Sunday, 1 August 2021

ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ ankita mohana vittala

 ..

ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ ಪ


ಮಾಯವ್ಯಾತಕೆ ಎನ್ನ | ಪ್ರೀಯ ಸಖನೆ ಲೋಕನಾಯಕ ನೀನಿರೆ ಕಾಯೆ ಕಂಡವರಾ ಅ.ಪ.


ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿದೂರಾ ನೋಡುವದು ಉದಾರ ಉಚಿತವೆ 1

ಇಂದಿರೆಯರಸ ಗೋವಿಂದ ನಿನ್ನಯ ಪಾದದ್ವಂದ್ವ ನಂಬಿದವನ ಕುಂದೆಣಿಸುವರೇ 2

ಪನ್ನಂಗ ಶಯನ ಸುಪರ್ಣ ಗಿರೀಶಾ ಸು-ಪರ್ಣ ವಾಹನ ಮೋಹನ್ನ ವಿಠ್ಠಲನೇ 3

***


No comments:

Post a Comment