Friday, 17 December 2021

ಕೇಳೋ ನಂದ ಇದು ಏನು ಚೆಂದ ಹಾಲಿನ ankita bheemesha vittala KELO NANDA IDU ENU CHANDA HAALINA



ಕೇಳೋನಂದ ಇದು ಏನು ಚೆಂದ

ಹಾಲಿನ್ಹರವಿಯ ಒಡೆದೋಡಿ ಬಂದು

ಬಾಲರನು ಕೂಡ್ಯಾಡಿ ಗೋವಿಂದ

ಬವಣೆಬಡಿಸುವ ಬಲುಬಗೆಯಿಂದ ಪ


ಕಣ್ಣ ತೆರೆದು ಉದಕದೊಳಾಡುವನು

ಸಣ್ಣ ಮೋರೆಯ ಮಾಡಿ ಬಗ್ಗುವನು

ಮಣ್ಣಕೆದರುತ ಕ್ರೋಡಾಗಿ ತಾನು

ಚಿನ್ನಸುರ ಎಲ್ಲೆ ಕರುಳ್ಹಾರ್ಹಾಕುವನು 1


ತಿರುಕನಂದದಿ ಬೇಡಿಕೊಂಬುವನೊ

ಗುರುತದಾರದರಿಯ ತಾಯ್ಹಂತಕನು

ದೊರೆತನವ ಬಿಟ್ಟಡವಿಲಿರುವವನು

ಶರತಮಾಡಿ ಮಾತುಳನ ಕೊಲ್ಲುವನು 2


ಬËದ್ಧರೂಪದಿ ಲಜ್ಜೆಗೆಡಿಸುವನು

ಎದ್ದು ತುರುಗನೇರ್ಯೋಡಿ ಪೋಗುವನು

ಕದ್ದು ಬೆಣ್ಣೆಯ ಮೆಲ್ಲುವ ತಾನು

ಮುದ್ದು ಭೀಮೇಶಕೃಷ್ಣ ಎಲ್ಲಿಹನು 3

****


No comments:

Post a Comment