Monday, 6 September 2021

ಯೋಗಿ ಬಾರೊ ನೀ ತ್ಯಾಗಿ ಬಾರೊ ankita jagannatha vittala

 ರಾಗ: ರಾಗಮಾಲಿಕೆ ತಾಳ: ಆದಿ

ರಾಗ: ಭೀಮ್‍ಪಲಾಸ್

ಯೋಗಿ ಬಾರೊ ನೀ ತ್ಯಾಗಿ ಬಾರೊ

ಸಾಗಿ ಬಾರೊ ಯೋಗಿಗಳೊಡೆಯ ರಾಘವೇಂದ್ರ

ಶ್ರುತಿಪುರಾಣಗಳರ್ಥ ಸೂಕ್ಷ್ಮದಿಂದ ತಿಳುಹಿದನೆ

ಅತಿ ಹರುಷದಲಿ ಆತ್ಮಜ್ಞಾನಿ

ಅತಿ ಹರುಷದಲಿ ಆತ್ಮಜ್ಞಾನಿ ರಾಘವೇಂದ್ರ

ಪ್ರತಿಗಾಣೆನಿನ್ನು ಕ್ಷಿತಿಯೊಳಗೆ ರಾಯ ಬಾರೊ 1

ರಾಗ: ಕಲ್ಯಾಣಿ

ಅದ್ವೈತಮತವೆಂಬ ಅರೆಬಂಡೆಯ ಮೇಲೆ

ಮಧ್ವಾಚಾರ್ಯಮತವೆಂಬ ಕಣಕವ

ಮಧ್ವಾಚಾರ್ಯಮತವೆಂಬ ಕಣಕವ ಕುಟ್ಟಿದನು

ಸಿದ್ಧಾಂತವನಕೇಳಿ ಶ್ರೀ ರಾಘವೇಂದ್ರ 2

ರಾಗ: ಪುನ್ನಾಗವರಾಳಿ

ರಾಮನ ಚರಣವ ಪ್ರೇಮದಿಂದಲಿ ಭಜಿಸಿ

ಕಾಮಿತಫಲಗಳ ಕೊಡುತಿಪ್ಪ

ಕಾಮಿತಫಲಗಳ ಕೊಡುತಿಪ್ಪ ರಾಘವೇಂದ್ರ

ಶ್ರೀಮಂತನೀನಹುದು ಅಷ್ಟದಿಕ್ಕಿನಲಿ 3

ರಾಗ: ಸಾರಂಗ

ಮಾರುತಿಮತವೆಂಬ ವಾರಿಧಿಚಂದ್ರ

ಕಾರುಣ್ಯದಿಂದಲಿ ಕಾಮಿತವೀವ

ಕಾರುಣ್ಯದಿಂದಲಿ ಕಾಮಿತವೀವ ಉ-

ದಾರಿ ನೀನಹುದೊ ಶ್ರೀ ರಾಘವೇಂದ್ರ ಜೋ ಜೋ 4

ರಾಗ: ಮಾಯಾಮಾಳವಗೌಳ

ಸಂಕರನ ಮತವೆಂಬೊ ಸದ್ದಡಗಿಸಿದವನೆ

ಪಂಕಜನಾಭನ ಪಾದಸೇವಕನೆ

ಪಂಕಜನಾಭನ ಪಾದಸೇವಕನೆ

ಅಂಕಿತದಿಂದಲಿ ದಂತಿ ರಾಘವೇಂದ್ರ ಕೋಲು ಕೋಲೆನ್ನಿರೆ 5

ರಾಗ: ಆನಂದಭೈರವಿ

ಎಷ್ಟು ವರ್ಣಿಸುವೆ ಯತಿಶಿರೋಮಣಿರನ್ನ

ಕಷ್ಟಪಡಿಸುವ ದುಷ್ಕರ್ಮ

ಕಷ್ಟಪಡಿಸುವ ದುಷ್ಕರ್ಮ ಬಿಡಿಸುವ

ಸೃಷ್ಟಿಯೊಳಗೆ ಕಾಣೆನಿನ್ನು 6

ರಾಗ: ಸುರಟಿ-ಮಂಗಳಂ

ಘನಯತಿ ಶಿರೋಮಣಿ ಕೇಳ್ದಿದನು

ಅನುದಿನವು ಸಕಲ ಸಂಪದವಿತ್ತು ಜ-

ಗನ್ನಾಥವಿಠಲನಂಘ್ರಿಗಳ ತೋರಿಸುವರು

ಜಯ ಮಂಗಳಂ ನಿತ್ಯ ಶುಭ ಮಂಗಳಂ 7

***


No comments:

Post a Comment