Showing posts with label ವ್ಯರ್ಥವಾಗೊದೂ ಜನ್ಮ ಸಾರ್ಥಕಾಗದೊ ಭಕ್ತಿ ಭಾವ bheemesha krishna VYARTHAVAAGODU JANMA SAARTHAKAAGADO BHAKTI BHAAVA. Show all posts
Showing posts with label ವ್ಯರ್ಥವಾಗೊದೂ ಜನ್ಮ ಸಾರ್ಥಕಾಗದೊ ಭಕ್ತಿ ಭಾವ bheemesha krishna VYARTHAVAAGODU JANMA SAARTHAKAAGADO BHAKTI BHAAVA. Show all posts

Sunday, 5 December 2021

ವ್ಯರ್ಥವಾಗೊದೂ ಜನ್ಮ ಸಾರ್ಥಕಾಗದೊ ಭಕ್ತಿ ಭಾವ ankita bheemesha krishna VYARTHAVAAGODU JANMA SAARTHAKAAGADO BHAKTI BHAAVA

ವ್ಯರ್ಥವಾಗೊದೂ ಜನ್ಮ ಸಾರ್ಥಕಾಗದೊ

ಭಕ್ತಿ ಭಾವದಿಂದ ಪುರುಷೋತ್ತಮನ ಪೂಜಿಸದ ಜನ್ಮ ಪ

ಪರಮ ಶ್ರೇಷ್ಠಜನ್ಮದಿ ಬಂದು ಪರಮ ಭಕುತಿಯಿಂದಲೀಗ

ಪರಮಾತ್ಮನ್ನ ಪಾದವ ಭಜಿಸದೆ ಪಾಮರನಾಗಿ ಕಳೆವೋ ಜನ್ಮ 1

ಲಕ್ಷ್ಯ ಇಟ್ಟಧೋಕ್ಷಜ ನಿನ್ನನುಗ್ರಹ ಅಪÉೀಕ್ಷಿಸದಲೆ

ಲಕ್ಷ್ಮೀಪತಿಯ ಪಾದವನ್ನಲಕ್ಷ್ಯ ಮಾಡದವನ ಜನ್ಮ 2

ಪÀಂಚ ಇಂದ್ರಿಯಗಳನು ಜಯಿಸಿ ಸಂಚಿತಾದಿ ಕರ್ಮ ಕಳೆದು

ಪಂಚಮುಖನ ಪ್ರಿಯನ ನಾಮ ಮುಂಚೆ ನೆನೆಯದವನ ಜನ್ಮ 3

ನಿತ್ಯ ನಿನ್ನ ನಾಮ ಬಿಟ್ಟನಿತ್ಯ ಮಾರ್ಗ ಹಿಡಿದು ಮುಂದೆ

ಕೆಟ್ಟು ಹೋಗೋದಕ್ಕೆ ಒಡಂಬಟ್ಟು ಹರಿಯ ಬಿಟ್ಟ ಜನ್ಮ 4

ಏಸುಏಸು ಜನ್ಮದಲ್ಲಿ ಬ್ಯಾಸರದಲೆ ಸಲಹುತಿಹ ಭೀ-

ಮೇಶ ಕೃಷ್ಣನಂಘ್ರಿಗಳನು ದರ್ಶನ ಮಾಡದವನ ಜನ್ಮ 5

***