ರಾಗ ಬಾಗೇಶ್ರೀ ಖಂಡಛಾಪುತಾಳ
1st Audio by Mrs. Nandini Sripad
ವಂದಿಸುವೆ ಗುರುರಾಘವೇಂದ್ರಾರ್ಯರಾ ।
ವೃಂದಾವನಕೆ ಪ್ರತಿಪ್ರತಿ ದಿನಗಳಲ್ಲಿ ॥ ಪ ॥
ಸುವಿರೋಧಿ ವತ್ಸರದಿ ಶ್ರಾವಣಪರ ದ್ವಿತೀಯ ।
ಕವಿವಾರ ತುಂಗಭದ್ರಾ ತೀರದಿ ॥
ನವಸುಮಂತ್ರಾಲಯದಿ ದೇಹ್ಯವನು ಬಿಟ್ಟು ಮಾ -।
ಧವನ ಪುರವೈದಿದ ಮಹಾತ್ಮರಿವರಹುದೆಂದು ॥ 1 ॥
ಸ್ವಪದಾವಲಂಬಿಗಳಿಗೆ ಉಪನಿಷತ್ ಖಂಡಾರ್ಥ ।
ಉಪದೇಶಗೈದು ಕಾಶ್ಯಪಿ ಸುರರನು ॥
ಪ್ರಪುನೀತರನು ಮಾಡಿ ಅಪವರ್ಗದವರೊಳಗೆ ।
ಉಪಮರಿಲ್ಲೆಂದುರುಪಿದ ಉಪಕಾರಿಗಳ ಕಂಡು ॥ 2 ॥
ದೇವತೆಗಳಿವರು ಸಂದೇಹ್ಯ ಬಡಸಲ್ಲ ವೃಂ -।
ದಾವನವ ರಚಿಸಿ ಪೂಜಿಪ ಭಕ್ತರ ॥
ಸೇವೆ ಕೈಕೊಂಡವರ ಮನೋರಥವ ಲ -।
ಕ್ಷ್ಮೀವರ ಜಗನ್ನಾಥವಿಠ್ಠಲಗೆ ಪ್ರಿಯರೆಂದು ॥ 3 ॥
***
Vandisuve gururagavendraryara || pa ||
Vrundavana pratikadi pratidivasagalali || a |
|suvirodhivatsara sravana paradvitiyakavivara tungabadratiradanavasumantralayadi
Dehavanu bittu madhavana purakaidida mahatmarivarendu || 1 ||
Svapadavalanbigaligupanishat kandartha^^upadesagaidu kasyapisuraranuprapunitaranu
Madi apavargamargavanu^^upadesisida parama upakarigala kandu || 2 ||
Devategalivaridake sandehavilla vrundavanava racisi pujipa baktaraseve kaikondu
Koduvaru manorathavalakshmivara jagannathaviththala priyarendu || 3 ||
***
ವಂದಿಸುವೆ ಗುರು ರಾಘವೇಂದ್ರಾರ್ಯರ|
ವಂದಿಸುವೆ ಗುರು ರಾಘವೇಂದ್ರಾರ್ಯರ|
ವೃಂದಾವನ ಪ್ರತೀಕಕೆ ಪ್ರತಿ ದಿನ ದಿನಾ || ಪ. ||
ಸುವಿರೋಧಿ ವತ್ಸರದಿ ಶ್ರಾವಣ ಪರದ್ವಿತೀಯ|
ಕವಿವಾರ ತುಂಗಭದ್ರಾ ತೀರದಿ|
ನವ ಸುಮಂತ್ರಾಲಯದಿ ದೇಹವನು ಬಿಟ್ಟು| ಮಾ-
ನವ ಸುಮಂತ್ರಾಲಯದಿ ದೇಹವನು ಬಿಟ್ಟು| ಮಾ-
ಧವನ ಪುರಕೈದಿದ ಮಹಾತ್ಮರಿವರಹುದೆಂದು || ೧ ||
ಸ್ವಪದಾವಲಂಬಿಗಳಿಗುಪನಿಷತ್ ಖಂಡಾರ್ಥ
ಉಪದೇಶಗೈದು ಕಾಶ್ಯಸುರರನಾ|
ಪ್ರಪುನೀತರನು ಮಾಡಿ ಅಪವರ್ಗ ದಾಸರೊಳ್|
ಉಪಮರಿಲ್ಲೆಂದರುಪಿದುಪಕಾರಿಗಳ ಕಂಡು || ೨ ||
ದೇವತೆಗಳಿವರಿದಕೆ ಸಂದೇಹ ಬಡಸಲ್ಲ ವೃಂ
ದಾವನವ ರಚಿಸಿ| ಪೂಜಿಪ ಭಕ್ತರ|
ಸೇವೆ ಕೈ ಕೊಂಡವರ ಮನೋರಥವ ಸಲಿ
ಶ್ರೀ ವರ ಜಗನ್ನಾಥ ವಿಠಲ ಗತಿ ಪ್ರಿಯರೆಂದು || ೩ ||
********
No comments:
Post a Comment