Wednesday, 1 September 2021

ಸದ್ಗುರು ಭಕ್ತಿ ಲೇಸು ಲೇಸು ಸದ್ಭಕ್ತಿಗೊಂದು ಗುರುಕೃಪೆಯೆ ಲೇಸು ankita mahipati

ಸದ್ಗುರು ಭಕ್ತಿ ಲೇಸು ಲೇಸು ಸದ್ಭಕ್ತಿಗೊಂದು ಗುರುಕೃಪೆಯೆ ಲೇಸು ಪ  


ಒಂದೆ ಸುಪಥ ಲೇಸು ಹೊಂದಿ ಬಾಳುವದು ಲೇಸು ಪಾದ ಕಾಂಬುವದೆ ಲೇಸು 1 

ನಡೆ ನುಡಿ ಒಂದೆ ಲೇಸು ದೃಢಭಾವನೆಯು ಲೇಸು ಪಿಡಿಯುವನು ಸಂಧಾನಧ್ಯಾತ್ಮದ ಲೇಸು 2 

ಗುರುದೈವೆಂಬುದೆ ಲೇಸು ಅರಿತು ಬೆರೆವುದು ಲೇಸು ಸರಕ್ಕನೆ ಸಾಧಿಸಿಕೊಂಬಾನುಭವ ಲೇಸು 3 

ಒಳಮುಖನಾಗುವದೆ ಲೇಸು ತಿಳಿಯುವಾತನ ಮನ ಲೇಸು ಬೆಳಗಿನೊಳಿಹ್ಯ ಬೆಳಗು ಹೊಳೆವ ಲೇಸು 4 

ತನ್ನ ತಾ ತಿಳಿವದೆ ಲೇಸು ಉನ್ಮನವಾಗುದೆ ಲೇಸು ಪಾದ ನಂಬುದೆ ಲೇಸು 5 

ಅರ್ತರೆ ಗುರುವಾಕ್ಯ ಲೇಸು ಬೆರ್ತರೆ ಗುರುಪಾದ ಲೇಸು ನಿರ್ತದಿಂದಾಗುವ ಪೂರ್ಣ ಗುರ್ತವೆ ಲೇಸು 6 

ಗುರುಶರಣ್ಹೋಗುದೇ ಲೇಸು ಕರುಣ ಪಡೆವದೆ ಲೇಸು ತರಳ ಮಹಿಪತಿಗಿದೆ ಸುಖವೆ ಲೇಸು 7

***

 

No comments:

Post a Comment