ಕಾಖಂಡಕಿ ಶ್ರೀ ಕೃಷ್ಣದಾಸರು
ತೋರವ್ವಾ ಗೆಳತಿ ಶ್ರೀರಂಗನ ಭವಭಂಗನಾ| ತೋರೆ ಕೋಮಲಾಂಗನಾ ಪ
ಅನಾದಿ ಬಾಂದವನೆನುತಲಿ|ಶೃತಿ ಹೊಗಳಲಿ| ಶರಣನೀಗ ಬಂದಾ| ಶ್ರೀನಿಧಿ ತುಷ್ಟನು ಭಕ್ತಿಲಿ|ಯಂದು ಕೇಳಲಿ| ಮುಂದ ಗಾಣದೆ ನಿಂದಾ1
ಜಗಂಗದಂತರ್ಯಾಮಿಯನಿಸುವ|ಮನೆಮುರಿಲಿಹ| ಕಂಗಳಿಗೆ ದೋರನಮ್ಮಾ| ಮುಗಧಿಯೊಡನೆ ಠಕ್ಕವಳಿಯಾ|ದೋರುವರೇಕೈಯ್ಯಾ| ಬಿರುದಿಗೆ ಛಂದೇನಮ್ಮಾ2
ಹಂಬಲಿಸುತ ಕಾವನೆನೆಯಲುಛಂದಾ|ಸ್ವಾನುಭಾವದಿಂದ| ಡಿಂಬಿನೊಳು ಒಡಮೂಡಿ| ನಂಬಿದವರ ಕಾವಾ ಮಹಿಪತಿ ಸುತಸಾರಥಿ| ಕೊಟ್ಟನಿಂಬವ ಕೂಡೀ3
***
No comments:
Post a Comment