..
kruti by ವೀರನಾರಾಯಣ Veeranarayana
ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ ಪ
ಹರಿಯನ್ನು ನಿನ್ನದೆ ಪರಿ ಮುಖದಿಂದಲೆಸರುವರು ಕಾಣಬೇಕೆಂಬರು ನೋಡೋ ಅ.ಪ.
ಪರಮಭಕ್ತ ನೀನೆಂದೂ ಎಂದೆಂದೂಹರಿಯ ಮೀರನೆಂದು ಒರೆವರು ಮನದಂದುಮೊರೆಯು ನನ್ನದು ಇಂದುಹರಿಗೆ ನಿವೇದಿಸು ಕರುಣಾಸಿಂಧು 1
ಒಡೆಯ ರಾಮಗೆ ನೀ ದೂತ ಎಂದಿಗೂ ಆತನಡೆಸುವ ನಿನ್ನ ಮಾತಬಡವ ನಾನೊಬ್ಬನು ಕಡು ಕರುಣೆಯ ಭಿಕ್ಷೆಕೊಡು ಎಂದು ಬೇಡುವೆನೆಂದು ನೀ ತಿಳಿಸುತ 2
ಹಾಯಗೊಡರು ಜೀಯಾ ಬಾಗಿಲದಲಿಕಾಯುವ ಜಯ ವಿಜಯಾಶ್ರೀಯರಸನ ಕಾಂಬುಪಾಯವ ಕಲಿಸಿಬಡಪಾಯೆನಗೆ ನೀ ನೀಡುತ ಕಯ್ಯಾ 3
ಸದಯನೆ ಕರುಣ ಬಂತೆ ಸಂಸಾರದಿಕುದಿಸುವದೆನ್ನ ಚಿಂತೆಗದುಗಿನ ವೀರನಾರಾಯಣನೆನ್ನೊಳು ಸದಾಕಾಲದಿ ಹೃದಯದಿ ನಿಲುವಂತೆ 4
***
No comments:
Post a Comment