..
ಪಾಲಿಸೆನ್ನನು ನಿರುತ ಪವನರಾಯ |
ಫಾಲಲೋಚನ ನಮಿತ ಪಾವನ್ನಕಾಯ ಪ
ಅಭಿನಮಿಸಿ ಭಜಿಪರಿಗೆ ಉಭಯ ಕಷ್ಟವ ಕಳೆದಿ |
ಶುಭವಿಭವನೆಗರಿದು ಪೊರಿಯುವಲ್ಲಿ |
ಪ್ರಭುವನಧಿ ನಿನ್ನಂಥ ಪ್ರಬಲ ಪ್ರಭುಗಳ ಕಾಣಿ
ವಿಬುಧ ಸನ್ನುತ ಮಹಿಮ ಅಭಿಗಾರಪುರವಾಸ 1
ನಿನ್ನನೆ ನೆರೆನಂಬಿ ನಿನ್ನನೆ ಧ್ಯಾನಿಸುತ ನಿನ್ನ
ಸನ್ನಿಧಿಯಲ್ಲಿ ನೆಲೆಸಿಪ್ಪೆ ನಾ | ಬಿನ್ನಪವ ಲಾಲಿಸಿ
ಬನ್ನಗಳ ಪರಿಹರಿಸಿ ನಿನ್ನೊಡೆಯನಂಘ್ರಿಯಲಿ
ಘನ್ನ ಭಕುತಿಯ ಕೊಟ್ಟು 2
ಭೂಮಿಜಾತೆಯ ರಮಣ ಶಾಮಸುಂದರ | ಬದರಿ
ಧಾಮ ಮೂರುತಿತ್ರಯ ಪ್ರೇಮ ಪಾತ್ರ |
ಕಾಮಿತಪ್ರದ ಹನುಮ ಭೀಮ ಗುರುಸುಖತೀರ್ಥ
ಯಾಮ ಯಾಮಕೆ ಹರಿಯ ನಾಮ ಜಿಂಹ್ವೆಯೊಳಿಟ್ಟು 3
***
No comments:
Post a Comment