Wednesday 6 November 2019

ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ankita pranesha vittala

ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪಕಂಜಹರನ ಪಿತನಪಾದ|ಕಂಜನಿರತಭಜಿಸುತಿರಲು ||ಅ.ಪ||

ಎರಡು ಒಂದು ಕೋಟಿರೂಪ|
ಧರಿಸಿ ರಕ್ಕಸರೊಳು ಕಾದಿ ||
ಹರಿಯ ಕರುಣ ಗಳಿಸಿದವನ |
ಚರಿತೆಗಳನು ಸ್ಮರಿಸುತಿರಲು 1

ತಾಸಿಗೆಂಟು ಒಂದು ನೂರು |
ಶ್ವಾಸಜಪವ ಮಾಡಿ ಜಂತು ||
ರಾಶಿಗಳಿಗೆ ಸತತ ಬೇಡಿ |
ದಾಸೆ ಪೂರ್ತಿಸುವವನಿರಲು2

ಜಂಗಮರಿಗೆಪಾಣಿಚರಣ|
ಕಂಗಳುಕಿವಿಯಾಡಿಸುತಲಿ ||
ಪಿಂಗಳನಿಭಭಾರತೀಶ|
ಹಿಂಗದನವರತ ಪೊರೆಯಲು 3

ಪರಿಹರಿಸುತಲಗ್ನಿ ಭಯವ |
ತ್ವರದಿ ಹಿಡಿಂಬ ಕೀಚಕ ಪ್ರಮು |
ಖರನು ಕುರುಪತಿಯ 
ಕುಲವತರಿದ ಕುಂತೀ ಕುವರನಿರಲು 4

ಭುಜಕೆ ಗೋಪೀಚಂದನವನು |
ವಿಜಯಚಕ್ರಗಳನು ಧರಿಸಿ ||
ಕುಜನರಿಪುಪ್ರಾಣೇಶ ವಿಠಲ |
ಭಜಕನ ದಯ ಪೂರ್ಣವಿರಲು 5
*******

No comments:

Post a Comment