ಕಾಖಂಡಕಿ ಶ್ರೀ ಮಹಿಪತಿರಾಯರು
ಸದ್ಗುರುವಿನ ಕೃಪೆ ಸದ್ಗತಿ ಸುಖದೋರಿತು ಪ
ಮಸ್ತಕದ ಮ್ಯಾಲೆ ಅಭಯ ಹಸ್ತ ತಾವಿಡಲಿಕ್ಕೆ ಸ್ವಸ್ತಹೊಂದಿತು ಮನವು ವಸ್ತುದ ಸುಳವಿಲೆ 1
ಕರುಣಿಸಿ ನೋಡಲಿಕ್ಕೆ ಕರಗಿಹೋಯಿತು ಮಹಾಪಾಪ ಸೆರಗು ಸಿಲುಕಿತು ಸುಪಥ ಪರಮಾನಂದದ 2
ಹರುಷಾನಂದವಾಯಿತು ತರಳ ಮಹಿಪತಿಗೆ ಗುರುನಾಮಾಮೃತ ಸೇವಿಸಿ ವರಕೃಪೆಯಿಂದ 3
***
No comments:
Post a Comment