Wednesday, 1 September 2021

ನೀನಲ್ಲದಿನ್ನಾರು ಸಲಹುವರು ಹರಿಯೆ ankita gadugina veeranarayana

 ..

kruti by ವೀರನಾರಾಯಣ Veeranarayana 


ನೀನಲ್ಲದಿನ್ನಾರು ಸಲಹುವರು ಹರಿಯೆ ಪ


ನಾನನ್ಯರನು ಕಾಣೆನೆಲ್ಲಿಯೂ ಕೇಳ್ದರಿಯೆ ಅ.ಪ.


ಪೋರ ಶಶಿಹಾಸನನು ತಂದೆ ತಾಯ್ಸಲುಹಿದರೆಧೀರ ಪ್ರಲ್ಹಾದನನು ತಂದೆ ತಾಯ್ ಸಲುಹಿದರೆವೀರ ಕರ್ಣನ ಹಡೆದ ತಾಯಿ ಸಲುಹಿದಳೆನಾರಿ ದ್ರೌಪದಿಯನ್ನು ಭರ್ತೃಗಳು ಸಲುಹಿದರೆ 1


ಮಡದಿಯನು ಗಜವರನ ಮೊಸಳೆಯಿಂ ಸಲುಹಿದರೆಒಡಹುಟ್ಟಿದರ್ಜುನನ ಕರ್ಣ ತಾ ಸಲುಹಿದನೆಕಡುಗಲಿಯ ವಾಲಿಯನು ಸುಗ್ರೀವ ಸಲುಹಿದನೆಗಡ ಬಬ್ರುವಾಹನನು ತಂದೆಯನು ಸಲುಹಿದನೆ 2


ಪುಸಿಯಲ್ಲದೆಲ್ಲವನು ಸಲಹುವಾತನೆ ನೀನುಪಿಸುಣರೈ ಸಲಹುವರು ತಾವೆಂದು ಗಳಹುವರುಉಸಿರು ಗದುಗಿನ ವೀರನಾರಾಯಣನೆ ನೀನು 3

***


No comments:

Post a Comment