RSS song .
ಹೃದಯವನರಳಿಸಿ ಜಗವನೆ ಬೆಳಗುವ
ಸಂಕಲ್ಪಗಳವತರಿಸುತಿವೆ
ಸಂಕ್ರಮಣಕೆ ತಹತಹಿಸುತಿವೆ ||ಪ||
ಶೋಧಿಸಿ ಸೋಲಿನ ಮೂಲಗಳ
ಭೇದಿಸಿ ನೂರು ಸವಾಲುಗಳ
ಛೇದಿಸಿ ಛಲವ ಪ್ರಚೋದಿಸಿ ಬಲವ
ಸಾಧಿಸಿ ತರುವೆವು ಜಯದೊಲವ ||೧||
ಸಮರಸತೆಯ ಚಿರ ಸಂದೇಶ
ಬಾಳಿದ ಹಿರಿಯರ ಆದರ್ಶ
ಮರಳಲಿ ಧರೆಗೆ ಕಾಲದ ಕರೆಗೆ
ಕರಗಲಿ ಭ್ರಮೆಯ ಕರಾಳ ಹೊಗೆ ||೨||
ಪುಟಿದೇಳಲಿ ನೆಲದಭಿಮಾನ
ಪುಟಗೊಳ್ಳಲಿ ತಾರುಣ್ಯಧನ
ರಕ್ತದ ಕಣಕಣ ಸುರಿಯೆ ಸಮರ್ಪಣ
ಶಕ್ತಗೊಳಲಿ ಸುತ ಜಾಗರಣ ||೩||
ತಾಯಿ ಭಾರತಿಯ ಸಂಮಾನ
ಮಾನವೀಯ ಭಾವೋತ್ಥಾನ
ಸತ್ಯದ ಮನನ ಧರ್ಮಾಚರಣ
ವೀರರಿಗಿದು ಪಂಥಾಹ್ವಾನ ||೪||
***
hRudayavanaraLisi jagavane beLaguva
saMkalpagaLavatarisutive
saMkramaNake tahatahisutive ||pa||
SOdhisi sOlina mUlagaLa
BEdisi nUru savAlugaLa
CEdisi Calava pracOdisi balava
sAdhisi taruvevu jayadolava ||1||
samarasateya cira saMdESa
bALida hiriyara AdarSa
maraLali dharege kAlada karege
karagali Brameya karALa hoge ||2||
puTidELali neladaBimAna
puTagoLLali tAruNyadhana
raktada kaNakaNa suriye samarpaNa
SaktagoLali suta jAgaraNa ||3||
tAyi BAratiya saMmAna
mAnavIya BAvOtthAna
satyada manana dharmAcaraNa
vIrarigidu paMthAhvAna ||4||
***