ನಂಬಿದೆನೊ ನಿನ್ನ ಪಾದ | ಜಯ ಮುಖ್ಯ ಪ್ರಾಣ
ಬೆಂಬಿಡದೆ ಬಹು ಮೋದ | ತೀರ್ಥಾರ್ಯ ಎನ್ನ
ಹಂಬಲಿಗೆ ಕೊಡೊ ಭೇದ | ಅರ್ಥಗಳ ವಾದ ಪ.
ನಂಬಿದೆನೊ ನಿನ್ನ ಪಾದ ಹೃದಯ
ಅಂಬರದೊಳು ನಿತ್ಯ ಹರಿಯ
ಬಿಂಬ ತೋರಿಸಿ ಎನ್ನ ಭವದ
ಅಂಬುಧಿ ಕಡೆ ಮಾಡು ವೇಗದಿ ಅ.ಪ.
ನೂರ ತೊಂಭತ್ತಷ್ಟ | ಕಲ್ಪದಲಿ ಹರಿಯ
ಆರಾಧಿಸಿದೆಯೊ ಶ್ರೇಷ್ಠ | ಅಲ್ಲಿಂದ ಮುಂದೆ ಸ-
ವಿೂರ ಪದಕೆ ದಿಟ್ಟ | ಬಂದೆಯೊ ಉತ್ಕøಷ್ಟ
ನಾರಸಿಂಹನ ಪಾದ ಭಜಿಸಿ
ಮೂರು ಅವತಾರವನೆ ಧರಿಸಿ
ವೀರ ಕಪಿರೂಪದಲಿ ರಾಮರ
ವಾರಿಜಾಂಘ್ರಿಯ ಭಜಿಸಿ1
ಭುಜ ಪರಾಕ್ರಮ ಭೀಮ | ನೆಂದೆನಿಸಿ ಕೌರವ
ಧ್ವಜವ ಕೆಡಹಿದ್ಯೊ ಸೋಮ | ವಂಶಕೆ ತಿಲುಕ ನೀ
ಧ್ವಜ ಕಪಿಗೆ ಬಹುಪ್ರೇಮ | ನಿನ್ನಲಿ ಹರಿಯ ಧಾಮ
ದ್ವಿಜನ ಉದರದಿ ಜನಿಸಿ ಅಲ್ಲಿಂ
ಕುಜನ ಮತವನು ತರಿದು ಹರಿಯ
ಧ್ವಜ ವಜ್ರಾಂಕುಶ ಪಾದ ಭಜನೆ
ನಿಜಗತಿಗೆ ಬಹು ಶ್ರೇಷ್ಠವೆನಿಸಿದೆ 2
ವ್ಯಾಪಕನೊ ನೀ ಎಲ್ಲಾ | ಕಡೆಯಲಿ ನಿನ್ನ
ರೂಪ ತುಂಬಿಹದಲ್ಲಾ | ಎನಗದನು ತೋರೊ
ಶ್ರೀ ಪತಿ ಗೋಪಾಲಕೃಷ್ಣವಿಠ್ಠಲ | ಲೀಲ
ನೀ ಪರಿಪರಿಯಿಂದ ತಿಳಿಸಿ
ತಾಪ ಹರಿಸೊ ಮೂರು ವಿಧದ
ಪಾಪಿ ಎಂದು ಎನ್ನ ನೂಕದೆ
ಕಾಪಾಡೊ ಪಂಚರೂಪ ಮೂರುತಿ 3
****
No comments:
Post a Comment