Saturday, 1 May 2021

ಹರಿಕಥಾಮೃತಸಾರ ಸರಸ ಸುಗ್ರಂಥವ ankita shyamasundara

 ..

ರಾಗ : ಆರಭಿ  ತಾಳ ಅಟ್ಟ 


ಹರಿಕಥಾಮೃತಸಾರ ಸರಸ 

ಸುಗ್ರಂಥವ ।

ಧರಣಿ ಸುರರಿಗಲ್ಲದೆ 

ದುರಳಸಾಷಂಡಿಗಳರಿತು 

ಇದರ ಮರ್ಮ ।

ಹರುಷಿತರಾಗುವರೇ  ।। ಪಲ್ಲವಿ ।


ಹಿಮ ಮಯೂಖನ 

ನೋಡಿ ಕುಮುದ ।

ಅರಳುವುದೇ? ।।

ಯಮಿಜನರಂದದಿ 

ದಿನಮಣಿಯು ದಯದಿ ।

ತಿಮಿರರ್ಘ್ಯ ಕೊಡ 

ಬಲ್ಲದೆ? ।। ಚರಣ ।।


ಚಿನ್ನದಾ ಭರಣಗಳಿಡಲು 

ದಾಸಿಯು ದೇವ ।

ಕನ್ನಿಕೆಯಾಗುವಳೇ ? ।

ಮನ್ನಣೆಯರಿಯದ 

ಮನುಜರ ಶಿರ 

।ಪುಣ್ಯ ಪುರುಷ-

ರಿಗೆರಗುವದೇ ? ।। ಚರಣ ।।


ಗಂಧವಾಹನ ಮತ 

ಪೊಂದದವರಿಗೆ ।

ಯಮ ಬಂಧ 

ತಪ್ಪುವುದೇ? ।

ಮಂದಮತಿಗೆ ಶ್ಯಾಮ-

ಸುಂದರವಿಠಲನ ।

ಮಂದಿರ ದೊರಕುವುದೇ ? ।। ಚರಣ ।।

****

No comments:

Post a Comment