by ಪ್ರಸನ್ನವೆಂಕಟದಾಸರು
ಎಂದು ಕಾಂಬುವೆ ಎನ್ನ ಸಲಹುವ ತಂದೆ ಉಡುಪಿಯ ಜಾಣನಮಂದಹಾಸ ಪ್ರವೀಣನಇಂದಿರಾ ಭೂರಮಣನ ಪ.
ಕಡಲ ತಡಿಯೊಳು ಎಸೆವ ರಂಗನಕಡೆಗೋಲ ನೇಣ ಪಿಡಿದನಮೃಡಪುರಂದರಅಜರೊಡೆಯನ ಈರಡಿಗಳಲಿ ಶಿರ ಇಡುವೆ ನಾ 1
ದೇವಕಿಯ ಜಠರದಲ್ಲಿ ಬಂದನಆವಪಳ್ಳಿಯಲ್ಲಿ ನಿಂದನಮಾವ ಕಂಸನ ಕೊಂದನಕಾವನಯ್ಯಮುಕುಂದನ2
ಪೂರ್ಣಪ್ರಜÕರಿಗೊಲಿದು ದ್ವಾರಕೆಯಮಣ್ಣಿನೊಳು ಪ್ರಕಟಿಸಿದನ ಭವಾರ್ಣವಕೆ ಪ್ಲವನಾದನ ಪ್ರಸನ್ನವೆಂಕಟ ಕೃಷ್ಣನ 3
****
ಎಂದು ಕಾಂಬುವೆ ಎನ್ನ ಸಲಹುವ ತಂದೆ ಉಡುಪಿಯ ಜಾಣನಮಂದಹಾಸ ಪ್ರವೀಣನಇಂದಿರಾ ಭೂರಮಣನ ಪ.
ಕಡಲ ತಡಿಯೊಳು ಎಸೆವ ರಂಗನಕಡೆಗೋಲ ನೇಣ ಪಿಡಿದನಮೃಡಪುರಂದರಅಜರೊಡೆಯನ ಈರಡಿಗಳಲಿ ಶಿರ ಇಡುವೆ ನಾ 1
ದೇವಕಿಯ ಜಠರದಲ್ಲಿ ಬಂದನಆವಪಳ್ಳಿಯಲ್ಲಿ ನಿಂದನಮಾವ ಕಂಸನ ಕೊಂದನಕಾವನಯ್ಯಮುಕುಂದನ2
ಪೂರ್ಣಪ್ರಜÕರಿಗೊಲಿದು ದ್ವಾರಕೆಯಮಣ್ಣಿನೊಳು ಪ್ರಕಟಿಸಿದನ ಭವಾರ್ಣವಕೆ ಪ್ಲವನಾದನ ಪ್ರಸನ್ನವೆಂಕಟ ಕೃಷ್ಣನ 3
****
ಲಘುಟಿಪ್ಪಣಿ
ಎಂದು ಕಾಂಬೆನು ಎನ್ನ ಸಲಹುವ
ತಂದೆ ಉಡುಪಿಯ ಜಾಣನ
ಮಂದಹಾಸಪ್ರವೀಣನ
ಇಂದಿರಾಭೂರಮಣನ ॥ ಪ ॥
ಜಾಣನ = ಸರ್ವಜ್ಞನಾದ (ಉಡುಪಿ) ಶ್ರೀಕೃಷ್ಣನನ್ನು; ಮಂದಹಾಸಪ್ರವೀಣನ = (ಮಂದಹಾಸ)ಮುಗುಳ್ನಗೆಯಿಂದ ವಿವಿಧಭಾವಗಳನ್ನು ವಿವಿಧ ಜೀವರಿಗೆ ಸೂಚಿಸುವ ನಿಪುಣತೆಯುಳ್ಳವನನ್ನು; (ಶ್ರೀಕೃಷ್ಣನ ಮಂದಹಾಸವು ಸಂದರ್ಭವಿಶೇಷಬಲದಿಂದ ಭೀಮ - ಜರಾಸಂಧಾದಿ ವಿರುದ್ಧಸ್ವಭಾವದವರಿಗೆ ವಿವಿಧಭಾವದ್ಯೋತಕಗಳಾಗಿದ್ದು ವಿರುದ್ಧಫಲಗಳನ್ನೇ ದೊರಕಿಸಿದ, ಶ್ರೀಕೃಷ್ಣನ ಈ ಪ್ರಾವೀಣ್ಯದ ನಿದರ್ಶನಗಳು ಶ್ರೀಮನ್ಮಹಾಭಾರತದಲ್ಲಿ ಹೇರಳವಾಗಿ ದೊರೆಯುತ್ತವೆ); ಇಂದಿರಾಭೂರಮಣನ = ಶ್ರೀ (ಇಂದಿರಾ) ಭೂದೇವಿಯರ ರಮಣನಾದ ಶ್ರೀಕೃಷ್ಣನನ್ನು .
ಕಡಲದಡದೊಳು ಎಸೆವ ರಂಗನ
ಕಡೆಗೋಲ್ನೇಣನು ಪಿಡಿದನ
ಮೃಡ-ಪುರಂದರರೊಡೆಯನ ಈ -
ರಡಿಗಳಲಿ ಶಿರವಿಡುವೆ ನಾ ॥ 1 ॥
ಕಡಲದಡದೊಳು = ಸಮುದ್ರದ ತೀರದಲ್ಲಿ (ಹತ್ತಿರ ಪ್ರದೇಶದಲ್ಲಿ); ಎಸೆವ = ವಿರಾಜಿಸುವ; ರಂಗನ = ಶ್ರೀಕೃಷ್ಣನನ್ನು; ಕಡೆಗೋಲ್ನೇಣನು = ಕಡೆಗೋಲು ಮತ್ತು ಹಗ್ಗವನ್ನು , ಪಿಡಿದನ = (ಕೈಯಲ್ಲಿ)ಹಿಡಿದಿರುವ; ಮೃಡ - ಪುರಂದರರೊಡೆಯನ = ರುದ್ರೇಂದ್ರ ದೇವತೆಗಳ ಸ್ವಾಮಿಯಾದವನನ್ನು ; ಈರಡಿಗಳಲಿ = ಪಾದದ್ವಂದ್ವದಲ್ಲಿ ( ಎರಡು ಪಾದಗಳಲ್ಲಿ ) ; ಶಿರವಿಡುವೆ = ತಲೆಯಿಟ್ಟು ನಮಸ್ಕರಿಸುತ್ತೇನೆ.
ದೇವಕಿಯ ಜಠರದಲಿ ಬಂದನ
ಆವ ಪಳ್ಳಿಲಿ ನಿಂದನ।
ಮಾವಕಂಸನ ಕೊಂದನ
ಕಾವನಯ್ಯ ಮುಕುಂದನ ॥ 2 ॥
ದೇವಕಿಯ ಜಠರದಲಿ ಬಂದನ = ದೇವಕಿಯನ್ನು ನಿಮಿತ್ತಮಾಡಿಕೊಂಡು, ಸ್ವೇಚ್ಛೆಯಿಂದ ಪ್ರಕಟನಾದ ( ಆದರೂ, ದೇವಕಿಯಲ್ಲಿ ಲೋಕಸಿದ್ಧಗರ್ಭಿಣಿಯರ ಚಿನ್ಹೆಗಳನ್ನುಂಟುಮಾಡಿ, ಅಜ್ಞಾನಿಗಳಿಗೆ ಸಾಮಾನ್ಯರಂತೆ ಹುಟ್ಟಿದವನೆಂಬ ಮೋಹವನ್ನುಂಟುಮಾಡಿದ ) ಶ್ರೀಕೃಷ್ಣ; ಆವ ಪಳ್ಳಿಲಿ ನಿಂದನ = ( ದೇವಕಿಯಲ್ಲಿ ಜನಿಸಿ ) ಗೋಕುಲದಲ್ಲಿ - ಗೊಲ್ಲರ ಹಟ್ಟಿಯಲ್ಲಿ ಸೇರಿ , ಅಲ್ಲಿ ಬಾಲ್ಯಾವಸ್ಥೆಯನ್ನು ಕಳೆದನು; ಕಾವನಯ್ಯ = ರಕ್ಷಿಸುವ ತಂದೆ.
ಪೂರ್ಣಪ್ರಜ್ಞರಿಗೊಲಿದು ದ್ವಾರಕಾ -
ಮಣ್ಣಿನೊಳು ಪ್ರಕಟಿಸಿದನ ಭ -
ವಾರ್ಣವಕೆ ಪ್ಲವನಾದನ ಪ್ರ -
ಸನ್ನವೇಂಕಟಕೃಷ್ಣನ ॥ 3 ॥
ಪೂರ್ಣಪ್ರಜ್ಞರಿಗೆ = ಶ್ರೀಮದಾಚಾರ್ಯರಿಗೆ ; ದ್ವಾರಕಾಮಣ್ಣಿನೊಳು = ಗೋಪೀಚಂದನದ ಗಡ್ಡೆಯಲ್ಲಿ (ಬಿರುಗಾಳಿಗೆ ಸಿಕ್ಕಿದ ಅಪಾಯದಿಂದ ವರ್ತಕನ ಹಡಗನ್ನು ಶಾಟಿಯ ವಾಯುವಿನಿಂದ ರಕ್ಷಿಸಿ , ಬದುಕಿ ಬಂದ ವರ್ತಕನು ಸರ್ವಸಮರ್ಪಣೆ ಮಾಡಿದರೂ, ಕೇವಲ ಗೋಪೀಚಂದನಗಡ್ಡೆಗಳನ್ನು ಮಾತ್ರ ಸ್ವೀಕರಿಸಿದ, ಶ್ರೀಮಧ್ವಚಾರ್ಯರ ಲೀಲೆಯು ಜನಜನಿತವಾಗಿದೆ; ಒಂದು ಗಡ್ಡೆಯಲ್ಲಿದ್ದ ಶ್ರೀಕೃಷ್ಣನನ್ನೇ ಉಡುಪಿಯಲ್ಲಿ ಪ್ರತಿಷ್ಠಿಸಿದರು) ; ಭವಾರ್ಣವಕೆ = ಸಂಸಾರಸಾಗರವನ್ನು ದಾಟಲಿಕ್ಕೆ; ಪ್ಲವನಾದ = ನಾವೆಯಂತಿರುವ ( ಶ್ರೀಕೃಷ್ಣನನ್ನು ).
ಸಂಪಾದಕರು :
ಹರಿದಾಸರತ್ನಂ ಶ್ರೀ ಗೋಪಾಲದಾಸರು