Wednesday, 1 September 2021

ಪಾಲಿಸೆನ್ನ ಮಾತೆ ಕರುಣದಿ ಪಾಲಾಂಬುಧಿ ಜಾತೆ ankita shyamasundara

 ..

ಪಾಲಿಸೆನ್ನ ಮಾತೆ ಕರುಣದಿ

ಪಾಲಾಂಬುಧಿ ಜಾತೆ ಪ


ಕಾಲಕಾಲಕೆ ಕಮಲಾಲಯೆ ಗೋಪಿಯ

ಬಾಲನಾಳುಗಳ ಊಳಿಗವಿತ್ತು ಅ.ಪ


ಜಾನಕಿಶುಭಗಾತ್ರೆ ನಮಿಸುವೆ |

ಮಾನಿತೆ ಚರಿತ್ರೆ

ಸಾನುರಾಗದಿ ತವ ಸೂನುವೆನಿಪ ಪವ

ಮಾನಸುಶಾಸ್ತ್ರದ ಜ್ಞಾನವಿತ್ತು ಸದಾ 1


ಶಂಭು ದೃಹಿಣಿ ವಿನುತೆ ತ್ರೈಜಗ

ದಂಬೆ ಸುಗುಣ ಭರಿತೆ |

ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದ

ಯಾಂಬುಜದೊಳಿಹ ಬಿಂಬನ ತೋರಿ 2


ಪ್ರೇಮದಿಂದ ನೋಡೆ ಮನ್ಮನ |

ಧಾಮದಿ ನಲಿದಾಡಿ |

ಕಾಮಿನಿಮಣೀ ಗಜಗಾಮಿನಿ ಗೋಮಿನಿ

ಶಾಮಸುಂದರನ ವಾಮಾಂಗಿಯೆ ಸದಾ 3

***


No comments:

Post a Comment