Saturday, 1 May 2021

ಶ್ರೀರಂಗ ಶ್ಯಾಮಲ ಕೋಮಲಾಂಗ ankita helavana katte

 ರಾಗ : ಸಾವೇರಿ ತಾಳ : ಆದಿ


ಶ್ರೀರಂಗ ಶ್ಯಾಮಲ ಕೋಮಲಾಂಗ ।

ಕ್ರೂರ ರಕ್ಕಸ ಕುಲ ನಿವಾರಣ ।

ನಾರದಾದಿ ವಂದ್ಯನೇ ।। ಪಲ್ಲವಿ ।।


ಮಾಣಿಕ್ಯ ಮೌಕ್ತಿಕ ಹಾರ ಧೀರ ।

ವಾಣೀಪತಿ ಪಿತ ವನಜ ನೇತ್ರನೇ ।

ವಾಣಿ ಬಾಹೊತ್ತಂಡದಿ ।।

ಚಾಣೂರ ಮರ್ದನ ಚಿದಾನಂದ ।

ವೇಣುನಾದ ಪ್ರಿಯ ದೇವನೇ ।

ಇನ ಕುಲಾಂಬುಧಿ ಚಂದ್ರನೇ ।। ಚರಣ ।।


ಅಕ್ರೂರ ಅಂಬರೀಷ ವರದ ।

ನಕ್ರ ಬಂಧನ ನಾಗಸ್ತ್ರೀ ರಕ್ಷಕ ।

ಚಕ್ರಧರ ಮುಕುಂದನೇ ।।

ರುಕ್ಮಿಣೀ ವಲ್ಲಭ ವಾಸುದೇವ ।

ಶಕ್ರ ಶಶಿಧರ ಶೇಷ ಸನ್ನುತ ।

ಸಕಲ ಲೋಕೋತ್ಪತ್ಯನೇ ।। ಚರಣ ।।


ನಿತ್ಯಾನಂದನೆ ನಿಗಮಗೋಚರನೆ ।

ಸತ್ಯಭಾಮೆ ಶ್ರೀ ಮನೋಹರ ।

ಮದನ ಶ್ರೀ ಗೋಪಾಲನೆ ।।

ಭಕ್ತವತ್ಸಲ ಭಯ ನಿವಾರಣ ।

ಕರ್ತು ಹೆಳವನಕಟ್ಟೆ ರಂಗನೇ ಕೃಪಾಂಗನೆ ।। ಚರಣ ।।

***


Sriranga syamala komalanga |

Krura rakkasa kula nivarana |

Naradadi vandyane || pa ||


Manikya mauktika hara dhira |

Vanipati pita vanaja netrane |

Vani bahottandadi ||

Canura mardana cidananda |

Venunada priya devane |

Ina kulambudhi chandrane || 1 ||


Akrura ambarisha varada |

Nakra bandhana nagastri rakshaka |

Chakradhara mukundane ||

Rukmini vallaba vasudeva |

Sakra sasidhara sesha sannuta |

Sakala lokotpatyane || 2 ||



Nityanandane nigamagocarane |

Satyabame sri manohara |

Madana sri gopalane ||

Baktavatsala Baya nivarana |

Kartu helavanakatte

Ramgane krupangane || 3 ||

***


ಶ್ರೀರಂಗ ಶ್ಯಾಮಲಕೋಮಲಾಂಗ
ಕ್ರೂರರಕ್ಕಸಕುಲನಿವಾರಣ ನಾರದಾದಿವಂದ್ಯನೆ ಪ.

ಮಾಣಿಕ್ಯ ಮೌಕ್ತಿಕಹಾರ ಧೀರ ವಾಣೀಪತಿಪಿತ ವನಜನೇತ್ರನೆ
ವಾಣಿಬಾಹೋತ್ತಂಡನ ಚಾಣೂರಮರ್ದನ ಚಿದಾನಂದ
ವೇಣುನಾದಪ್ರಿಯದೇವನೆ ಇನಕುಲಾಂಬುಧಿಚಂದ್ರನೆ 1

ಅಕ್ರೂರ ಅಂಬರೀಷವರದ ನಕ್ರಬಂಧನ ನಾಗಸ್ತ್ರೀರಕ್ಷಕ
ಚಕ್ರಧರ ಮುಕುಂದನೆ ರುಕ್ಮಿಣೀವಲ್ಲಭ ವಾಸುದೇವ
ಶಕ್ರಶಶಿಧರಶೇಷಸನ್ನುತ ಸಕಲಲೋಕೋತ್ಪತ್ಯನೆ 2

ನಿತ್ಯಾನಂದನೆ ನಿಗಮಗೋಚರನೆ
ಸತ್ಯಭಾಮೆ ಶ್ರೀಮನೋಹರ ಮದನ ಶ್ರೀಗೋಪಾಲನೆ
ಭಕ್ತವತ್ಸಲ ಭಯನಿವಾರಣ ಕರ್ತು ಹೆಳವನಟ್ಟೆರಂಗನೆ ಕೃಪಾಂಗನೆ3

****

No comments:

Post a Comment