

Mangana kaiyali maanikyadante | haagoo hingoo kaledinte |
rangapurandara viththalana maretitante | bhanga bahala pattitante || 3 ||
***

pallavi

kuruDu nAyi tA santege bandade adu Edake bandO

caraNam 1

gaNDa sakkare hatavillavante gaNDa elubu kaDiditante
heNDira makkaLa neccitante koNDu hOguvAga yArillavante

caraNam 2

bharadi angaDi hokkitante tiruvi doNNeyali ikkidarante
maretarinnu vyarttavante narakadoLage bidditante

caraNam 3

vEda vAdagaLanOditante gAde mADi biTTidante
hAdi tappi naDEdu yamana bAdhege tA guriyAyitante

caraNam 4

nAnA janmavanettitante mAnavanAgi huTTitante
kAnana kAnana tirugitante tAnu tannane mareyitante

caraNam 5

mangaLa kaiya mANikyavante hAngo hIngo kaLedItante
ranga purandara viTTalana maredu bhanga bahaLa paTTitante
***

ಕುರುಡು ನಾಯಿ ಸಂತೆಗೆ ಬಂತಂತೆ, ಅದು ಏತಕೆ ಬಂತೋ.        ಪ.

ಅರ್ಥ.  ಕುರುಡು ನಾಯಿಯೊಂದು ಸಂತೆಗೆ ಬಂದಿತು.  ಆದರೆ ಅದು ಏಕೇ  ಬಂದಿತು ಯಾರಿಗೂ ತಿಳಿಯದ ವಿಷಯವಾಗಿದೆ. 

ಆಧ್ಯಾತ್ಮಿಕ ಅರ್ಥ.    ನಾಯಿ ಅಂದರೆ ಭೂಮಿಗೆ ಬಂದ ಅಜ್ಞಾನಿಯಾದ ಮಾನವ ಜೀವಿ. ಸಂತೆ ಅಂದರೆ ಈ ಸಂಸಾರ.  ಅದೆಷ್ಟೋ ಜೀವರು ಬಂದಿದ್ದಾರೆ.  ಈ ಭೂಲೋಕಕ್ಕೆ ಜೀವರು ಏಕೇ ಬಂದರು ಅದೇ ದೊಡ್ಡ ಪ್ರಶ್ನೆ.  ಉತ್ತರ ಸರಳ. ಜೀವರುಗಳ ಪ್ರಾರಬ್ಧ ಕರ್ಮಗಳಿಗೆ ತಕ್ಕಂತೆ ಪಾಪಗಳನ್ನು ಅನುಭವಿಸಲು ಜೀವರು ಸಂಸಾರವೆಂಬ ಸಂತೆಗೆ ಬಂದಿವೆ. ಪರಮಾತ್ಮನ ಬಗ್ಗೆ ತಿಳಿದುಕೊಳ್ಳದೆ ಅಜ್ಞಾನಿ ಎಂದು ಕರೆಸಿಕೊಂಡು ಕುರುಡು ನಾಯಿ ಎನಿಸಿಕೊಂಡಿವೆ. 

ಖಂಡ ಸಕ್ಕರೆ ಹಿತವಲ್ಲವಂತೆ 
ತುಂಡು ಎಲಬು ಕಡಿದಿತಂತೆ 
ಹೆಂಡಿರ ಮಕ್ಕಳ ನೆಚ್ಚಿತ್ತಂತೆ 
ಕೊಂಡು ಹೋಗುವಾಗ ಯಾರಿಲ್ಲವಂತೆ        . ೧. 

ಅರ್ಥ.    ಭೂಲೋಕಕ್ಕೆ ಬಂದ  ನಾಯಿಗೆ  ಕಲ್ಲು ಸಕ್ಕರೆ ರುಚಿಸುವದಿಲ್ಲ ವಂತೆ. ಆದಕಾರಣ ಎಲುಬಿನ ತುಂಡನ್ನು ಕಡಿದು ತಿಂದಿತು. ಸಂಸಾರದಲ್ಲಿ ತನ್ನ ಹೆಂಡತಿ ಮಕ್ಕಳನ್ನು ಪ್ರೀತಿಯಿಂದ ಮೋಹದಿಂದ ಕಂಡಿತು. ಯಮದೂತರು ಕರೆದು ಕೊಂಡು ಹೋಗುವಾಗ ಅದನ್ನು ಕಾಪಾಡಲು ಯಾರೂ ಇಲ್ಲವಂತೆ. 

ಆಧ್ಯಾತ್ಮಿಕ ಅರ್ಥ. ಭೂಲೋಕದಲ್ಲಿ ಜನಿಸಿದ ನಾಯಿ ಎನಿಸಿಕೊಂಡ ಜೀವನು ಪರಮಾತ್ಮನ ಜ್ಞಾನವಿಲ್ಲದೆ ರಾಜಸ ಮತ್ತು ತಾಮಸ ಗುಣಗಳನ್ನೇ ಮೆಚ್ಚುತ್ತಾನೆ. ಸಾಧು ಜನರ ಹಿತವಾಕ್ಯಗಳು, ಸಾಧನೆಯ ಮಾರ್ಗದರ್ಶನ ಮಾಡುವ ಸಾತ್ವಿಕ ಗುಣವು ಈ ನಾಯಿಗೆ ರುಚಿಸುವದಿಲ್ಲ. ದಾಸರು ಈ ಸಾತ್ವಿಕ ಗುಣವನ್ನೇ ಖಂಡಸಕ್ಕರೆ ಎಂದು ಕರೆದಿರುವರು. ಮುಕ್ತಿ ಸಾಧನೆಯ ಸಕ್ಕರೆ ಬೇಡವಾಗಿ ರಾಜಸ ತಾಮಸ ಗುಣಕ್ಕೆ ತಕ್ಕಂತೆ ಎಲುಬು ಎಂಬ ನಿಷಿದ್ಧ ಪದಾರ್ಥವನ್ನು ತಿನ್ನುತ್ತಾನೆ. 
ಈ ಸಂಸಾರದಲ್ಲಿ ಬಿದ್ದು ಹೆಂಡತಿ ಮಕ್ಕಳೇ ಪ್ರೀತಿಯವರು ಆಗುವರು. ಇವರ ಮೇಲ್ವಿಚಾರಣೆಯಲ್ಲಿ ಜೀವನ ಮನಸ್ಸು ಮುಕ್ತಿ ಸಾಧನೆಗೆ ಕಡೆಗೆ ಹರಿಯುವದಿಲ್ಲ. ಜಗತ್ತಿನ ಮಾಯೆಯಲ್ಲಿ ಸಿಲುಕಿ ಪಾರಮಾರ್ಥಿಕ ಸುಖವನ್ನು ಬಿಟ್ಟು ಲೌಕಿಕದಲ್ಲಿ ದೈಹಿಕ  ಸುಖವನ್ನೇ ಮೆಚ್ಚುವನು.  ಹೆಣ್ಣು, ಹೊನ್ನು, ಮಣ್ಣಿಗಾಗಿ ಜೀವನ ಹಾಲು ಮಾಡಿಕೊಳ್ಳುತ್ತಾನೆ. ತ್ರಿಷಣ ಗಳಿಗೆ ಬಲಿಯಾಗುತ್ತಾನೆ. 
ಇಷ್ಟೆಲ್ಲಾ ಗಳಿಸಿ ಹೆಂಡತಿ ಮಕ್ಕಳು ಬಂಧು ಬಳಗದವರಿಗೆ ಸಹಾಯ ಮಾಡಿದರೂ  ಕೊನೆಗೆ ಮರಣ ಸಮಯದಲ್ಲಿ ಇವನನ್ನು ಯಾರೂ ಕಣ್ಣೆತ್ತಿ ನೋಡುವದಿಲ್ಲ. ಏಕೆಂದರೆ ಮುಪ್ಪಿನ ಕಾಲದಲ್ಲಿ ಇವನಿಂದ ಬಳಗದವರಿಗೆ ಯಾವ ಲಾಭ ಇರುವದಿಲ್ಲ. ಮರಣ ಹೊಂದಿದಮೇಲೆ ಮುಟ್ಟಲೂ  ಹಿಂಜರಿದು ದೂರ ಕೂಡುವರು.  ಯಾರೂ ಬರುವದಿಲ್ಲ.ಅವನ ಹಿಂದೆ ಬರುವದು ಅಂದರೆ ಜೀವದ ಹಿಂದೆ ದೇಹ ಮನದ ಮುಖಾಂತರ ಮಾಡಿದ ಕರ್ಮ ಮಾತ್ರ ಎಂದು ದಾಸರು ವರ್ಣಿಸಿದ್ದಾರೆ.
*******

No comments:

Post a Comment