ಶ್ರೀರಮಣ ಸರ್ವೇಶ ಸರ್ವಗ
ಸಾರಭೋಕ್ತ ಸ್ವತಂತ್ರ ಸರ್ವದ –
ಪಾರಮಹಿಮೋದಾರ ಸದ್ಗುಣಪೂರ್ಣ ಗಂಭೀರ |
ಸಾರಿದವರಘ ದೂರಗೈಸೀ
ಸೂರಿಜನರಿಗೆ ಸೌಖ್ಯನೀಡುವ
ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || 1 ||
ಘನ್ನಮಹಿಮಾಪನ್ನಪಾಲಕ
ನಿನ್ನ ಹೊರತಿನನ್ಯದೇವರ
ಮನ್ನದಲಿ ನಾ ನೆನಿಸೆನೆಂದಿಗು ಬನ್ನ ಬಡಿಸಿದರು |
ಎನ್ನ ಪಾಲಕ ನೀನೆ ಇರುತಿರೆ
ಇನ್ನು ಭವಭಯವೇಕೆ ಎನಗೆ
ಚನ್ನ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || 2 ||
ಲಕುಮಿ ಬೊಮ್ಮ ಭವಾಮರೇಶರು
ಭಕುತಿಪೂರ್ವಕ ನಿನ್ನ ಭಜಿಸಿ
ಸಕಲಲೋಕಕೆ ನಾಥರೆನಿಪರೊ ಸರ್ವಕಾಲದಲಿ |
ನಿಖಿಳಜೀವರ ಪೊರೆವೊ ದೇವನೆ
ಭಕುತಿ ನೀಯೆನಗೀಯದಿರಲು
ವ್ಯಕುತವಾಗ್ಯಪಕೀರ್ತಿ ಬಪ್ಪದೊ ಶ್ರೀನಿಕೇತನನೆ || 3 ||
ಯಾಕೆ ಪುಟ್ಟದೊ ಕರುಣ ಎನ್ನೊಳು
ಸಾಕಲಾರೆಯ ನಿನ್ನ ಶರಣನ
ನೂಕಿ ಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ |
ನೋಕನೀಯನೆ ನೀನೆ ಎನ್ನನು
ಜೋಕೆಯಿಂದಲಿ ಕಾಯೊ ಬಿಡದೆ
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || 4 ||
ಅಂಬುಜಾಂಬಕ ನಿನ್ನ ಪದಯುಗ
ನಂಬಿಕೊಂಡೀಪರಿಯಲಿರುತಿರೆ
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿತೋರೆ |
ಬಿಂಬ ಮೂರುತಿ ನಿನ್ನ ಕರಗತ
ಕಂಬುವರವೇ ಗತಿಯೊ ವಿಶ್ವ –
ಕುಟುಂಬಿ ಎನ್ನನು ಸಲಹೊ ಸಂತತ ಶೇಷಗಿರಿವಾಸ || 5 ||
ಸಾರಶಿರಿವೈಕುಂಠ ತ್ಯಜಿಸಿ
ಧಾರುಣೀಯೊಳು ಗೊಲ್ಲನಾಗಿ
ಚೋರಕರ್ಮವ ಮಾಡಿ ಬದುಕಿಹದಾರಿಗರಿಕಿಲ್ಲ |
ಸಾರಿ ಪೇಳುವೆ ನಿನ್ನ ಗುಣಗಳ –
ಪಾರವಾಗಿರುತಿಹವೊ ಜನರಿಗೆ
ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || 6 ||
ನೀರ ಮುಳುಗಿ ಭಾರ ಪೊತ್ತೂ
ಧಾರುಣೀತಳವಗೆದು ಸಿಟ್ಟಿಲಿ
ಕ್ರೂರನುದರವ ಶೀಳಿ ಕರುಳಿನ ಮಾಲೆ ಧರಿಸಿದರು |
ಪೋರ ವಿಪ್ರಕುಠಾರಿ ವನವನ
ಚಾರಿ ಗೋಪ ದಿಗಂಬರಾಶ್ವವ
ಏರಿ ಪೋದರು ಬಿಡೆನೊ ವೇಂಕಟ ಶೇಷಗಿರಿವಾಸ || 7 ||
ಲಕ್ಷ್ಮಿನಾಯಕ ಸಾರ್ವಭೌಮನೆ
ಪಕ್ಷಿವಾಹನ ಪರಮಪುರುಷನೆ
ಮೋಕ್ಷದಾಯಕ ಪ್ರಾಣಜನಕನೆ ವಿಶ್ವವ್ಯಾಪಕನೆ |
ಅಕ್ಷಯಾಂಬರ ವಿತಿ ವಿಜಯನ
ಪಕ್ಷಪಾತವ ಮಾಡಿ ಕುರುಗಳ
ಲಕ್ಷ್ಯಮಾಡದೆ ಕೊಂದೆಯೋ ಶ್ರೀಶೇಷಗಿರಿವಾಸ || 8 ||
ಹಿಂದೆ ನೀ ಪ್ರಹ್ಲಾದಗೋಸುಗ
ಎಂದು ನೋಡದ ರೂಪ ಧರಿಸಿ
ಬಂದು ದೈತ್ಯನ ಒಡಲ ಬಗೆದು ಪೊರೆದೆ ಬಾಲಕನ |
ತಂದೆತಾಯ್ಗಳ ಬಿಟ್ಟು ವಿಪಿನದಿ
ನಿಂದು ತಪಿಸುವ ಪಂಚವತ್ಸರ
ಕಂದನಾ ಧೃವಗೊಲಿದು ಪೊರೆದೆಯೊ ಶೇಷಗಿರಿವಾಸ || 9 ||
ಮಡುವಿನೊಳಗಿಹ ಮಕರಿಕಾಲನು
ಪಿಡಿದು ಬಾಧಿಸೆ ಕರಿಯು ತ್ರಿಜಗ –
ದ್ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ |
ಮಡದಿಮಾತನು ಕೇಳಿ ಬಲುಪರಿ
ಬಡವ ಬ್ರಾಹ್ಮಣ ಧಾನ್ಯ ಕೊಡಲು
ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ || 10 ||
ಪಿಂತೆಮಾಡಿದ ಮಹಿಮೆಗಳ ನಾ –
ನೆಂತು ವರ್ಣಿಸಲೇನುಫಲ ಶ್ರೀ –
ಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ |
ಕಂತುಜನಕನೆ ಎನ್ನ ಮನಸಿನ
ಅಂತರಂಗದಿ ನೀನೆ ಸರ್ವದ
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || 11 ||
ಶ್ರೀನಿವಾಸನೆ ಭಕ್ತಪೋಷನೆ
ಜ್ಞಾನಿಕುಲಗಳಿಗಭಯದಾಯಕ
ದೀನಬಾಂಧವ ನೀನೆ ಎನಮನದರ್ಥ ಪೂರೈಸೊ |
ಅನುಪಮೋಪಮ ಜ್ಞಾನಸಂಪದ
ವಿನಯಪೂರ್ವಕವಿತ್ತು ಪಾಲಿಸೊ
ಜನುಮಜನುಮಕೆ ಮರೆಯಬೇಡವೊ ಶೇಷಗಿರಿವಾಸ || 12 ||
ಮದವು ಮತ್ಸರ ಲೋಭ ಮೋಹವು
ಒದಗಬಾರದು ಎನ್ನ ಮನದಲಿ
ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು |
ಹೃದಯ ಮಧ್ಯದಿ ನಿನ್ನ ರೂಪವು
ವದನದಲಿ ತವ ನಾಮ ಮಂತ್ರವು
ಸದಯ ಪಾಲಿಸು ಬೇಡಿಕೊಂಬೆನೊ ಶೇಷಗಿರಿವಾಸ || 13 ||
ಅಂದನುಡಿ ಪುಸಿಯಾಗಬಾರದು
ಬಂದ ಭಾಗ್ಯವು ಪೋಗಬಾರದು
ಕುಂದುಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |
ನಿಂದೆ ಮಾಡುವ ಜನರ ಸಂಗವು
ಎಂದಿಗಾದರು ದೊರೆಯಬಾರದು
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || 14 ||
ಏನು ಬೇಡಲಿ ಎನ್ನ ದೇವನೆ
ಸಾನುರಾಗದಿ ಎನ್ನ ಪಾಲಿಸೊ
ನಾನಾವಿಧ ಸೌಖ್ಯ ನೀಡುವುದಿಹಪರಂಗಳಲಿ |
ಶ್ರೀನಿವಾಸನೆ ನಿನ್ನ ದಾಸಗೆ
ಏನು ಕೊರೆತಿಲ್ಲೆಲ್ಲಿ ನೋಡಲು
ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ || 15 ||
ಆರು ಮುನಿದವರೇನು ಮಾಳ್ಪರೊ
ಆರು ಒಲಿದವರೇನು ಮಾಳ್ಪರೊ
ಆರು ನೇಹಿಗರಾರು ದ್ವೇಷಿಗಳಾರುದಾಶಿನರು |
ಕ್ರೂರ ಜೀವರ ಹಣಿದು ಸಾತ್ತ್ವಿಕ
ಧೀರ ಜೀವರ ಪೊರೆದು ನಿನ್ನಲಿ
ಸಾರ ಭಕುತಿಯನಿತ್ತು ಪಾಲಿಸೊ ಶೇಷಗಿರಿವಾಸ || 16 ||
ನಿನ್ನ ಸೇವೆಯನಿತ್ತು ಎನಗೆ
ನಿನ್ನ ಪದಯುಗ ಭಕ್ತಿನೀಡಿ
ನಿನ್ನ ಗುಣಗಣಸ್ತವನ ಮಾಡುವ ಜ್ಞಾನ ನೀನಿತ್ತು |
ಎನ್ನ ಮನದಲಿ ನೀನೆ ನಿಂತು
ಘನ್ನ ಕಾರ್ಯವ ಮಾಡಿ ಮಾಡಿಸು
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || 17 ||
ಜಯ ಜಯತು ಶಠ ಕೂರ್ಮರೂಪನೆ
ಜಯ ಜಯತು ಕಿಟಿ ಸಿಂಹ ವಾಮನ
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ |
ಜಯ ಜಯತು ಶಿರಿ ಯದುವರೇಣ್ಯನೆ
ಜಯ ಜಯತು ಜನಮೋಹ ಬುದ್ಧನೆ
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || 18 ||
ಕರುಣಸಾಗರ ನೀನೆ ನಿಜಪದ
ಶರಣವತ್ಸಲ ನೀನೆ ಶಾಶ್ವತ
ಶರಣಜನಮಂದಾರ ಕಮಲಾಕಾಂತ ಜಯವಂತ |
ನಿರುತ ನಿನ್ನನು ನುತಿಸಿ ಪಾಡುವೆ
ವರದ ಗುರುಜಗನ್ನಾಥವಿಠಲ
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || 19 ||
****
Stanza 1
Śrīramaṇa sarvēśa sarvaga | sārbhōkta svatantra sarvada |
pāramahimōdāra sadguṇapūrṇa gaṁbhīra |
sāridavaragha dūragaisī | sūrijanarige saukhyanīḍuva |
dhīra vēṅkaṭaramaṇa karuṇadi poreyo nī enna ||
Stanza 2
Ghannamahimāpannapālaka | ninna horaṭinanyadēvara |
mannadali nā neniseneṇḍigu banna baḍisidaru |
enna pālaka nīne irutire | innu bhavabhayavēke enage |
channa vēṅkaṭaramaṇa karuṇadi poreyo nī enna ||
Stanza 3
Lakumi bomma bhavāmarēśaru | bhakutipūrvaka ninna bhajisi |
sakalalōkake nāthareniparo sarvakāladali |
nikhiḷajīvara porevo dēvane | bhakuti nīyenagīyadiralu |
vyakutavāgyapakīrti bappado śrīnikētanane ||
Stanza 4
Yāke puṭṭado karuṇa ennoḷu | sākalāreya ninna śaraṇana |
nūki biṭṭare ninage lōkadi khyāti bappuvudē |
nōkanīyane nīne ennanu | jōkeyandali kāyo biḍade |
ēkadēvanu nīne vēṅkaṭa śēṣagirivāsa ||
Stanza 5
Ambujāmbaka ninna padayuga | nambikonḍīpariyallirutiye |
ḍombegārana teradi nī nirbhāgya sthitatōre |
bimba mūruti ninna karagata | kambuvaravē gatiyo viśva –
kuṭumbi ennanu salaho santata śēṣagirivāsa ||
Stanza 6
Sāraśirivaikunṭha tyajisi | dhāruṇīyoḷu gollanāgi |
chōrakarmava māḍi badukihadārigarikilla |
sāri pēḷuve ninna guṇagaḷa – pāravāgirutiha vo janarige |
dhīravēṅkaṭaramaṇa karuṇadi poreyo nī enna ||
Stanza 7
Nīra muḷugi bhāra pottū | dhāruṇītaḷavagedu siṭṭili |
krūranudarava śīḷi karuḷina māle dharisidaru |
pōra viprakuṭhāri vanavana | chāri gōpa digambarāśvava |
ēri pōdaru biḍeno vēṅkaṭa śēṣagirivāsa ||
Stanza 8
Lakṣmināyaka sārvabhaumane | pakṣivāhana paramapuruṣane |
mōkṣadāyaka prāṇajanakane viśvavyāpakane |
akṣayāmbara vīti vijayana | pakṣapātava māḍi kurugaḷa |
lakṣyamāḍade kondeyō śrīśēṣagirivāsa ||
Stanza 9
Hinde nī prahlādāgōsuga | endu nōḍada rūpa dharisi |
bandu daityana oḍala bagedu porede bālakana |
tandetāygaḷa biṭṭu vipinadi | nindu tapisupa panchavatsara |
kandanā dhruvagolidu poredeyō śēṣagirivāsa ||
Stanza 10
Maḍuvinoḷagiha makarikālanu | piḍidu bādhise kariyu trijaga –
dvaḍeya pāliso enalu takṣaṇa bandu pāliside |
maḍadimātanu kēḷi balupari | baḍava brāhmaṇa dhānya koḍalu |
poḍavigasaḍaḷa bhāgya nīḍide śēṣagirivāsa ||
Stanza 11
Pintemāḍida mahimegaḷa nā – nentu varṇisalēnupala śrī –
kānta ennanu poreye kīruti ninage phalavenage |
kantujanakane enna manasina | antarāṅgadi nīne sarvada |
nintu prēraṇe māḷpe sarvada śēṣagirivāsa ||
Stanza 12
Śrīnivāsane bhaktapōṣane | jñānikulagaḷigabhayadāyaka |
dīnabāndhava nīne enamanadartha pūraiso |
anupamōpama jñānasampada | vinayapūrvakavittu pāliso |
janumajanumake mareyabēḍavo śēṣagirivāsa ||
Stanza 13
Madavu matsara lōbha mōhavu | odagabāradu enna manadali |
padumanābhane jñāna bhakti virakti nīnittu |
hr̥daya madhyadi ninna rūpavu | vadanadali tava nāma mantravu |
sadaya pālisu bēḍikombeno śēṣagirivāsa ||
Stanza 14
Andanuḍi pusiyāgabāradu | banda bhāgyavu pōgabāradu |
kundubārade ninna karuṇavu dinadi vardhisali |
ninde māḍuva janara saṅgavu | endigādaru doreyabāradu |
endu ninnanu bēḍikombeno śēṣagirivāsa ||
Stanza 15
Ēnu bēḍali enna dēvane | sānurāgadi enna pāliso |
nānāvidha saukhya nīḍuvudihaparaṅgaḷali |
Śrīnivāsane ninna dāsage | ēnu koreti llelli nōḍalu |
nīne nintīvidhadi pēḷisu śēṣagirivāsa ||
Stanza 16
Āru munidavarēnu māḷparo | āru olidavarēnu māḷparo |
āru nēhigarāru dvēṣigaḷārudāśinaru |
krūra jīvara haṇidu sāttvika | dhīra jīvara poredu ninnali |
sāra bhakutiyanittu pāliso śēṣagirivāsa ||
Stanza 17
Ninna sēveyanittu enage | ninna padayuga bhaktinīḍi |
ninna guṇagaṇastavana māḍuva jñāna nīnittu |
enna manadali nīne nintu | ghanna kāryava māḍi māḍisu |
dhanyanendenisenna lōkadi śēṣagirivāsa ||
Stanza 18
Jaya jayatu śaṭha kūrmarūpane | jaya jayatu kiṭi simha vāmana |
jaya jayatu bhr̥gurāma raghukulasōma śrīrāma |
jaya jayatu śiri yaduvarēṇyane | jaya jayatu janamōha buddhane |
jaya jayatu kalikalmaṣaghnane kalkināmakane ||
Stanza 19
Karuṇasāgara nīne nijapada | śaraṇavatsala nīne śāśvata |
śaraṇajanamandāra kamalākānta jayavanta |
niruta ninnanu nutisi pāḍuve | varada gurujagannāthaviṭhala |
parama prēmadi poreyo ennanu śēṣagirivāsa ||
***
Vowel Length: Letters with a bar (macron) like ā, ē, ī, ō, ū are long; hold them for two beats (e.g., Śrēṣṭha is "Shree-stha").
Retroflex Consonants: For ḷ, ṇ, ḍ, ṭ, curl your tongue back to touch the roof of the mouth (palate) to get that distinct "hard" sound (e.g., Sheshagiri or Mandara).
The Soft 'Ś': The letter ś is a soft "sh" made with the tongue near the front teeth (as in Śrī or Śaraṇa).
The 'r̥' Sound: This is a vocalic "ri" sound, not a full syllable; pronounce it like the "ri" in "rig" (e.g., hr̥daya is "hri-daya").
Aspirated Sounds: When you see an 'h' after a consonant (like gh, dh, bh), give a slight puff of air (e.g., bhakti has a soft "b-h" breath).
Nasal 'ṅ': The ṅ is a nasal sound similar to the "ng" in "sing" (e.g., antarāṅga is "an-ta-raang-ga").
***
ಗುರು ಜಗನ್ನಾಥದಾಸರು (ಅಂಕಿತ: ಗುರುಜಗನ್ನಾಥ ವಿಠಲ) ರಚಿಸಿರುವ ಈ 'ವೇಂಕಟೇಶ ಸ್ತವ'ವು ತಿರುಪತಿಯ ಶ್ರೀನಿವಾಸನ ಮಹಿಮೆಯನ್ನು ಕೊಂಡಾಡುವ ಮತ್ತು ದೈನ್ಯಭಾವದಿಂದ ಶರಣಾಗತಿಯನ್ನು ಬೇಡುವ ಅದ್ಭುತ ಸ್ತೋತ್ರವಾಗಿದೆ.
ಸಾರಾಂಶ (Summary)
ಈ ಸ್ತೋತ್ರದಲ್ಲಿ ದಾಸರು ಶ್ರೀ ವೇಂಕಟೇಶನನ್ನು ಸರ್ವೇಶ್ವರ, ಭಕ್ತವತ್ಸಲ ಮತ್ತು ಮೋಕ್ಷದಾಯಕ ಎಂದು ವರ್ಣಿಸಿದ್ದಾರೆ. ಭಗವಂತನ ದಶಾವತಾರಗಳ ಲೀಲೆಗಳನ್ನು, ಪ್ರಹ್ಲಾದ, ಧ್ರುವ, ಗಜೇಂದ್ರ ಮತ್ತು ಕುಚೇಲರಂತಹ ಭಕ್ತರನ್ನು ಸಲಹಿದ ರೀತಯನ್ನು ನೆನೆಯುತ್ತಾ, "ನನಗೂ ಅಂತಹದ್ದೇ ಭಕ್ತಿ ಮತ್ತು ಜ್ಞಾನವನ್ನು ಕರುಣಿಸು" ಎಂದು ಪ್ರಾರ್ಥಿಸಿದ್ದಾರೆ. ಸಂಸಾರ ಭಯವನ್ನು ನೀಗಿಸಿ, ಕಾಮ-ಕ್ರೋಧಾದಿ ಅರಿಷಡ್ವರ್ಗಗಳಿಂದ ದೂರವಿರಿಸಿ, ಸದಾ ತನ್ನ ಹೃದಯದಲ್ಲಿ ನೆಲೆಸಬೇಕೆಂದು ಶ್ರೀಹರಿಯನ್ನು ಬೇಡಿಕೊಂಡಿದ್ದಾರೆ.
ಭಾವಾರ್ಥ (Paragraph-wise Meaning)
ಪದ್ಯ ೧ - ೨:
ಶ್ರೀರಮಣನೇ, ನೀನು ಸರ್ವತಂತ್ರ ಸ್ವತಂತ್ರ ಮತ್ತು ಅಪಾರ ಮಹಿಮೆಯುಳ್ಳವನು. ನಿನ್ನನ್ನು ನಂಬಿದವರ ಪಾಪಗಳನ್ನು ದೂರ ಮಾಡಿ ಸಜ್ಜನರಿಗೆ ಸೌಖ್ಯ ನೀಡುವ ಧೀರ ನೀನು. ಅಕಸ್ಮಾತ್ ಜೀವನದಲ್ಲಿ ಕಷ್ಟಗಳು ಬಂದರೂ, ನಿನ್ನ ಹೊರತಾಗಿ ಅನ್ಯ ದೈವಗಳನ್ನು ನಾನು ಎಂದಿಗೂ ನಂಬುವುದಿಲ್ಲ. ನೀನು ನನ್ನ ಪಾಲಕನಾಗಿರುವಾಗ ನನಗೆ ಈ ಸಂಸಾರದ ಭಯವೇಕೆ?
ಪದ್ಯ ೩ - ೪:
ಲಕ್ಷ್ಮಿ, ಬ್ರಹ್ಮ ಮತ್ತು ಶಿವನಂತಹ ದೇವತೆಗಳೇ ನಿನಗೆ ಭಕ್ತಿಯಿಂದ ನಡೆದುಕೊಂಡು ಲೋಕನಾಥರೆನಿಸಿಕೊಂಡಿದ್ದಾರೆ. ಅಂದಮೇಲೆ ಸಾಮಾನ್ಯನಾದ ನನಗೆ ನೀನು ಭಕ್ತಿಯನ್ನು ನೀಡದಿದ್ದರೆ ಅದು ನಿನಗೇ ಅಪಕೀರ್ತಿ ತರುವುದಿಲ್ಲವೇ? ನಿನ್ನ ಶರಣನನ್ನು ದೂರ ತಳ್ಳದೆ, ಜಾಗರೂಕತೆಯಿಂದ ನನ್ನನ್ನು ಕಾಪಾಡು ಶೇಷಗಿರಿವಾಸ.
ಪದ್ಯ ೫ - ೬:
ಕಮಲದಳದಂತಹ ಕಣ್ಣುಳ್ಳವನೇ, ನಿನ್ನ ಪಾದಗಳನ್ನು ನಂಬಿರುವಾಗ ನನ್ನನ್ನು ದರಿದ್ರನಂತೆ ಕಾಣಬೇಡ. ಇಡೀ ವಿಶ್ವವೇ ನಿನ್ನ ಕುಟುಂಬವಾಗಿರುವಾಗ ನನ್ನನ್ನು ಸಲಹುವ ಜವಾಬ್ದಾರಿ ನಿನ್ನದು. ವೈಕುಂಠವನ್ನು ಬಿಟ್ಟು ಭೂಮಿಗೆ ಬಂದು, ಗೋಪಾಲಕನಾಗಿ ಬೆಣ್ಣೆ ಕಳ್ಳತನ ಮಾಡಿ ಜನರಿಗೆ ನಿನ್ನ ಲೀಲೆಗಳನ್ನು ತೋರಿಸಿದ ಮಹಾನುಭಾವ ನೀನು.
ಪದ್ಯ ೭ - ೮:
ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಮುಂತಾದ ಅವತಾರಗಳನ್ನು ಧರಿಸಿ ದುಷ್ಟರನ್ನು ಶಿಕ್ಷಿಸಿದವನು ನೀನು. ಪರಮಪುರುಷನೇ, ಪಾಂಡವರ ಪಕ್ಷಪಾತಿಯಾಗಿ ದ್ರೌಪದಿಗೆ ಅಕ್ಷಯಾಂಬರ ನೀಡಿ, ಕುರು ಸೈನ್ಯವನ್ನು ಸಂಹರಿಸಿ ಧರ್ಮವನ್ನು ರಕ್ಷಿಸಿದ ಸಾರ್ವಭೌಮ ನೀನು.
ಪದ್ಯ ೯ - ೧೦:
ಅಂದು ಬಾಲಕ ಪ್ರಹ್ಲಾದನಿಗಾಗಿ ನರಸಿಂಹ ರೂಪ ತಾಳಿ ಬಂದೆ, ಐದು ವರ್ಷದ ಧ್ರುವನ ತಪಸ್ಸಿಗೆ ಮೆಚ್ಚಿ ಒಲಿದೆ. ಮಡುವಿನಲ್ಲಿ ಮೊಸಳೆಯು ಆನೆಯನ್ನು ಪೀಡಿಸಿದಾಗ, ಗಜೇಂದ್ರನ ಮೊರೆ ಕೇಳಿ ತಕ್ಷಣ ಬಂದು ರಕ್ಷಿಸಿದೆ. ಬಡ ಬ್ರಾಹ್ಮಣ ಕುಚೇಲನು ತಂದ ಅಲ್ಪ ಅವಲಕ್ಕಿಗೆ ಪ್ರತಿಯಾಗಿ ಅಪಾರ ಸಂಪತ್ತನ್ನು ನೀಡಿದ ಕರುಣಾಮಯಿ ನೀನು.
ಪದ್ಯ ೧೧ - ೧೨:
ನಿನ್ನ ಮಹಿಮೆಗಳನ್ನು ವರ್ಣಿಸಲು ಸಾಧ್ಯವೇ ಇಲ್ಲ. ನೀನು ನನ್ನನ್ನು ರಕ್ಷಿಸಿದರೆ ನಿನಗೆ ಕೀರ್ತಿ, ನನಗೆ ಸುಖ. ನನ್ನ ಅಂತರಂಗದಲ್ಲಿ ನಿಂತು ಸಕಲ ಪ್ರೇರಣೆ ನೀಡುವವನು ನೀನೇ. ಜನುಮ ಜನುಮಕ್ಕೂ ನಿನ್ನನ್ನು ಮರೆಯದಂತೆ ನನಗೆ ಜ್ಞಾನ ಮತ್ತು ವಿನಯವನ್ನು ಕರುಣಿಸು.
ಪದ್ಯ ೧೩ - ೧೪:
ನನ್ನ ಮನಸ್ಸಿನಲ್ಲಿ ಮದ, ಮತ್ಸರ, ಲೋಭಗಳು ಸುಳಿಯದಂತೆ ನೋಡಿಕೋ. ಪದ್ಮನಾಭನೇ, ನಿನ್ನ ರೂಪ ಹೃದಯದಲ್ಲಿ ಮತ್ತು ನಿನ್ನ ನಾಮ ಮಂತ್ರವು ನನ್ನ ನಾಲಿಗೆಯ ಮೇಲೆ ಸದಾ ಇರುವಂತೆ ಅನುಗ್ರಹಿಸು. ಸಜ್ಜನರ ಸಹವಾಸ ನೀಡು, ನಿಂದಕರಿಂದ ದೂರವಿರಿಸು ಮತ್ತು ನಿನ್ನ ಕರುಣೆ ದಿನದಿನಕ್ಕೂ ಹೆಚ್ಚಾಗಲಿ.
ಪದ್ಯ ೧೫ - ೧೭:
ಇಹಪರಗಳಲ್ಲಿ ನನಗೆ ಸುಖ ನೀಡು. ನಿನ್ನ ದಾಸನಾದವನಿಗೆ ಯಾವ ಕೊರತೆಯೂ ಇರದು. ಲೋಕದಲ್ಲಿ ಯಾರು ಮುನಿದರೆ ಏನು, ಯಾರು ಒಲಿದರೆ ಏನು? ನೀನು ನನ್ನ ಪರವಾಗಿದ್ದರೆ ಸಾಕು. ಕ್ರೂರ ಜನರನ್ನು ದಮನ ಮಾಡಿ, ನನಗೆ ನಿನ್ನ ಸೇವೆಯನ್ನು ಮಾಡುವ ಭಾಗ್ಯ ನೀಡು. ನನ್ನ ಕೈಯಿಂದ ಶ್ರೇಷ್ಠ ಕಾರ್ಯಗಳನ್ನು ಮಾಡಿಸಿ ನನ್ನನ್ನು ಧನ್ಯನನ್ನಾಗಿಸು.
ಪದ್ಯ ೧೮ - ೧೯:
ದಶಾವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ ರೂಪದ ನಿನಗೆ ಜಯವಾಗಲಿ. ಕರುಣಾಸಾಗರನಾದ ಗುರುಜಗನ್ನಾಥ ವಿಠಲನೇ, ಶೇಷಗಿರಿವಾಸನೇ, ಪರಮ ಪ್ರೇಮದಿಂದ ನನ್ನನ್ನು ಕಾಪಾಡು.
ಈ ಸ್ತೋತ್ರವು ಭಕ್ತರಿಗೆ ದೈನಂದಿನ ಪಾರಾಯಣಕ್ಕೆ ಅತ್ಯಂತ ಯೋಗ್ಯವಾಗಿದ್ದು, ಶ್ರೀನಿವಾಸನ ಮೇಲಿನ ಭಕ್ತಿಯನ್ನು ಹೆಚ್ಚಿಸುತ್ತದೆ.
***
This 'Venkatesha Stava' composed by Guru Jagannatha Dasa (with the signature Guru Jagannatha Vittala) is a profound prayer of surrender and devotion addressed to Lord Venkateshwara of Tirupati.
Summary
The hymn glorifies Lord Venkateshwara as the supreme, independent ruler of the universe and the savior of the distressed. The poet recounts the Lord's various incarnations and His grace toward legendary devotees like Prahlada, Dhruva, Gajendra, and Kuchela. He pleads for spiritual knowledge (Jnana), devotion (Bhakti), and detachment (Virakti), asking the Lord to cleanse his mind of ego and greed while residing forever in his heart.
Stanza-wise Meaning
Stanzas 1 – 2
O Lord of Lakshmi, You are the independent master of all, residing everywhere. You are the deep ocean of noble virtues who destroys the sins of those who seek You. Even if life brings me great hardship, I will never think of any other deity in my mind. When You are my protector, why should I fear the cycle of birth and death (Bhava)?
Stanzas 3 – 4
Goddess Lakshmi, Brahma, and Shiva became the masters of their worlds only by worshipping You with devotion. O Dweller of Sheshagiri, if You do not grant me devotion, will it not bring a bad name to You as the protector of all souls? Do not push me away; guard me with care, for You are the one true God.
Stanzas 5 – 6
O Lotus-eyed Lord, when I have trusted in Your feet, do not show me a state of misery like a street performer (Dombe-gara). You are the provider for the entire universe; my survival is in Your hands. You left the comforts of Vaikuntha to become a cowherd on earth, performing "thefts" of butter—acts that are divine mysteries beyond human reach.
Stanzas 7 – 8
The poet recalls the Lord's fierce and protective forms—diving into waters (Matsya), bearing the weight of the world (Kurma), and tearing through the chest of the wicked (Narasimha). O Supreme Being, You took the side of the Pandavas, provided infinite robes (Akshaya-ambara) to Draupadi, and destroyed the Kuru army to establish dharma.
Stanzas 9 – 10
In the past, You took an unprecedented form (Narasimha) for the sake of the child Prahlada and tore open the demon. You blessed the five-year-old Dhruva who meditated in the forest. When the elephant Gajendra cried out to the Master of the Three Worlds, You rushed to save him from the crocodile. You even gave infinite wealth to the poor Brahmin Kuchela in exchange for a handful of flattened rice.
Stanzas 11 – 12
How can I describe Your past miracles? If You protect me, the glory is Yours and the benefit is mine. O Father of Manmatha, You are the one who stands within my heart and prompts every thought. Grant me incomparable wealth of knowledge and humility, and ensure I never forget You in any of my future births.
Stanzas 13 – 14
Let pride, envy, greed, and delusion never enter my mind. O Padmanabha, grant me wisdom, devotion, and detachment. Let Your form be in my heart and Your sacred Name/Mantra be on my lips. Let me never fall into the company of those who criticize You; instead, let Your compassion for me grow every day.
Stanzas 15 – 17
I ask for nothing but Your grace. With Your love, provide me happiness in both this world and the hereafter. For a servant of Srinivasa, there is no lack anywhere. It does not matter who is angry with me or who is my friend, as long as You are on my side. Use me as Your instrument to perform great deeds and make my life purposeful.
Stanzas 18 – 19
Victory to the ten avatars—Matsya, Kurma, Varaha, Narasimha, Vamana, Parashurama, Rama, Krishna, Buddha, and Kalki. O Ocean of Mercy, Guru Jagannatha Vittala, You are the constant protector of those who surrender to You. I shall sing Your praises forever; protect me with Your supreme love, O Dweller of Sheshagiri!
***
pallavi
sree ramana sarvEsha sarvaga saarabhokta svatantra sarvada apAramahimOdhAra sadgUna pUrna gambhIra
anupallavi
sAridavara agha dUragaisi bhUrijanarige saukhya nIDuva dhIra venkaTaramaNa karunadi poreyo nI yenna
caraNam 1
ganna mahima banna pAlaka ninna horetinni anyadevara manna dali nenesenendendu banna paDisadiru
enna pAlaka nine iruthire innu bhava bhaya veke enage cenna venkaTaramaNa karUNadi poreyo nI yenna
caraNam 2
lakumi bomma bhavA amaresharu bhakuthi pUrvaka ninna bhajise sakala lOkake nAthareniparu sarvakAladalI
nikhila jivara poreva dEvanE bhakuthi nI yenege yIyadiralu vyakutavAkyApa kIrti bappudo shrInikitane
caraNam 3
yAke puTTAdo karuna yennolu sAkalraya ninna sharaNana nUkibiTTare ninanage lOkadi kyAthi bappuvade
nOkanIyaNe neene yennanu jOkeyindali kAyO biDade EkadEvanu nene venkaTa sESagirivAsa
caraNam 4
ambujAmbaga ninna pada yuga nambikOndi I pariyali irutire dombakAraNa teradi nI bhAgya stithi tore
bimba muruti niNNa karagata kambuvarave gatiyo vishva kuTumbi ennanu salahO santata sESagirivAsa
caraNam 5
dhAra sirivaikuNTa tyajisi dAruniyolage gollanAgi cOra karmava mADi badukihatArigari tilla
sAri pEluve ninna guNagala bAravAgirutiruva janarige dhIra venkaTaramaNa poreyO nI yenna
caraNam 6
nIra mulugi bAra pottu dharuNi dhanavagaidu karulan udarave sIli karulina mAle darisidanu
pora vipra kuTari vana vana sAri gOpa digambarAshvava Eri podaru biDeno venkaTa sESagirivAsa
caraNam 7
lakSmi nAyaka sArvabhauma pakSivAhana paramapuruSana mokSa dayaka prAnadekaine vishva vyApakane
akshayAmbarana vijayana pakSa pAtava mADi kurugala lakSya mADade kondeyo shrI seSagirivAsa
caraNam 8
hinde nI prahlAdagosuge endu nODada rUpa dharisi bandu daityana oDala bagedu porede bAlakana
tande tAygalga biTTu vipinadi nintutapisuva pancavatsara kanda A dhruva golidu poredeyO seSagirivAsa
caraNam 9
maDuvinolagiha makari kAlana hiDidu bAdise kariyu trijagadODeya pAlisu enalu takSaNa bandu pAliside
maDadi mAtanu kEliv balupari baDava brAhmanana dhAnya kODalu poDavi kasagala bhAgya nIDide sESagirivAsa
caraNam 10
hinde mAdida mahimagala nA endu varnisalenOpala shrIkAnta ennanu poreva krituhi ninage phalavenage
kantu janakane enna manasina antarangadi nIne sarvada nintu preraNA mAlpa sarvada sESagirivAsa
caraNam 11
shrInivAsane bhakta pOSane jnAnikulagaligabaya dayakaDina bAndava nIne yena mana darta pUraisuO
anupamOpa jnAna sampatu vinayapUrvittu pAliso januma janumake maraya bEDavO sESagirivAsa
1
caraNam 2
madavu matsara lOba mOhavu odagabArada enna manadali padumanAbhane jnAna bhakthi virakthi nInittu
hrudaya madyadali ninna rUpavu vadanadalli tava nAma mantravu satata pAlisu beDikombeno sESagirivAsa
1
caraNam 3
anda nuDi pusiyAgabAradu banda bhAgyavu pogabAradu kundu bArade ninna karuNa dinadi vartisali
hinde mADuva janara sangavu endigAdaru doreyabAradu endu ninnanu bEDikombeno sESagirivAsa
1
caraNam 4
Enu bEDali enna dEvana sAnurAgadi yenna pAliso nana vida vida soukya nIduva ihaparangalali
shrInivAsane ninna dAsarigenU koretuillvO noDalu nine ninti I vidhadi pElisuve sESagirivAsa
1
caraNam 5
Aru munidavarEnu mAlparu Aru olidavarEnu mAlparu Aru snEhitarAgu dvEshigala Aru udAsinaru
krura jIvara haNidu sAtvika jIvara shrI vara poreyO nI enna apAra bhakutiyannittu pAlisO sESagirivAsa
1
caraNam 6
ninna sevaya nittu enage ninna padayuga bhakti nIDi ninna gunagaNa stavana mADuva jnAna nInittu
enna manadali neene nintu ganna kAryava mADi mADisu dhAnyanendenisenna lokadi sESagirivAsa
1
caraNam 7
jaya jayatu shaTa kUrma rUpane jaya jayatu kiDi simha vAmana jaya jayathu brigu rAma raghukula sOma shrI rAma
jaya jayatu siriyaduvarENyane jaya jayatu janamOha buddhane jaya jayatu kalikalmashaghnane kalki nAmakane
1
caraNam 8
karUna sAgara nIne nija pada sharaNa vatsala nIne shAsvata sharaNa janara mandara kamalakAnta jayavanta
niruta ninnanu nutisi pADuve varada guru jagannAtha viTTala parama prEmadi poreyO ennanu sESagirivAsa
***
ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ ಸರ್ವದ
ಪಾರಮಹಿಮೋದ್ಧಾರ ಸದ್ಗುಣ ಪೂರ್ಣ ಗಂಭೀರ
ಸಾರಿದವರಘ ದೂರಗೈಸಿ ಸೂರಿಜನರಿಗೆ ಸೌಖ್ಯ ನೀಡುವ
ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ
ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ || ೧ ||
ಘನ್ನಮಹಿಮಾ ಪನ್ನ ಪಾಲಕ ನಿನ್ನ ಹೊರ ತಿನ್ನನ್ಯ ದೇವರ
ಮನ್ನದಲಿ ನಾ ನೆನೆಸೆ ನೆಂದಿಗು ಬನ್ನ ಬಡಿಸದಿರು
ಏನ್ನ ಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ
ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀ ಎನ್ನ
ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀ ಎನ್ನ || ೨ ||
ಲಕುಮಿ ಬೂಮ್ಮ ಭವಾಮರೇಶರು ಭಕುತಿ ಪೂರ್ವಕ ನಿನ್ನ ಭಜಿಸಿ
ಸಕಲ ಲೋಕಕೆ ನಾಥರೆನಿಪರು ಸರ್ವ ಕಾಲದಲಿ
ನಿಖಿಳ ಜೀವರ ಪೋರೆವ ದೇವನೆ ಭಕುತಿ ನೀ ಯೆನಗೀಯ ದಿರಲು
ವ್ಯಕುತವಾಗ್ಯಪಕೀರ್ತಿಬಪ್ಪುದೂ ಶ್ರೀನಿಕೇತನನೆ
ವ್ಯಕುತವಾಗ್ಯಪಕೀರ್ತಿಬಪ್ಪುದೂ ಶ್ರೀನಿಕೇತನನೆ || ೩ ||
ಯಾಕೆ ಪುಟ್ಟದು ಕರುಣ ಎನ್ನೊಳು ಸಾಕಲಾರೆಯ ನಿನ್ನ ಶರಣನ
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ
ನೋಕನೀಯನೆ ನೀನೆ ಎನ್ನನು ಜೋಕೆಯಿಂದಲಿ ಕಾಯೋ ಬಿಡದೆ
ಏಕದೇವನು ನೀನೆ ವೇಂಕಟ ಶೇಷಗಿರಿವಾಸ
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೪ ||
ಅಂಬುಜಾಂಬಕ ನಿನ್ನ ಪದಯುಗ ನಂಬಿಕೊಂಡೀ ಪರಿಯಲಿರುತಿರೆ
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ
ಬಿಂಬ ಮೂರುತಿ ನಿನ್ನ ಕರಗತ ಕಂಬುವರವೇ ಗತಿಯೋ ವಿಶ್ವಕುಟುಂಬಿ
ಎನ್ನನು ಸಲಹೋ ಸಂತತ ಶೇಷಗಿರಿವಾಸ
ವಿಶ್ವಕುಟುಂಬಿ ಎನ್ನನು ಸಲಹೋ ಸಂತತ ಶೇಷಗಿರಿವಾಸ || ೫ ||
ಸಾರಸಿರಿ ವೈಕುಂಠ ತ್ಯಜಿಸಿ ಧಾರುಣಿಯೊಳು ಗೊಲ್ಲನಾಗಿ
ಚೋರ ಕರ್ಮವ ಮಾಡಿ ಬದುಕಿಹ ದಾರಿಗರಿ ಕಿಲ್ಲ
ಸಾರಿ ಪೇಳುವೆ ನಿನ್ನ ಗುಣಗಳ ಪಾರವಾಗಿರುತಿಹೊ ಜನರಿಗೆ
ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಯೆನ್ನ
ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಯೆನ್ನ || ೬ ||
ನೀರ ಮುಳುಗಿ ಭಾರಪೊತ್ತು ಧಾರುಣೀತಳವಗೆದು ಸಿಟ್ಟಿಲಿ
ಕ್ರೂರನುದರವ ಸೀಳಿ ಕರುಳಿನ ಮಾಲೆ ಧರಿಸಿದರು
ಪೋರ ವಿಪ್ರ ಕುಠಾರಿ ವನವನ ಜಾರಿ ಗೋಪ ದಿಗಂಬರಾಶ್ವವ
ಏರಿ ಪೋದರು ಬಿಡೆನೋ ವೇಂಕಟ ಶೇಷಗಿರಿವಾಸ
ಅಶ್ವವ ಏರಿ ಪೋದರು ಬಿಡೆನೋ ವೇಂಕಟ ಶೇಷಗಿರಿವಾಸ || ೭ ||
ಲಕ್ಷ್ಮಿನಾಯಕ ಸಾರ್ವ ಭೌಮನೆ ಪಕ್ಷಿವಾಹನ ಪರಮ ಫುರುಷನೆ
ಮೋಕ್ಷದಾಯಕ ಪ್ರಾಣ ಜನಕನೆ ವಿಸ್ವ ವ್ಯಾಪಕನೆ
ಅಕ್ಷಯಾಂಬರವಿತ್ತು ವಿಜಯನ ಪಕ್ಷಪಾತವ ಮಾಡಿಕುರುಗಳ
ಲಕ್ಷ್ಯಮಾಡದೆ ಕೊಂದೆಯೊ ಶ್ರೀ ಶೇಷಗಿರಿವಾಸ
ಲಕ್ಷ್ಯಮಾಡದೆ ಕೊಂದೆಯೊ ಶ್ರೀ ಶೇಷಗಿರಿವಾಸ || ೮ ||
ಹಿಂದೆ ನೀ ಪ್ರಹ್ಲಾದಗೋಸುಗ ಎಂದು ನೋಡದ ರೂಪ ಧರಿಸಿ
ಬಂದು ದೈತ್ಯನ ಒಡಲ ಬಗೆದು ಪೊರೆದೆ ಬಾಲಕನ
ತಂದೆತಾಯ್ಗಳ ಬಿಟ್ಟು ವಿಪಿನದಿ ನಿಂದು ತಪಿಸುವ ಪಂಚವತ್ಸರ
ಕಂದನಾ ಧ್ರುವ ಗೊಲಿದು ಪೊರೆದೆಯೊ ಶೇಷಗಿರಿವಾಸ
ಕಂದನಾ ಧ್ರುವ ಗೊಲಿದು ಪೊರೆದೆಯೊ ಶೇಷಗಿರಿವಾಸ || ೯ ||
ಮಡುವಿನೊಳಗಿಹ ಮಕರಿ ಕಾಲನು ಪಿಡಿದು ಬಾಧಿಸೆ ಕರಿಯು ತ್ರಿಜಗ
ದ್ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ
ಮಡದಿ ಮಾತನು ಕೇಳಿ ಬಲು ಪರಿ ಭಡವ ಬ್ರಾಹ್ಮಣ ಧಾನ್ಯ ಕೋಡಲು
ಪೋಡವಿಗಸದಳ ಭಾಗ್ಯನೀಡಿದೆ ಶೇಷಗಿರಿವಾಸ
ಪೋಡವಿಗಸದಳ ಭಾಗ್ಯನೀಡಿದೆ ಶೇಷಗಿರಿವಾಸ || ೧೦ ||
ಪಿಂತುಮಾಡಿದ ಮಹಿಮೆಗಳ ನಾನೆಂತು ವರ್ಣಿಸಲೇನು ಫಲ ಶ್ರೀ
ಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ
ಕಂತುಜನಕನೆ ಎನ್ನ ಮನಸಿನ ಅಂತರಂಗದಿ ನೀನೆ ಸರ್ವದ
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || ೧೧ ||
ಶ್ರೀನಿವಾಸನೆ ಭಕ್ತಪೋಷನೆ ಜ್ಞಾನಿಕುಲಗಳಿ ಗಭಯ ದಾಯಕ
ದೀನಬಾಂಧವ ನೀನೆ ಎನ್ನ ಮನದರ್ಥ ಪೂರೈಸೊ
ಅನು ಪಮೋಪಮಜ್ಞಾನ ಸಂಪದ ವಿನಯಪೂರ್ವಕವಿತ್ತು ಪಾಲಿಸೊ
ಜನುಮಜನುಮಕೆ ಮರೆಯಬೇಡವೋ ಶೇಷಗಿರಿವಾಸ
ಜನುಮಜನುಮಕೆ ಮರೆಯಬೇಡವೋ ಶೇಷಗಿರಿವಾಸ || ೧೨ ||
ಮದವು ಮತ್ಸರ ಲೋಭ ಮೋಹವು ಒದಗಬಾರದು ಎನ್ನ ಮನದಲಿ
ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು
ಹೃದಯಮಧ್ಯದಿ ನಿನ್ನ ರೂಪವು ವದನದಲಿ ತವ ನಾಮಮಂತ್ರವು
ಸದಯ ಪಾಲಿಸೊ ಬೇಡಿಕೊಂಬೆನೊ ಶೇಷಗಿರಿವಾಸ
ಸದಯ ಪಾಲಿಸೊ ಬೇಡಿಕೊಂಬೆನೊ ಶೇಷಗಿರಿವಾಸ || ೧೩ ||
ಅಂದನುಡಿ ಪುಸಿಯಾಗ ಬಾರದು ಬಂದ ಭಾಗ್ಯವು ಹೋಗಬಾರದು
ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ
ನಿಂದೆ ಮಾಡುವ ಜನರ ಸಂಗವು ಎಂದಿಗಾದರು ದೊರೆಯ ಬಾರದು
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೧೪ ||
ಏನು ಬೇಡಲಿ ಎನ್ನ ದೇವನೆ ಸಾನುರಾಗದಿ ಎನ್ನ ಪಾಲಿಸೊ
ನಾನಾವಿಧವಿಧ ಸೌಖ್ಯ ನೀಡು ಇಹಪರಂಗಳಲಿ
ಶ್ರೀನಿವಾಸನೆ ನಿನ್ನ ದಾಸಗೆ ಏನುಕೊರೆತಿಲ್ಲೆಲ್ಲಿ ನೋಡಲು
ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ
ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ || ೧೫ ||
ಆರುಮುನಿದವರೇನು ಮಾಳ್ಪರೊ ಆರುವೊಲಿದವರೇನು ಮಾಳ್ಪರೊ
ಆರು ಸ್ನೇಹಿಗರಾರು ದ್ವೇಷಿಗಳಾರುದಾಶಿನರು
ಕ್ರೂರ ಜೀವರ ಹಣಿದು ಸಾತ್ವಿಕ ಧೀರ ಜೀವರ ಪೊರೆದು ನಿನ್ನಲಿ
ಸಾರ ಭಕುತಿ ಯನಿತ್ತು ಪಾಲಿಸೋ ಶೇಷಗಿರಿವಾಸ
ಸಾರ ಭಕುತಿಯನಿತ್ತುಪಾಲಿಸೋ ಶೇಷಗಿರಿವಾಸ || ೧೬ ||
ನಿನ್ನ ಸೇವೆಯನಿತ್ತು ಎನಗೇ ನಿನ್ನ ಪದಯುಗ ಭಕ್ತಿ ನೀಡೀ
ನಿನ್ನ ಗುಣ ಗಣ ಸ್ತವನ ಮಾಡುವ ಜ್ಞಾನ ನೀನಿತ್ತು
ಎನ್ನ ಮನದಲಿ ನೀನೆ ನಿಂತೂ ಘನ್ನ ಕಾರ್ಯವ ಮಾಡಿ ಮಾಡಿಸು
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೭ ||
ಜಯ ಜಯತು ಶಠ ಕೂರ್ಮ ರೂಪನೆ ಜಯ ಜಯತು ಕಿಟಿ ಸಿಂಹ ವಾಮನ
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ
ಜಯ ಜಯತು ಶಿರಿ ಯದುವರೇಣ್ಯನೆ ಜಯ ಜಯತು ಜನಮೋಹ ಬುದ್ಧನೆ
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || ೧೮ ||
ಕರುಣ ಸಾಗರ ನೀನೆ ನಿಜಪದ ಶರಣವತ್ಸಲ ನೀನೆ ಶಾಶ್ವತ
ಶರಣಜನ ಮಂದಾರ ಕಮಲಾಕಾಂತ ಜಯವಂತ
ನಿರುತ ನಿನ್ನನು ನುತಿಸಿ ಪಾಡುವೆ ವರದ ಗುರುಜಗನ್ನಾಥವಿಠ್ಠಲ
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೯ ||
***
shree ramaNa sarvEsha sarvaga saarabhOkta swatantra sarvada-
paara mahimOddhaara sadguNa poorNa gaMBIra
saaridavaragha dooragaisI soori janarige soukhya nIDuva
dhIra vEnkaTaramaNa karuNadi poreyo nI enna
dhIra vEnkaTaramaNa karuNadi poreyo nI enna || 1 ||
ghanna mahimaapanna paalaka ninna horetinnanya dEvara
mannadali naa nenese nendigu banna baDisadirU
enna paalaka nIne irutire innu bhava bhayavEke enage
channa venkaTaramaNa karuNadi poreyo nI enna
channa venkaTaramaNa karuNadi poreyo nI enna || 2 ||
lakumi bomma bhavaamarEsharu bhakuti poorvaka ninna bhajisi
sakala lOkake naathareniparo sarva kaaladali
nikhiLa jeevara poreva dEvane bhakuti nI enagIyadiralu
Vyakuta vaagyapakeerti bappudo shreenikEtanane
Vyakuta vaagyapakeerti bappudo shreenikEtanane || 3 ||
yaake puTTado karuNa ennoLu saakalaareya ninna sharaNana
nooki biTTare ninage lOkadi khyaati bappuvudE
nOka nIyane nIne ennanu jOkeyindali kaayo biDade
EkadEvanu nIne vEnkaTa shEShagirivaasa
EkadEvanu nIne vEnkaTa shEShagirivaasa || 4 ||
aMbujaaMbaka ninna padayuga naMbikonDI pariya lirutire
Dombegaarana teradi nI nirbhaagya sthiti tOre
biMba mooruti ninna karagata kambu varavE gatiyo
Vishwa kuTuMbi ennanu salahO santata shESha girivaasa
Vishwa kuTuMbi ennanu salahO santata shESha girivaasa || 5 ||
saara siri vaikunTha tyajisI dhaaruNIyoLu gollanaagi
chora karmava maaDi badukiha daarigarikilla
saari pELuve ninna guNagaLa paara vaagiru tihavo janarige
dhIra vEnkaTaramaNa karuNadi poreyo nI enna
dhIra vEnkaTaramaNa karuNadi poreyo nI enna || 6 ||
nIra muLugI bhaara pottU dhaaruNItaLa vagedu siTTili
Kroora nudarava sILi karuLina maale dharisidarU
pOra vipra kuThaari vanavana jaari gOpa digambaraashwava
Eri pOdaru biDeno vEnkaTa shEShagirivaasa
ashwava Eri pOdaru biDeno vEnkaTa shEShagirivaasa || 7 ||
lakShminaayaka saarvabhoumane pakShivaahana parama puruShane
mOkShadaayaka praaNa janakane vishwavyaapakane
akShayaam baravittu vijayana pakSha paatava maaDi kurugaLa
lakShyamaaDade kondeyO shree shEShagirivaasa
kurugaLa lakShyamaaDade kondeyO shree shEShagirivaasa || 8 ||
hinde nI prahlaadagOsuga endu nODada roopa dharisi
bandu daityana oDala bagedu porede baalakana
tande taaygaLa biTTu vipinadi, nindu tapi suva pancha vatsara
kandanaa dhRuvagolidu poredeyo shEShagirivaasa
kandanaa dhRuvagolidu poredeyo shEShagirivaasa || 9 ||
maDu vinoLagiha makari kaalanu, piDidu baadhise kariyu trijaga-
dwaDeya paaliso, enalu takShaNa, bandu paaliside
maDadi maatanu kELi balupari, baDava braahmaNa dhaanya koDalu
poDavi gasadaLa bhaagya nI Dide shEShagirivaasa
poDavi gasadaLa bhaagya nI Dide shEShagirivaasa || 10 ||
pintu maaDida mahimegaLa, naa nentu varNisalEnu, phala shree
kaanta ennanu, poreye kIruti, ninage phalavenage
kantu janakane, enna manasina, antarangadi nIne sarvada
nintu prEraNe maaLpe sarvada shEShagirivaasa
nintu prEraNe maaLpe sarvada shEShagirivaasa || 11 ||
shreenivaasane bhaktapOShane j~jaani kulagaLi gabhaya daayaka
deena baandhava nIne enna manadartha pooraisO
anu pamOpama j~jaana sampada vinaya poorvakavittu paaliso
januma janumake mareyabEDavO shEShagirivaasa
januma janumake mareyabEDavO shEShagirivaasa ||12||
madavu matsara lObha mOhavu odaga baaradu enna manadali
padumanaabhane j~jaana bhakti virakti nInittu
hRudaya madhyadi ninna roopavu vadanadali tava naama mantravu
sadaya paalisu bEDikombenu shEShagirivaasa
sadaya paalisu bEDikombenu shEShagirivaasa ||13||
anda nuDi pusiyaaga baaradu banda bhaagyavu pOgabaaradu
kundu baarade ninna karuNavu dinadi vardhisalI
ninde maaDuva janara sangavu endigaadaru doreya baaradu
endu ninnanu bEDikombenu shEShagirivaasa
endu ninnanu bEDikombenu shEShagirivaasa || 14 ||
Enu bEDali enna dEvane saanuraagadi enna paaliso
naanaa vidhavidha soukhya nIDu ihaparangaLali
shreenivaasane ninna daasage Enu kora till elli nODalu
nIne nintI vidhadi pELisu shEShagirivaasa
nIne nintI vidhadi pELisu shEShagirivaasa || 15 ||
aaru munidavarEnu maaLparo aaru volidavarEnu maaLparo
aaru snEhiga raaru dwEShigaL aarudaashInaru
kroora jIvara haNidu saatwika dheera jIvara poredu ninnali
saara bhakutiya nittu paaliso shEShagirivaasa
saara bhakutiya nittu paaliso shEShagirivaasa || 16 ||
ninna sEveyanittu enage ninna padayuga bhakti nIDi
ninna guNagaLa stavana maaDuva j~jaana nI nittu
enna manadali nIne nintu ghanna kaaryava maaDi maaDisu
dhanya nen denisenna lOkadi shEShagirivaasa
dhanya nen denisenna lOkadi shEShagirivaasa || 17 ||
jaya jayatu shaTha koorma roopane jaya jayatu kiTi simha vaamana
jaya jayatu bhRuguraama raghukula sOma shreeraama
jaya jayatu shiri yaduvarENyane jaya jayatu jana mOha buddhane
jaya jayatu kali kalmaShaGnane kalki naamakane
jaya jayatu kali kalmaShaGnane kalki naamakane || 18 ||
karuNa saagara nInE nijapada sharaNa vatsala nInE shaashwata
sharaNajana mandaara kamalaakaanta jayavanta
niruta ninnanu nutisi paaDuve varada guru jagannaathaviThThala
parama prEmadi poreyO ennanu shEShagirivaasa
parama prEmadi poreyO ennanu shEShagirivaasa || 19 || (2)
******iti shree vEnkaTEsha stavaraaja sampoorNam
***
सुमान्या
हरि सर्वोत्तम र्वायुजीर्वोत्तम ॥
Śrī Gurujagannāthadāsa viracita Śrīvénkaţéśastavarāja
Translated by Manjusha Ajitachar
Śrīramaņa sarvéśa sarvaga l
Sārabhōkta svatantra sarvada – l
Pāramahimōdāra sadguņagambhīra ll
Sāridavaragha dūragaisī l
Sūrijanarigé soukhya nīďuva l
Dhīravénkaţa ramaņa karuņadi poréyo nī énna ll1ll
Ghanna mahimāpannapālaka l
Ninna horatinnannyadévara l
Mannadali nā nénésénéndigu banna baďisadiru ll
Énna pālaka nīné irutiré l
Innu bhavabhayavéké énagé l
Channavénkaţaramaņa karuņadi poréyo nī énna ll2ll
Lakumi bomma bhavāmaréśaru l
Bhakutipūrvaka ninna bhajisi l
Sakala lōkaké nātharéniparo sarvakāladali ll
Nikhiļa jīvara porévo dévané l
Bhakuti nī énagīyadiralu l
Vykutavāgyapakīrti bappudu Śrīnikétanané ll3ll
Yāké puţţado karuņa énnoļu l
Sākalāréya ninna śaraņana l
Nūkibiţţaré ninagé lōkadi khyāti bappuvudé ll
Nōkanīyané nīné énnanu l
Jōkéyindali kāyo biďadé l
Ékadévanu nīné vénkaţaśéşagirivāsa ll4ll
Ambujāmbaka ninna padayuga l
Nambikonďī pariyalirutiré ll
Ďombégārana téradi nī nirbhāgya sthiti tōré l
Bimbamūruti ninna karagata l
Kambuvaravé gatiyo viśva l
Kuţumbi énnanu salaho santata śéşagirivāsa ll5ll
Sāraśiri vaikunţha tyajisī l
Dhāruņiyoļu gollanāgī l
Chōrakarmava māďi badukihadārigarikilla l
Sari péļuvé ninna guņagaļa – l
Pāravāgiruthivo janarigé l
Dhīravénkaţa ramaņa karuņadi poréyo nī énna ll6ll
Nīra muļugī bhārapottū l
Dhāruņī taļavagidu siţţili l
Krūranudarava śīļi karuļina mālé dharisidarū ll
pōravipra kuţhāri vanavana l
Chāri gōpa digambarāşvava l
Éri pōdarū biďéno vénkaţa śéşagirivāsa ll7ll
Lakşmināyaka sārva bhoumané l
Pakşivāhana paramapuruşané l
Mōkşadāyaka prāņajanakanéviśvavyāpakané l
Akşayāmbaravitti vijayana l
Pakşapātava māďi kurugaļa l
Lakşya māďadé kondéyō śrīśéşagirivāsa ll8ll
Hindé nī prahlādagōsuga l
Éndu nōďada rūpadharisi l
Bandu daityana oďala bagédū porédé bālakana l
Tandétāygaļa biţţu vipinadi l
Nindu tapisuva panchavatsara l
Kandanādhruvagolidu porédéyo śéşagirivāsa ll9ll
Maďuvinoļagiha makari kālanu l
Piďidu bādhisé kariyutrijaga -l
Dvaďéya pāliso énalu bandupālisidé ll
maďadi mātanu kéļi balupari l
baďava brāhmaņa dhānya koďalu l
poďavigasadaļa bhāgya nīďidé śéşagirivāsa ll10ll
Pinté māďida mahimégaļa nā – l
néntu varņisalénu phala śrī- l
kānta énnanu poréyé kīruti ninagé phalavénagé ll
kantujanakané énna manasina l
antarangadi nīné sarvada l
nintu préraņé māļpé sarvada śéşagirivāsa ll11ll
Śrīnivāsané bhaktapōşané l
Jnānikulagaļigabhayadāyaka l
Dīnabāndhava nīné énamanadartha pūraiso l
Anupamōpamajnāna sampada l
Vinaya-pūrvakavittu pāliso l
Januma janumaké maréya béďavō śéşagirivāsa ll12ll
Madavu matsara lōbhamōhavu l
Odagabāradu énna manadali ll
Padumanābhané jnānabhakti virakti nīnittu ll
Hŗdaya madhyadi ninna rūpavu l
Vadanadali tava nāmamantravu l
Sadaya pālisu béďikombéno śéşagirivāsa ll13ll
Andanuďi pusiyāgabāradu l
Banda bhāgyavu pōgabāradu l
Kundu bāradé ninna karuņavu dinadi vardhisali ll
Nindé māďuva janara sanghavu l
Éndigādaru doréyabāradu l
Éndu ninnanu béďikombéno śéşagirivāsa ll14ll
Énu béďali énna dévané l
Sānurāgadi énna pāliso l
Nānavidha soukhya nīďuvadihaparangaļali ll
Śrīnivāsané ninna dāsagé l
Énu koratillélli nōďalu l
Nīné nintīvidhadi péļisu śéşagirivāsa ll15ll
Āru munidavarénu māļparo l
Āru volidavarénu māļparo l
Āru néhigarāru dvéşigaļārudāśinaru ll
Krūra jīvara haņidu sātvika l
Dhīra jīvara porédu ninnali l
Sārabhakutiyanittu pāliso śéşagirivāsa ll16ll
Ninna sévéyanittu énagél
Ninna padayuga bhakti nīďi l
Ninna guņagaņa stavana māďuva jnana nīnittu ll
Énna manadali nīné nintū l
Ghanna kāryava māďi māďisu l
Dhanyanéndénisénna lōkadi śéşagirivāsa ll17ll
Jaya jayatu śaţha kūrma rūpané l
Jaya jayatu kiţa simha vāmana l
Jaya jayatu bhŗgurāma Raghukula sōma śrīrāma ll
Jaya jayatu śiryaduvaréņyané l
Jaya jayatu jana mōhabudhdhané l
Jaya jayatu kali kalmaşaghnané kalkināmakané ll18ll
Karuņasāgara nīné nijapada l
Śaraņavatsala nīné śāśvata l
Śaraņajanamandāra kamalākānta jayavanta ll
Niruta ninnanu nutisi pāďuvé l
Varada guru jagannāthaviţhala l
Parama prémadi poréyo énnanu śéşagirivāsa ll
Śrīmadhvéśaśrīkŗşņārpaņamastu ll
***
|| ಹರೇಶ್ರೀನಿವಾಸ ||
***
ಶ್ರೀರಮಣ ಸರ್ವೇಶ ಸರ್ವದ |
ಸಾರಭೋಕ್ತ ಸ್ವತಂತ್ರ ಸರ್ವದ |
ಪಾರಮಹಿಮೋಧಾರ ಸದ್ಗುಣ ಪೂರ್ಣ ಗಂಭೀರ |
ಸಾರಿದವರಘದೂರಗೈಸಿ ಸೂರಿಜನರಿಗೆ ಸೌಖ್ಯ ನೀಡುವ |
ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ || ೧ ||
ಘನ್ನಮಹಿಮಾ ಪನ್ನ ಪಾಲಕ |
ನಿನ್ನ ಹೊರ ತಿನ್ನನ್ಯ ದೇವರ |
ಮನ್ನದಲಿ ನಾ ನೆನೆಡಸೆ ನೆಂದಿಗು ಬನ್ನ ಪಡಿಸದಿರು |
ಏನ್ನ ಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ |
ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀನೆನ್ನ|| ೨ ||
ಲಕುಮಿ ಭಬೂಮ್ಮ ಭವಾಮರೇಶರು|
ಭಕುತಿ ಪೂರ್ವಕ ನಿನ್ನ ಭಜಿಸಿ|
ಸಕಲ ಲೋಕಕೆ ನಾಥರೆನಿಪರು ಸರ್ವ ಕಾಲದಲಿ|
ನಿಖಿಲ ಜೀವರ ಪೋರೆವೊ ದೇವನೆ|
ಭಕುತಿ ನೀ ಯೆನಗೀಯ ದಿರಲು|
ವ್ಯಕುತವಾಗ್ಯಪಕೀರ್ತಿಬಪ್ಪದೂ ಶ್ರೀನಿಕೇತನನೆ || ೩ ||
ಯಾಕೆ ಪುಟ್ಟದು ಕರುಣ ಎನ್ನೊಳು |
ಸಾಕಲಾರೆಯ ನಿನ್ನ ಶರಣನ |
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ |
ನೋಕನೀಯನೆ ನೀನೆ ಎನ್ನನು |
ಜೋಕೆಯಿಂದಲಿ ಕಾಯೋ ಬಿಡದೆ |
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೪ ||
ಅಂಬುಜಾಂಬಕ ನಿನ್ನ ಪದಯುಗ |
ನಂಬಿಕೊಂಡೀ ಪರಿಯಲಿರುತಿರೆ |
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ |
ಬಿಂಬ ಮೂರುತಿ ನಿನ್ನ ಕರಗತ |
ಕಂಬುವರವೇ ಗತಿಯೋ ವಿಶ್ವಕುಟುಂಬಿ |
ಎನ್ನನು ಸಲಹೋ ಸಂತತ ಶೇಷಗಿರಿವಾಸ || ೫ ||
ಸಾರಸಿರಿ ವೈಕುಂಠ ತ್ಯಜಿಸಿ|
ಧಾರುಣಿಯೊಳು ಗೊಲ್ಲನಾಗಿ|
ಚೋರ ಕರ್ಮವ ಮಾಡಿ ಬದುಕಿಹ ದಾರಿಗರಿ ಕಿಲ್ಲ||
ಸಾರಿ ಪೇಳುವೆ ನಿನ್ನ ಗುಣಗಳ|
ಪಾರವಾಗಿರುತಿಹೊ ಜನರಿಗೆ|
ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಯೆನ್ನ || ೬ ||
ನೀರ ಮುಳುಗಿ ಭಾರಪೊತ್ತು|
ಧಾರುಣೀತಳವಗೆದು ಸಿಟ್ಟಿಲಿ|
ಕ್ರೂರನುದರವ ಸೕಿಳಿ ಕರುಳಿನ ಮಾಲೆ ಧರಿಸಿದರು||
ಪೋರ ವಿಪ್ರ ಕುಠಾರಿ ವನವನ|
ಚಾರಿ ಗೋಪ ದಿಗಂಬರಾಶ್ವವ|
ಏರಿ ಪೋದರು ಬಿದಡೆನೋ ವೇಂಕಟ ಶೇಷಗಿರಿವಾಸ || ೭ ||
ಲಕ್ಷ್ಮಿನಾಯಕ ಸಾರ್ವ ಭೌಮನೆ|
ಪಕ್ಷಿವಾಹನ ಪರಮ ಫುರುಷನೆ|
ಮೋಕ್ಷದಾಯಕ ಪ್ರಾಣ ಜನಕನೆ ವಿಸ್ವ ವ್ಯಾಪಕನೆ||
ಅಕ್ಷಯಾಂಬರವಿತ್ತಿ ವಿಜಯನ|
ಪಕ್ಷಪಾತವ ಮಾಡಿಕುರುಗಳ
ಲಕ್ಷ್ಯಮಾಡದೆ ಕೊಂದೆಯೊ ಶ್ರೀ ಶೇಷಗಿರಿವಾಸ || ೮ ||
ಹಿಂದೆ ನೀ ಪ್ರಹ್ಲಾದಗೋಸುಗ |
ಎಂದು ನೋಡದ ರೂಪ ಧರಿಸಿ |
ಬಂದು ದೈತ್ಯನ ಒಡಲ ಬಗೆದು ಪೊರೆದೆ ಬಾಲಕನ |
ತಂದೆತಾಯ್ಗಳ ಬಿಟ್ಟು ವಿಪಿನದಿ |
ನಿಂದು ತಪಿಸುವ ಪಂಚವತ್ಸರ |
ಕಂದನಾ ಧ್ರುವಿ ಗೊಲಿದು ಪೊರೆದೆಯೊ ಶೇಷಗಿರಿವಾಸ || ೯ ||
ಮಡುವಿನೊಳಗಿಹ ಮಕರಿ ಕಾಲನು|
ಪಿಡಿದು ಬಾಧಿಸೆ ಕರಿಯು ತ್ರಿಜಗ|
ದ್ವಡೆಯ ಪಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ||
ಮಡದಿ ಮಾತನು ಕೇಳಿ ಬಲು ಪರಿ|
ಭಡವ ಬ್ರಾಹ್ಮಣ ಧಾನ್ಯ ಕೋಡಲು|
ಪೋಡವಿಗಸದಳ ಭಾಗ್ಯನೀಡಿದೆ ಶೇಷಗಿರಿವಾಸ || ೧೦ ||
ಪಿಂತು ಮಾಡಿದ ಮಹಿಮೆಗಳ ನಾ|
ನೆಂತು ವರ್ಣಿಸಲೇನು ಫಲ|
ಶ್ರೀಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ ||
ಕಂತು ಜನಕನೆ ಎನ್ನ ಮನಸಿನ |
ಅಂತರಂಗದಿ ನೀನೆ ಸರ್ವದ |
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || ೧೧ ||
ಶ್ರೀನಿವಾಸನೆ ಭಕ್ತಪೋಷನೆ |
ಜ್ಞಾನಿ ಕುಲಗಳಿಗ ಭಯದಾಯಕ |
ಧೀನಬಾಂಧವ ನೀನೆ ಎನ್ನ ಮನದರ್ಥ ಪೂರೈಸೋ ||
ಅನುಪಮೋಪಮ ಜ್ಞಾನ ಸಂಪದ |
ವಿನಯ ಪೂರ್ವಕ ವಿತ್ತು ಪಾಲಿಸೊ |
ಜನುಮ ಜನುಮಕೆ ಮರೆಯ ಬೇಡವೋ ಶೇಷಗಿರಿವಾಸ || ೧೨ ||
ಮದವು ಮತ್ಸರ ಲೋಭ ಮೋಹವು |
ಒದಗಬಾರದು ಎನ್ನ ಮನದಲಿ |
ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು ||
ಹೃದಯ ಮಧ್ಯದಿ ನಿನ್ನ ರೂಪವು |
ವದನದಲಿ ತವ ನಾಮಮಂತ್ರವು |
ಸದಯ ಪಾಲಿಸು ಬೇಡಿಕೊಂಬೇನು ಶೇಷಗಿರಿವಾಸ || ೧೩ ||
ಅಂದನುಡಿ ಪುಸಿಯಾಗಬಾರದು |
ಬಂದ ಭಾಗ್ಯವು ಪೋಗಬಾರದು |
ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |
ನಿಂದೆ ಮಾಡುವ ಜನರ ಸಂಗವು |
ಎಂದಿಗಾದರು ದೊರೆಯಬಾರದು |
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೧೪ ||
ಏನು ಬೇಡಲಿ ಎನ್ನ ದೇವನೇ |
ಸಾನುರಾಗದಿ ಎನ್ನ ಪಾಲಿಸೊ |
ನಾನಾ ವಿಧವಿಧ ಸೌಖ್ಯ ನಿಡುವು ದಿಹಪರಂಗಳಲಿ ||
ಶ್ರೀನಿವಾಸನೆ ನಿನ್ನ ದಾಸಗೆ |
ಏನು ಕೊರೆತಿಲೆಲ್ಲಿ ನೋಡಲು |
ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ || ೧೫ ||
ಆರು ಮುನಿದವರ್ ಏನು ಮಾಳ್ಪರೊ |
ಆರು ವೊಲಿದವರೇನು ಮಾಳ್ಪರೊ |
ಆರು ನೇಹಿಗರ್ ಆರು ದ್ವೇಷಿಗಳ್ ಆರು ದಾಶಿನರು ||
ಕ್ರೊರ ಜೀವರಹಣಿದು ಸಾತ್ವಿಕ |
ಧೀರ ಜೀವರ ಪೊರೆದು ನಿನ್ನಲಿ |
ಸಾರ ಭಕುತಿಯ ನಿತ್ತು ಪಾಲಿಸೋ ಶೇಷಗಿರಿವಾಸ || ೧೬ ||
ನಿನ್ನ ಸೇವೆಯನಿತ್ತು ಎನಗೆ |
ನಿನ್ನ ಪದಯುಗಭಕ್ತಿ ನೀಡಿ |
ನಿನ್ನ ಗುಣಗಣ ಸ್ತವನ ಮಾಡುವ ಜ್ಞಾನ ನೀನಿತ್ತು ||
ಎನ್ನ ಮನದಲಿ ನೀನೆ ನಿಂತು |
ಘನ್ನ ಕಾರ್ಯವ ಮಾಡಿ ಮಾಡಿಸು |
ಧನ್ಯ ನೆಂದೆ ನಿಸೆನ್ನ ಲೋಕದಿ ಶೇಷಗಿರಿವಾಸ || ೧೭ ||
ಜಯ ಜಯತು ಶಠ ಕೂರ್ಮರೂಪನೆ |
ಜಯ ಜಯತು ಕಿಟ ಸಿಂಹ ವಾಮನ |
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ ||
ಜಯ ಜಯತು ಸಿರಿ ಯದುವರೇಣ್ಯನೆ |
ಜಯ ಜಯತು ಜನಮೋಹ ಬುದ್ದನೆ |
ಜಯ ಜಯತು ಕಲಿಕಲ್ಮಷ ಘ್ನನೆ ಕಲ್ಕಿನಾಮಕನೆ || ೧೮ ||
ಕರುಣಸಾಗರ ನೀನೆ ನಿಜಪದ |
ಶರಣವತ್ಸಲ ನೀನೆ ಶಾಶ್ವತ |
ಶರಣ ಜನ ಮಂದಾರ ಕಮಲ ಕಾಂತ ಜಯವಂತ ||
ನಿರುತ ನಿನ್ನನು ನುತಿಸಿ ಪಾಡುವೆ |
ವರದ ಗುರು ಜಗನ್ನಾಥ ವಿಠ್ಠಲ |
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೯ ||
|| ಶ್ರೀಕೃಷ್ಣಾರ್ಪಣಮಸ್ತು ||
****
ಶ್ರೀ ಶ್ರೀನಿವಾಸ ದಯಾನಿಧೇ 🙏
ಗುರುಜಗನ್ನಾಥದಾಸಾರ್ಯ ವಿರಚಿತ
ತಾರತಮ್ಯ ಪದ್ಯಮಾಲಾ
ಶ್ರೀರಮಣ ಸರ್ವೇಶ ಸರ್ವಗ| ಸಾರಮಹಿಮಾನಂತರೂಪ ಉ-|
ದಾರಗುಣ ಸಾಕಾರ ನಿರ್ಜಿತ ದೋಷ ಸುರಮಾಯಾ||
ನಾರಿ ರೂಪದಿ ಹಿಂದೆ| ಗೌರೀವರನ ಮೋಹವಗೊಳಿಸಿ ಸಲಹಿದ|
ಪಾರಮಹಿಮನೆ ನಮನ ಮಾಳ್ಪೆನು ಪೊರೆಯೋ ನಿತ್ಯದಲಿ||1||
ನಿರುಪಮನ ಗುಣರೂಪ ಮನದಲಿ|
ನಿರುತ ನೋಡುತ ಎಣಿಸಿ ಗುಣಿಸುತ` ಅರಿಯಳಳವಲ್ಲವೆಂದಿಗೂ ಮರುಳು ಯಾಕೆಂದು||
ಹರುಷವಾರಿಧಿ ಮಗ್ನಳಾಗೀ ಪರಮ ಧ್ಯಾನವ ಗೈವ ಲಕುಮಿ| ಎರಗಿ ನಾ ಬಿನ್ನೈಸಿ ಬೇಡುವೆ ಪೊರಿಯೆ ಮಜ್ಜನನಿ ||2||
ಹರಿಯ ನಾಭೀಕಮಲಸಂಭವ| ಸರಸಿಜಾಂಡವ ಸೃಜಿಸಿ ಪೊರೆಯುವ|
ಗರುಡ ಶೇಷರ ಗುರುವೇ ನಿರುತದಿ ಮನದಿ ಧ್ಯಾನಿಸುವೆ|
ಅರುಹು ಪರತತ್ವವನು ನಿರುತದಿ|
ಬೆರಸು ಸಜ್ಜನ ಸ್ತೋಮದಲಿ ನೀ|
ಪರಮ ಕರುಣದಿ ಕಾಯೋ ವಾಣೀ ವಿನುತ ಗುಣಪೂರ್ಣ
||3||
ತ್ರಿವಿಧ ಚೇತನರೊಳಗೆ ನಿಂತು| ತ್ರಿವಿಧ ಕರ್ಮವ ಮಾಡಿ ಸರ್ವದ|
ತ್ರಿವಿಧ ಶ್ವಾಸ ಸುರೂಪ ಜಪಗಳ ಮಾಡಿ ತ್ರಿವಿಧರಿಗೆ||
ತ್ರಿವಿಧ ಗತಿಯನು ಸಲಿಸಿ ಪಾಲಿಪ|
ಪವನರಾಯನೇ ವಿನಯಪೂರ್ವಕ| ಸವನತ್ರಯದಲಿ ನಮಿಸಿ ಬೇಡುವೆ ದಿವಿಜರೋತ್ತಮನೆ
||4||
ವಾಣಿ ಭಾರತಿ ದೇವೇರಡಿಗೇ| ಪಾಣಿಯುಗಳವ ಮುಗಿದು ಬೇಡುವೇ|
ಕ್ಷೋಣಿತಳದೊಳಗೆನ್ನ ಜನ್ಮವ ಸಫಲ ಮಾಡೆಂದೂ||
ಮಾಣವಕ ನುಡಿ ಮನಕೆ ತಂದೂ|
ಜಾಣತನದಿಂ ಕವಿತೆ ಪೇಳುವ| ವಾಣಿ ಪಾಲಿಸಲೆಂದು ಈರ್ವರ ನಮಿಪೆನನವರತ ||5||
ವೇದಶತತತಿ ಅರ್ಥವೆನಿಸುವ| ಆದಿ ಸೂತ್ರ ಪುರಾಣ ಭಾರತ| ಭೇದನಿರ್ಣಯ ಭಾಗವತ ಮೊದಲಾದ ಗ್ರಂಥಗಳ||
ಸಾದರದಿ ನಿರ್ಣಯಿಸಿ ಪೇಳಿದ| ಬಾದರಾಯಣ ನಮಿಸಿ ಪ್ರಾರ್ಥಿಪೆ|
ಮೋದ ಜ್ಞಾನ ಸುಭಕ್ತಿ ಪಾಲಿಸೋ ಪರಮ ಕರುಣಾಳು
|| 6||
ಏಕವಿಂಶತಿ ಮತಗಳಳಿಯುತ|
ಕಾಕು ಮಾಯ್ಗಳ ಮುರಿದು ಮಾನವ|
ಲೋಕದೊಳು ತಾನೇಕ ಸಜ್ಜನ ತತಿಗೆ ನಿತ್ಯದಲಿ||
ಏಕೋ ನಾರಾಯಣನೇ ಸರ್ವ ದಿ-|
ವೌಕಪಾಲಕನೆಂಬೊ ತನ್ನಯ|
ವಾಕ ಸ್ಥಾಪನೆ ಗೈದು ಮೆರೆದಾ ಮುನಿಪಗೊಂದಿಸುವೆ||7||
ನಂದಿವಾಹನ, ಚಂದ್ರಚೂಡನೆ| ಕಂದುಕಂಧರ,ಕಾಳಿರಮಣನೆ|ದಂಧಶೂಶಕಕಲಾಪ ಮೃಗಕರ ಢಮರು ಧೃತಶೂಲ||
ವಂದಿತಾಮರತರುವೆ ಸುರವರ|ವೃಂದಪೂಜಿತ ಪಾದಪಂಕಜ| ವಂದಿಸೀಪರಿ ನಿನ್ನ ಬೇಡುವೆ ಎನ್ನ ಪೊರಿ ಎಂದು||8||
ವಾಸವನೆ ಮೊದಲಾದ ಸಕಲಮ|
ರೇಶ ಋಷಿ ಗಂಧರ್ವ ಪಿತರು ನ|
ರೇಶ ಗಣಕಾನಮಿಸಿ ಯತಿವರ ತತಿಗೆ ನಮಿಸುವೆನು||
ದಾಸವರ್ಯರ ಪಾದಪದುಮಕೆ| ಸೋಸಿನಿಂದಲಿ ನಮಿಸಿ ಸಂತತ| ಭೂಸುರಾರ್ಯರ ಸ್ತೋಮಕೊಂದಿಪೇ ದಾಸ ನಾನೆಂದೂ||9||
ಹರಿಯ ಮತಪರರಾದ ವೈಷ್ಣವ|
ವರರ ಪರಮಾದರದಿ ಮನದಲಿ|
ಸ್ಮರಿಸಿ ನಮಿಸಲು ಹರಿಯು ಕರುಣದಿ ಬಯಕೆ ಪೂರೈಪ||
ತರುಣಿ ತನಯರು ಧಾನ್ಯ ಧನವು|
ಪರಮ ಭಕುತಿ ಜ್ಞಾನ ಸುಖವನು|
ಕರೆದು ನೀಡುವ ನಮ್ಮ ಗುರುಜಗನ್ನಾಥವಿಠ್ಠಲನು
||10||
***
ದೇವತಾ ತಾರತಮ್ಯದ ಜ್ಞಾನವು ಮೋಕ್ಷ ಸಾಧನ.
ಇಂದ್ರಿಯಾಣಾಂ ಪೃಥಗ್ಭಾವಂ
ಉದಯಾಸ್ತಮಯೌ ಚ ಯತ್ |
ಪೃಥಗುತ್ಪದ್ಯಮಾನಾನಾಂ ಮತ್ವಾ ಧೀರೋ ನ ಶೋಚತಿ ॥
ಪರಸ್ಪರ ವಿಲಕ್ಷಣಗಳಾಗಿಯೇ ಉತ್ಪನ್ನವಾಗುವ ಮತ್ತು ವಿಲಕ್ಷಣ ಕಾರ್ಯಗಳನ್ನೇ ಮಾಡುವ, ಇಂದ್ರಿಯಾಭಿಮಾನಿ ದೇವತೆಗಳ ಪರಸ್ಪರ ವಿಲಕ್ಷಣ್ಯವನ್ನು, ಅವರ ತಾರತಮ್ಯವನ್ನು ಮತ್ತು ಉತ್ಪತ್ತಿ ನಾಶಗಳನ್ನು ತಿಳಿದಿರುವ ಜ್ಞಾನಿಯು ದುಃಖವನ್ನು ಹೊಂದುವದಿಲ್ಲ.ಮುಕ್ತನಾಗುತ್ತಾನೆ.
ತಾರತಮ್ಯ ಪರಿಜ್ಞಾನೇ ಮಹಾತಾತ್ಪರ್ಯಮಿಷ್ಯತೇ
ಶ್ರೀ ಮದಾಚಾರ್ಯರ ಅಮೃತ ವಾಣಿಯಿದು...
ಅದರಂತೆ ಶ್ರೀ ಮಾನವೀಪ್ರಭುಗಳು
ತಾರತಮ್ಯಜ್ಞಾನ ಮುಕ್ತಿ-|
ದ್ವಾರವೆನಿಪುದು ಭಕ್ತಜನರಿಗೆ|
ತೋರಿ ಪೇಳಿ ಸುಖಾಬ್ಧಿಯೊಳು ಲೋಲ್ಯಾಡುವುದು ಬುಧರು||
ಕ್ರೂರಮಾನವರಿಗಿದು ಕರ್ಣಕ-|
ಠೋರವೆನಿಪುದು ನಿತ್ಯದಲಿ ಅಧಿ-|
ಕಾರಿಗಳಿಗಿದನರುಪುವುದು ದುಸ್ತರ್ಕಿಗಳ ಬಿಟ್ಟು||
ಗುಣತಾರತಮ್ಯ ಸಂಧಿ /೨೩
***
No comments:
Post a Comment