ಜಯಮಂಗಳಂ ನಿತ್ಯ ಶುಭಮಂಗಳಂ ||ಪ||
ಇಂದೀವರಾಕ್ಷಗೆ ಇಭರಾಜವರದಗೆ
ಇಂದಿರಾರಮಣ ಗೋವಿಂದ ಹರಿಗೆ
ನಂದನಾಕಂದಗೆ ನವನೀತಚೋರಗೆ
ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ ||
ಕ್ಷೀರಾಬ್ಧಿವಾಸಗೆ ಕ್ಷಿತಿಜನಪಾಲಗೆ
ಮಾರನ್ನ ಪಡೆದ ಮಂಗಳಮೂರ್ತಿಗೆ
ಚಾರು ಚರಣದಿಂದ ಚೆಲುವೆ ಗಂಗೆಯ ಪಡೆದ
ಕಾರುಣ್ಯಮೂರ್ತಿ ಕೌಸ್ತುಭಧಾರಗೆ ||
ವ್ಯಾಸಾವತಾರಗೆ ವೇದ ಉದ್ಧಾರಗೆ
ವಾಸಿತಾನಂತಪದ ಸಕಲೇಶಗೆ
ವಾಸುದೇವಾಮೂರ್ತಿ ಪುರಂದರವಿಠಲಗೆ
ದಾಸರಾ ಕಾಯ್ವ ರುಕ್ಮಿಣೀರಮಣಗೆ
ಜಯಮಂಗಳಂ ನಿತ್ಯ ಶುಭಮಂಗಳಂ||
****
ರಾಗ ಭೈರವಿ ಛಾಪುತಾಳ (raga, taala may differ in audio)
Bhairavi-Chapu
Jayamangalam nitya subamangalam||pa||
Indivarakshage ibarajavaradage
Indiraramana govinda harige
Nandana kandage navanita corage
Vrumdarakendra udupiya krushnage||1||
Kshirabdhivasage kshitijana palage
Marananu padeda mangalamurtige
Carucaranadinda celuva gangeya padeda
Karunyamurti kaustubadharige||2||
Vyasavatarage veda uddharage
Vasitanantapada sakalesage
Vasudevana murti purandaravitthalage
Dasaranu kayva rukminiramanage||3||
***
P: Jaya mangalam nitya shubha mangalam
C1: indeevarAkshage ibharAjavaradage indirA ramaNa gOvinda harige
Nandana kandage naneeta chorage vrndArakendra udupiya krishnage
C2: kshrAbdi vAsage kshitijana pAlage mArananu paDeda mangal moortige
chAru charanadinda cheluva gangeya paDeda kArunya moorti kaustubha dharige
C3: vyasAvatArage vEda uddhArage vAsitAnantapada sakaleshage
vAsudEvana moorti purandaravithalage dAsaranu kAyva rukmiNi ramanage
***
ಜಯ ಮಂಗಳಂ ನಿತ್ಯ ಶುಭಮಂಗಳಂ||pa||
ಇಂದೀವರಾಕ್ಷಗೆ ಇಭರಾಜವರದಗೆ
ಇಂದಿರಾರಮಣ ಗೋವಿಂದ ಹರಿಗೆ
ನಂದನ ಕಂದಗೆ ನವನೀತ ಚೋರಗೆ
ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ||1||
ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆ
ಮಾರನನು ಪಡೆದ ಮಂಗಲಮೂರ್ತಿಗೆ
ಚಾರುಚರಣದಿಂದ ಚೆಲುವ ಗಂಗೆಯ ಪಡೆದ
ಕಾರುಣ್ಯಮೂರ್ತಿ ಕೌಸ್ತುಭಧಾರಿಗೆ||2||
ವ್ಯಾಸಾವತಾರಗೆ ವೇದ ಉದ್ಧಾರಗೆ
ವಾಸಿತಾನಂತಪದ ಸಕಲೇಶಗೆ
ವಾಸುದೇವನ ಮೂರ್ತಿ ಪುರಂದರವಿಟ್ಠಲಗೆ
ದಾಸರನು ಕಾಯ್ವ ರುಕ್ಮಿಣಿರಮಣಗೆ||3||
***
ರಾಗ : ಭೈರವಿ ತಿಶ್ರನಡೆ
ಜಯ ಮಂಗಳಂ ಶುಭ ಮಂಗಳಂ॥ಪ॥
ಇಂದೀವರಾಕ್ಷಗೆ ಇಭರಾಜವರದಗೆ
ಇಂದಿರಾರಮಣ ಗೋವಿಂದ ಹರಿಗೆ
ನಂದನ ಕಂದಗೆ ನವನೀತ ಚೋರಗೆ
ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ ॥೧॥
ಕ್ಷೀರಾಬ್ಧಿವಾಸಗೆ ಕ್ಷಿತಿಜನಪಾಲಗೆ
ಮಾರನ್ನ ಪಡೆದ ಮಂಗಳಮೂರ್ತಿಗೆ
ಚಾರುಚರಣದಿಂದ ಚೆಲುವ ಗಂಗೆಯ ಪಡೆದ
ಕಾರುಣ್ಯಮೂರ್ತಿ ಕೌಸ್ತುಭಧಾರಗೆ ॥೨॥
ವ್ಯಾಸಾವತಾರಗೆ ವೇದ ಉದ್ಧಾರಗೆ
ವಾಸಿತಾನಂತಪದ ಸಕಲೇಶಗೆ
ವಾಸುದೇವಮೂರ್ತಿ ಪುರಂದರವಿಠಲಗೆ
ದಾಸರಾ ಕಾಯ್ವ ರುಕ್ಮಿಣಿರಮಣಗೆ ॥೩॥
ಜಯ ಮಂಗಳಂ ನಿತ್ಯ ಶುಭ ಮಂಗಳಂ॥
***
Thank you so much🙏 I have been searching for this mangalaarti song for so lkng. My father used to sing it every evening. No words to convey my gratitude🙏
ReplyDelete