ರಾಗ: ಶಂಕರಾಭರಣ ತಾಳ: ಆದಿ
ಗುರುಗಳ ಚರಣವ ನಿರುತದಿ ಭಜಿಸಲು
ದುರಿತರಾಶಿಗಳು ಪರಿಹರವು ಪ
ಗುರುಗಳ ಚರಣಕ್ಕೆರಗಿ ನಮಿಸಲು
ಪರಿಪರಿ ಕ್ಲೇಶವು ಪರಿಹರವು ಅ. ಪ
ತುಂಗಾನದಿಯಲಿ ಸ್ನಾನವುಮಾಡಲು
ಅಗಣಿತಪಾಪವು ಪರಿಹರವು
ಮಂಗಳಮಹಿಮರ ನಾಮವ ಪಾಡಲು
ರೋಗವ್ಯಾಧಿಗಳು ಪರಿಹರವು 1
ಉದಯದೊಳೆದ್ದು ಗುರುಗಳಸ್ಮರಿಸಲು
ಕುಂದುಕೊರತೆಗಳು ಪರಿಹರವು
ಹಿಂದಿನಜನುಮದ ಪಾಪಗಳೆಲ್ಲವು
ಸದ್ದುಮಾಡದೆ ತೊಲಗುವುವು 2
ಗುರುಗಳ ಕರುಣದ ಭಾಗ್ಯವ ಪಡೆಯದೆ
ಪರಿತಪಿಸುವ ಭಕುತರ ಪೊರೆವುದಕೆ
ಸ್ಮರಿಸುತ ಜಾನಕಿರಮಣನ ಪಾದವ
ಭರದಿಂ ಬರುವರು ಭಕುತರಆಲಯಕೆ 3
***
No comments:
Post a Comment