ಕಾಖಂಡಕಿ ಶ್ರೀ ಮಹಿಪತಿರಾಯರು
ಭಜಿಸು ಮನವೆ ಭಜಿಸು ಮನವೆ ಅಜ ಸುರ ಮುನಿ ವಂದಿತ ಪಾದ ಪೂಜಿಸು ನಿಜಸ್ವರೂಪ ನಿತ್ಯ ಸುಜನ ಮನೋಹರನ 1
ಪರಮಪುರುಷ ಪರಂಜ್ಯೋತಿ ಪಾರಾವಾರ ಹರಿಗೋಪಾಲ ಕರುಣಾಕೃಪಾಲ ಮೂರುತಿ ಸ್ವಾಮಿ ಸಿರಿಲೋಲನ 2
ಅತೀತ ಗುಣಾನಂತಮಹಿಮ ಪತಿತಪಾವನ ಪೂರ್ಣ ಸತತ ಸದೋದಿತ ಪಾದ ಅತಿಶಯಾನಂದನ3
ಅವ್ಯಕ್ತ ಅವಿನಾಶ ಸು ದಿವ್ಯ ಸುಪವಿತ್ರದಾಗರ ಘವಘವಿಸುವ ದಿವ್ಯ ತೇಜ ರವಿಕೋಟಿ ಕಿರಣನ 4
ಅನಾಥಬಂಧು ಅನುದಿನ ಅಣುರೇಣು ತೃಣಪೂರ್ಣ ಪ್ರಾಣದೊಡೊಯ ಮಹಿಪತಿ ದೀನದಯಾಳುನಾ 5
***