..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು
ಕಟ್ಟಳೆ ನಿನ್ನದೆಂತೊ ಪ.
ನಷ್ಟಗೈಸುವುದಿನ್ನು ಕಷ್ಟಪಡಿಸಲಿಬ್ಯಾಡ
ಇಷ್ಟ ಕೃಷ್ಣಾರ್ಯನೆ ಅ.ಪ
ಪುಟ್ಟಿದಾ ಮೊದಲಾಗಿ ನಷ್ಟತನವನೆ ಹೊಂದಿ
ದುಷ್ಟರೊಳು ಶ್ರೇಷ್ಠನಾದೆ
ಎಷ್ಟುದಿನ ಇದರಂತೆ ಇಟ್ಟಿರುವೆಯೊ ಗುರುವೆ
ಇಷ್ಟೇವೆ ಎನ್ನ ಯೋಗ್ಯತೆಯು 1
ಪಾಪಿ ವಿಷಯ ಜ್ವಾಲೆಯು ಕುಪಿತದಿಂದೆನ್ನ
ತಪಿಸಿ ಬೇಯಿಸುತಿದೆ
ಕೃಪೆಯೆಂಬ ಮಳೆಗರೆದು ಉಪಶಮನವನೆ ಮಾಡು
ಆಪದ್ಭಾಂಧವನಲ್ಲವೇ ಗುರುವೆ2
ಪಾಪಕಾರ್ಯರತನ ಪಾಪಿ ಎಂದೆನಿಸದೆ | ಜನರಿಂದ
ತಪಸಿ ಎಂದೆನಿಸುವುದ್ಯಾತಕೆ
ಭೂಪ ವಿಜಯ ರಾಮಚಂದ್ರವಿಠಲನ
ಆ ಪಾದ ಪದುಮವ ನಂಬಿಹ ಗುರುವೆ 3
***