Showing posts with label ಇನ್ನೇನು ಭಯವಿಲ್ಲನಿನಗೆ ಘನ್ನಗುರುವರ ಪಾದ ಭಜಿಸೊ ಮನದೊಳಗೆ gurujagannatha vittala. Show all posts
Showing posts with label ಇನ್ನೇನು ಭಯವಿಲ್ಲನಿನಗೆ ಘನ್ನಗುರುವರ ಪಾದ ಭಜಿಸೊ ಮನದೊಳಗೆ gurujagannatha vittala. Show all posts

Wednesday 1 September 2021

ಇನ್ನೇನು ಭಯವಿಲ್ಲನಿನಗೆ ಘನ್ನಗುರುವರ ಪಾದ ಭಜಿಸೊ ಮನದೊಳಗೆ ankita gurujagannatha vittala

..

ಇನ್ನೇನು ಭಯವಿಲ್ಲನಿನಗೆ

ಘನ್ನಗುರುವರ ಪಾದ ಭಜಿಸೊ ಮನದೊಳಗೆ ಪ


ಬನ್ನಗೊಳಿಸುವಾ ವ್ಯಾಧಿ

ಮುನ್ನೆ ಬಾರದೋ ಮಗುವೇ ಅ.ಪ

ಆವ ಜನ್ಮದ ಕರ್ಮ ಶೇಷದಲಿಂದ

ಈ ವಿಧದ ವ್ಯಾಧಿ ಸಂಭವಿಸಿತಲ್ಲಾ

ಕೋವಿದೋತ್ತಮರ ಪಾದ ಸೇವೆ ಸತ್ಕಾರದಿಂದಲೇ

ತಾವಕÀನು ನೀನೆಂದು ಗುರುರಾಯ ಪೊರೆವಾ 1


ಏನು ಕರುಣವೊ ಗುರುವರಗೆ ನಿನ್ನಲಿ

ನೀನೇನು ಧನ್ಯನೋ ಈ ಲೋಕದಲ್ಲೀ

ದೀನಭಾವವನೋಡಿ ದೀನವತ್ಸಲಬಂದು

ತಾನೆ ಕರುಣದಿ ಪೊರೆದಮೇಲೇ2


ಅರಿಯದಿಹ ನರರಿಗಾಶ್ಚರ್ಯ ತೋರಲೋಸುಗದಿ

ಮರೆಯದಂತೆ ಮನಕೆ ಕುರುಹು ಮಾಡಿ

ಧರೆಯೊಳಗೀ ಗುರುವರಗೆ ಸರಿಯಿಲ್ಲ

ಗುರುಜಗನ್ನಾಥ ವಿಠಲ ತಾನೇ ಬಲ್ಲಾ 3

***