Showing posts with label ಳಳ- RSS- ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆ rss. Show all posts
Showing posts with label ಳಳ- RSS- ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆ rss. Show all posts

Wednesday 28 April 2021

ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆ others rss

 RSS song

ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆಯುವ

ದಮನಗೈದು ದುರುಳರ ಧರೆಯ ಉಳಿಸುವ || ಪ ||


ನಾವು ನಾವೆ ಎಂದಿಗು ಮೃಗರಾಜನ ತೆರದಿ

ಗತಕಾಲದ ಇತಿಹಾಸದ ಹಿರಿಯರ ಹಾದಿ

ಮುನ್ನಡೆಸುವ ಬಡಿದೆಬ್ಬಿಸಿ ನಮ್ಮ ಅನುಜರ

ನಿದ್ರಿಸಲು ಬಿಡೆವಿನ್ನು ರಣಮಹತ್ತರ || 1 ||


ಶಿವನ ಖಡ್ಗದ ಹೊಳಪು ಕಣ್ಣ ಮುಂದಿದೆ

ರಾಣನಶ್ವದ ಖರಪುಟ ಕಿವಿಯ ತುಂಬಿದೆ

ಅಝಾದ ಭಗತರ ನೆನಪು ಮನದಿ ನಿಂತಿದೆ

ಸಾಗುವೀರ ಎದೆಯನೆತ್ತಿ ಭಯವದೆಲ್ಲಿದೆ || 2 ||


ಅದೋ ಕೇಳಿ ಮೊಳಗುತಿದೆ ವಿವೇಕವಾಣಿಯು

ಎದ್ದು ಸಾಗು ನಿಲ್ಲದೆ ಗುರಿ ಮುಟ್ಟುವವರೆಗೂ

ಬಲು ಸ್ಥೈರ್ಯದಿ ಹಿಂದುವಿನೆದೆ ಸೆಟೆದು ನಿಂತಿದೆ

ಗೆಲುವೆಮ್ಮದೆ ದಿಟವಹುದು ಈಶನೊಲವಿದೆ || 3 ||

***