Wednesday, 1 September 2021

ಇದೇ ಇದೇ ವಸ್ತು ಸನಾತನ ಒಂದೆ ಆದಿ ಅನಾದಿಯಾಧಾರಿದರಿಂದೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ಇದೇ ವಸ್ತು ಸನಾತನ ಒಂದೆ ಆದಿ ಅನಾದಿಯಾಧಾರಿದರಿಂದೆ P ವೇದವಂದಿತ ವಸ್ತುವಿಮಲಾ ಸಾಧುಜನರ ಸಾಧನೆಗನುಕೂಲಾ 1 
ಜ್ಞಾನವಿಜ್ಞಾನದ ನಿಜಸಾರಾ ಅನುಭವಕನುಭವಾಗುವ ಸುಆಗರಾ 2 
ಸಗುಣ ನಿರ್ಗುಣಕಿದೆ ಮೂಲ ಭಕ್ತಜನರು ಮಾಡುವುದು ಪ್ರತಿಪಾಲಾ 3 
ದೇವಾದಿಗಳು ಮಾಡುವರಿದೇ ಧ್ಯಾನಾ ಭವಹರ ಗುರುಮೂರುತಿ ನಿಧಾನಾ 4 
ಇಹಪರ ಸುಖದೋರುದಿದೆ ನೀಟ ಮಹಿಪತಿಸ್ವಾಮಿ ಶ್ರೀಗುರು ಮಣಿಮುಗುಟ5
***

No comments:

Post a Comment