Showing posts with label ಮಾಧವ ಅಂಗಜನಯ್ಯ ಪಾಂಡುರಂಗ ವಿಠಲನಿಗೆ ankita lakshuminarayana. Show all posts
Showing posts with label ಮಾಧವ ಅಂಗಜನಯ್ಯ ಪಾಂಡುರಂಗ ವಿಠಲನಿಗೆ ankita lakshuminarayana. Show all posts

Sunday 5 September 2021

ಮಾಧವ ಅಂಗಜನಯ್ಯ ಪಾಂಡುರಂಗ ವಿಠಲನಿಗೆ othersankita lakshuminarayana

ತುಪಾಕಿ ವೆಂಕಟರಮಣಾಚಾರ್ಯ

ಮಾಧವ ಅಂಗಜನಯ್ಯ ಪಾಂಡುರಂಗ ವಿಠಲನಿಗೆ ಪ. 


ಪುಂಡರೀಕವರಗೆ ಪೂರ್ಣಾತ್ಪೂರ್ಣಗೆ ಪಂಡರಿಪುರವರ ಪುಂಡರೀಕಾಕ್ಷಗೆ 1 

ನಾಮದೇವಾದಿ ಸಂತಸ್ತೋಮ ಪರಿಣಾಮ ಶ್ರೀ- ರಾಮದಾಸನ ಪ್ರಿಯ ಶ್ರೀರಾಮಗೆ 2 

ಏಕನಾಥನಾಲಯ ಚಾಕರನಾದವಗೆ ಗೋಕುಲಪಾಲಗೆ ಗೋಮಿನಿಲೋಲಗೆ 3 

ಮಂದರಧಾರಗೆ ಮಥುರಾನಾಥಗೆ ಕಂದರ್ಪ ಶತಕೋಟಿ ಸುಂದರರೂಪಗೆ 4 

ರುಕುಮಿಣಿಕಾಂತಗೆ ರುಜುಗಣಾಧೀಶಗೆ ಭಕ್ತವತ್ಸಲನಿಗೆ ಲಕ್ಷುಮಿನಾರಾಯಣಗೆ 5

****

check by ಪಾವಂಜೆ ಶ್ರೀ ಲಕ್ಷ್ಮೀ ನಾರಾಯಣ ಆಚಾರ್ಯರು

ಚೆಕ್ ತುಪಾಕಿ ವೆಂಕಟರಮಣಾಚಾರ್ಯ