Sunday, 5 December 2021

ವ್ಯರ್ಥವಾಗೊದೊ ಜನ್ಮ ಸಾರ್ಥಕಾಗದೊ ಭಕ್ತಿ ಭಾವ ankita bheemesha krishna VYARTHAVAAGODU JANMA SAARTHAKAAGADO BHAKTI BHAAVA


ವ್ಯರ್ಥವಾಗೊದೂ ಜನ್ಮ ಸಾರ್ಥಕಾಗದೊ

ಭಕ್ತಿ ಭಾವದಿಂದ ಪುರುಷೋತ್ತಮನ ಪೂಜಿಸದ ಜನ್ಮ ಪ


ಪರಮ ಶ್ರೇಷ್ಠಜನ್ಮದಿ ಬಂದು ಪರಮ ಭಕುತಿಯಿಂದಲೀಗ

ಪರಮಾತ್ಮನ್ನ ಪಾದವ ಭಜಿಸದೆ ಪಾಮರನಾಗಿ ಕಳೆವೋ ಜನ್ಮ 1


ಲಕ್ಷ್ಯ ಇಟ್ಟಧೋಕ್ಷಜ ನಿನ್ನನುಗ್ರಹ ಅಪÉೀಕ್ಷಿಸದಲೆ

ಲಕ್ಷ್ಮೀಪತಿಯ ಪಾದವನ್ನಲಕ್ಷ್ಯ ಮಾಡದವನ ಜನ್ಮ 2


ಪÀಂಚ ಇಂದ್ರಿಯಗಳನು ಜಯಿಸಿ ಸಂಚಿತಾದಿ ಕರ್ಮ ಕಳೆದು

ಪಂಚಮುಖನ ಪ್ರಿಯನ ನಾಮ ಮುಂಚೆ ನೆನೆಯದವನ ಜನ್ಮ 3


ನಿತ್ಯ ನಿನ್ನ ನಾಮ ಬಿಟ್ಟನಿತ್ಯ ಮಾರ್ಗ ಹಿಡಿದು ಮುಂದೆ

ಕೆಟ್ಟು ಹೋಗೋದಕ್ಕೆ ಒಡಂಬಟ್ಟು ಹರಿಯ ಬಿಟ್ಟ ಜನ್ಮ 4


ಏಸುಏಸು ಜನ್ಮದಲ್ಲಿ ಬ್ಯಾಸರದಲೆ ಸಲಹುತಿಹ ಭೀ-

ಮೇಶ ಕೃಷ್ಣನಂಘ್ರಿಗಳನು ದರ್ಶನ ಮಾಡದವನ ಜನ್ಮ 5

***

ರಾಗ - : ತಾಳ -


ವ್ಯರ್ಥವಾಗೊದೊ ಜನ್ಮ ಸಾರ್ಥಕಾಗದೊ

ಭಕ್ತಿ ಭಾವದಿಂದ ಪುರುಷೋತ್ತಮನ ಪೂಜಿಸದ ಜನ್ಮ ll ಪ ll


ಪರಮ ಶ್ರೇಷ್ಠಜನ್ಮದಿ ಬಂದು ಪರಮ ಭಕುತಿಯಿಂದಲೀಗ

ಪರಮಾತ್ಮನ್ನ ಪಾದವ ಭಜಿಸದೆ ಪಾಮರನಾಗಿ ಕಳೆವೋ ಜನ್ಮ ll 1 ll


ಲಕ್ಷ್ಯ ಇಟ್ಟಧೋಕ್ಷಜ ನಿನ್ನನುಗ್ರಹ ಅಪೇಕ್ಷಿಸದಲೆ

ಲಕ್ಷ್ಮೀಪತಿಯ ಪಾದವನ್ನಲಕ್ಷ್ಯ ಮಾಡಿದವನ ಜನ್ಮ ll 2 ll


ಪಂಚ ಇಂದ್ರಿಯಂಗಳನು ಜಯಿಸಿ ಸಂಚಿತಾದಿ ಕರ್ಮ ಕಳೆದು

ಪಂಚಮುಖನ ಪ್ರಿಯನ ನಾಮ ಮುಂಚೆ ನೆನೆಯದವನ ಜನ್ಮ ll 3 ll


ನಿತ್ಯ ನಿನ್ನ ನಾಮ ಬಿಟ್ಟನಿತ್ಯ ಮಾರ್ಗ ಹಿಡಿದು ಮುಂದೆ 

ಕೆಟ್ಟು ಹೋಗೋದಕ್ಕೆ ಒಡಂಬಟ್ಟು ಹರಿಯ ಬಿಟ್ಟ ಜನ್ಮ ll 4 ll


ಏಸುಏಸು ಜನ್ಮದಲ್ಲಿ ಬ್ಯಾಸರದಲೆ ಸಲಹುತಿಹ ಭೀ-

ಮೇಶ ಕೃಷ್ಣನಂಘ್ರಗಳನು ದರ್ಶನ ಮಾಡದವನ ಜನ್ಮ ll 5 ll

***



No comments:

Post a Comment