Friday, 24 December 2021

ಶ್ಲೋಕಗಳು ಕನ್ನಡ kannada shlokas rss

 1. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।

ಬೆಲ್ಲ ಸಕ್ಕರೆಯಾಗು ದೇನದುರ್ಬಲರಿಂಗೆ

ಎಲ್ಲರೊಳಗೊಂದಾಗು ಮಂಕುತಿಮ್ಮ ॥


2. ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು

ನೆನೆಯದಿನ್ನೊಂದನೆಲ್ಲವ ನೀಡುತದರಾ|

ಅನುಸಂಧಿಯಲಿ ಜೀವಭಾರವನು ಮರೆಯುವುದು

ಹನುಮಂತನುಪದೇಶ - ಮಂಕುತಿಮ್ಮ||


3. ನಡೆವುದೊಂದೇ ಭೂಮಿ

ಕುಡಿವುದೊಂದೇ ನೀರು

ಸುಡುವಗ್ನಿಯೊಂದೇ ಇರುತಿರಲು| ಕುಲಗೋತ್ರ

ನಡುವೆ ಎತ್ತಣದು - ಸರ್ವಜ್ಞ||

***

4. ಮಾತಿನಿಂ ನಗೆನುಡಿಯು ಮಾತಿನಿಂ ಹಗೆ

ಹೊಲೆಯು |

ಮಾತಿನಿಂ ಸರ್ವಸಂಪದವು ಲೋಕಕ್ಕೆ |

ಮಾತೇ ಮಾಣಿಕವು ಸರ್ವಜ್ಞ ||

***

6. ಅಕ್ಕಿಯೊಳಗನ್ನವನು ಮೊದಲಾರು ಕಂಡವರು। ಅಕ್ಕರದ ಬರಹಕ್ಕೆ ಮೊದಲಿಗನದಾರು।

ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ।

ದಕ್ಕುವುದೇ ಜಸ ನಿನಗೆ ಮಂಕುತಿಮ್ಮ॥

***

ಶ್ಲೋಕಗಳು:

 1.ಆಗ ಬಾ ಈಗ ಬಾ ಹೋಗಿ ಬಾ ಎನ್ನದೇ, ಆಗಲೇ ಕರೆದು ಕೊಡುವವನ ಧರ್ಮ ಹೊನ್ನಾಗದೇ ಬಿಡದು. ಸರ್ವಜ್ಞ.

2.ವೃಕ್ಷಕ್ಕಲ್ಲ ವೃಕ್ಷದ ಫಲವು ನದಿಯ ನೀರು ನದಿಗಲ್ಲ ಸಂತನ ಬದುಕು ಸಂತನಿಗಲ್ಲ ಅದು ಲೋಕದ ಹಿತಕೆ- ಕಬೀರಾ.

3.ಕದ ತೆರೆದುಸ್ವಾಗತಿಸು ಎಲ್ಲ ಸುವಿಚಾರಗಳ ಮದ ತೊರೆದು ಹದಗೊಳಿಸು ಮನ ಅರಳಲೆಂದು, ಶುದ್ಧದೃಷ್ಟಿಯೊಳಿರಲು ವೃದ್ಧಿಯಾಗದೇ ಬುದ್ಧಿ, ಸಿದ್ಧಿಯಾಗದೇ ಜ್ಞಾನ- ಚಕ್ರಧಾರೀ.

ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಹೊಲೆಯು |

ಮಾತಿನಿಂ ಸರ್ವಸಂಪದವು ಲೋಕಕ್ಕೆ |

ಮಾತೇ ಮಾಣಿಕವು ಸರ್ವಜ್ಞ ||

ಅಕ್ಕಿಯೊಳಗನ್ನವನು ಮೊದಲಾರು ಕಂಡವರು। 

ಅಕ್ಕರದ ಬರಹಕ್ಕೆ ಮೊದಲಿಗನದಾರು।

ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ।

ದಕ್ಕುವುದೇ ಜಸ ನಿನಗೆ ಮಂಕುತಿಮ್ಮ॥


ಇತರರ ದೋಷವ ನೋಡುತ ಜನರು

ಹಾಸ್ಯವ ಗೈಯುವರಲ್ಲ

ತಮ್ಮೊಳಗಿಹುದೈ ಸಾಸಿರ ದೋಷ ಕಾಣುವುದೇ ಇಲ್ಲಾ - ಕಬೀರಾ ॥

*

***


ಅಮೃತವಚನ

05.05.24 - 11.05.24

ರಾಷ್ಟ್ರವೇ ನಮ್ಮ ದೇವರು ರಾಷ್ಟ್ರೀಯತೆಯೇ ನಮ್ಮ ಧರ್ಮ ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ .

-ಯೋಗಿ ಅರವಿಂದರು 


12.05.24 - 18.05.24


ತಮ್ಮ ತಮ್ಮ ಕೆಲಸವನ್ನು ಎಲ್ಲರೂ ಮಾಡುತ್ತಾರೆ ಆದರೆ ಇನ್ನೊಬ್ಬರ ಕೆಲಸವನ್ನು ಮಾಡುವುದರಿಂದ ಎಂತಹ ಆನಂದ ಸುಖ ಸಿಗುತ್ತದೆ ಎಂಬುದನ್ನು ಅಂತಹ ಕೆಲಸ ಮಾಡಿಯೇ ತಿಳಿದುಕೊಳ್ಳಬೇಕು 

-ಸಾನೆ ಗುರೂಜಿ 


19.05.24 - 25.05.24


ಮತ್ತೊಬ್ಬನಿಗೆ ಯಾವುದು ಒಳ್ಳೆಯದು ಅದನ್ನು ನಾನು ಮಾಡುವುದರಿಂದ ಮಾತ್ರ ನನ್ನ ಒಳ್ಳೆಯದನ್ನು ಸಾಧಿಸಬಹುದು. 

-ಸ್ವಾಮಿ ವಿವೇಕಾನಂದ 


19.05.24 - 25.05.24


ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನು ಸಾಧಿಸಲಾಗದು ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ,ಸೋತರೆ ಅನುಭವ.

-ಸ್ವಾಮಿ ವಿವೇಕಾನಂದ



**


7.





panchanga

Kaliyubdha 5125

Sri Shalivahana Shakha 1946

Sri Shobhakrut nama samvatsara 

Uttarayana

Hemanta Rutu

Pushya masa

Shukla paksha

Trayodashi tithi

Aridra nakshatra

Mangalavara

Shubha raatri

***



No comments:

Post a Comment