Showing posts with label ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ mahipati. Show all posts
Showing posts with label ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ mahipati. Show all posts

Wednesday 1 September 2021

ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ ಪ  


ಯಾದವಕುಲತಿಲಕ ಶ್ರೀದೇವದೇವ ಸಾಧುಜನರ ಪಾಲಕ ಉದ್ಧವ ಪ್ರಾಣಪೋಷಕ ಆದಿಕೇಶವ ಸದಮಲ ಸುಖದಾಯಕ 1 

ಇಂದೀವರದಳನಯನ ನಂದಕುಮಾರ ಸುಂದರ ಶುಭವದನ ಮಾಧವ ಮಧುಸೂದನ ಮಂದರಧರ ವೃಂದ ಗೋಕುಲೋದ್ಧರಣ 2 

ಮುರಹರ ಸಂಕರುಷಣ ಉರಗಶಯನ ತೋರಯ್ಯ ನಿಮ್ಮ ಚರಣ ಬಾರಯ್ಯ ನಾರಾಯಣ ಗರುಡವಾಹನ ಹೊರೆಯಾ ಮಹಿಪತಿ ಪ್ರಾಣ 3

****