..
ನಾರದ ಕೊರವಂಜಿ
ಜಯ ಜಯ ದಯಾಕರನೆ ಹಯವದನ ಭಯಹರನೆ
ಜಯ ಶೀಲಸಾಧ್ವರನೆ ಜಯ ದೀನೋದ್ಧರನೆ
ನಿಯತ ಶ್ರೀಭೂಧರನೆ ನಯಗುಣ ಸ್ವೀಕರನೆ
ಪ್ರಿಯಜನ ಮನೋಹರನೆÀ ಸುಯತಿ ಸಾಕಾರನೆ 1
ಹರಿಯೇ ಪತಿಯಾಗಬೇಕೆಂದು ರುಕುಮಿಣಿ
ಪರದೇವತೆಯ ನೆನವುತಿರಲು
ಕೊರವಂಜಿ ವೇಷದಿ ರುಕುಮಿಣಿದೇವಿಗೆ
ಪರಮ ಹರುಷವೀವೆನೆಂದು ನಾರದ ಬಂದ 2
ಧರಣಿ ಮಂಡಲದಲ್ಲಿ ನಾರದ
ಧರಿಸಿ ಕೊರವಂಜಿ ವೇಷವ
ಸುರನರಾದಿಗಳೆಲ್ಲರಿಗೆ ತಾ
ಪರಮ ಆಶ್ಚರ್ಯ ತೋರುತ್ತ 3
ಬಂದಳು ಕೊರವಂಜಿ ಚಂದದಿಂದಲಿ
ಮಂದಹಾಸವು ತೋರುತ್ತ
ಅಂದಿಗೆ ಪಾದ ಧಿಂಧಿಮಿ ಧಿಮಿ-
ಕೆಂದು ನಿಂದಭೀಷ್ಟವ ಪೇಳುತ 4
ಗಗನದಂತಿಹ ಮಧ್ಯವು ಸ್ತ-
ನಘನ್ನ ಭಾರಕೆ ಬಗ್ಗುತ
ಜಗವನೆಲ್ಲವ ಮೋಹಿಸಿ
ಮೃಗ ಚಂಚಲಾಕ್ಷದಿ ನೋಡುತ 5
ಕನಕಕುಂಡಲ ಕಾಂತಿಯಿಂದಲಿ
ಗಂಡಭಾಗವು ಹೊಳೆವುತ್ತ
ಕನಕಕಂಕಣ ನಾದದಿಂದಲಿ
ಕಯ್ಯ ತೋರಿ ಕರೆಯುತ್ತ 6
ಕುಂಕುಮಗಂಧದಿ ಮಿಂಚುವೈಯಾರಿ
ಚುಂಗು ಜಾರಲು ಒಲವುತ್ತ
ಕಿಂಕಿಣಿ ಸರಘಂಟೆ ಉಡಿಯೊಳು
ಘಲ್ಲು ಘಲ್ಲೆಂದು ಬಂದಳು
ಘಲ ಘಲ ಘಲ್ಲು ಘಲ್ಲೆಂದು ಬಂದಳು 7
ಕರೆದಾಳೆ ಸುಪಲ್ಲವ ಸುಪಾಣಿ ಕೀರವಾಣಿ
ಪರಿಮಳಿಸುವ ಫಣಿವೇಣಿ 8
ಪರಿಪರಿ ಬೀದಿಯಲ್ಲಿ ನಿಂದು ಹಿಂದೂ ಮುಂದೂ
ಸರಸವಾಡುತ್ತ ತಾನೆ ಬಂದು 9
ಕೊರವಂಜಿ ಯಾರೊಳಗೆ ನೋಡಿ ಕೂಡಿಯಾಡಿ
ಸರಿಯಿಲ್ಲವೆಂದು ತನ್ನ ಪಾಡಿ 10
ಮನೆಮನೆಯಿಂದ ಬಂದಳು ಕೊರವಂಜಿ
ತಾನು ಮನೆಮನೆಯಿಂದ ಬಂದಳು
ರನ್ನವ ತೆತ್ತಿಸಿದ ಚಿನ್ನದ ದಿವ್ಯ ಬುಟ್ಟಿ
ತನ್ನ ನೆತ್ತಿಯಲ್ಲಿಟ್ಟು ಬೆನ್ನಿಲಿ ಸಿಂಗಾನ ಕಟ್ಟಿ 11
ಗದ್ಯ : ಸುಗುಣಾಂಗಿಯರು ಪೇಳಲು ಮುದದಿಂದ ರುಕುಮಿಣಿದೇವಿ ತಾನೂ ಮುಗುಳು ನಗೆಯಂ ನಗುತ ಕೊರವಂಜಿಯನೆ ಅತಿಬೇಗ ಜಗವರಿಯೆ ಕರೆಯೆಂದಳು.
ಶ್ರೀ ರುಗ್ಮಿಣಿ ತಾ ಬಂದಳು ಸ್ತ್ರೀಯರ ಕೂಡಿ
ಚಾರುಹಾಸದಿಂದೊಪ್ಪುತ ಚೆಲ್ವ ದಿವ್ಯ ನೋಟಂಗಳಿಂದ
ರಾಜಿಪ ಕಂಕಣದಿಂದ ರಮ್ಯ ನೂಪುರಗಳಿಂದ
ರಾಜಚಿಹ್ನೆಗಳಿಂದ ರಾಜೀವನೇತ್ರೆ ಒಲವುತ್ತ12
ರಾಜಾಧಿರಾಜ[ರು]ಗಳಿಂದ ರಾಜಸಭೆಯಲ್ಲಿ ಪೂಜಿತಳಾದ ರಾಜಹಂಸಗ-ಮನೆಯು ಬರಲು ರಂಜಿತಳಾಗಿ ಒಲೆವುತ್ತ
ಗದ್ಯ : ಆಗಲಾ ದೂತಿಕೆಯರು ಕೊರವಂಜಿಯನೆ ಅತಿ ಬೇಗ ಕರೆಯಲು ಬೇಕಾದ ವಜ್ರವೈಢೂರ್ಯ ರಾಗವಿಲಸಿತವಾದ ದ್ವಾರ ಭೂಭಾರದಿಂದೆಸೆವ ಭಾಗಧೇಯದಿಂ ರಾಜ ಸತ್ಕುಲವಾದ ದಿವ್ಯ ಮಂದಿರಕೆ
ತ್ಯಾಗಿ ರುಕುಮಿದೇವಿ ನೋಡಲಾ ಶ್ರೀ-
ರಾಗದಿಂ ಗಾನವಂ ಪಾಡುತ್ತ ಕೊರವಂಜಿಯು ಬಂದ ಚೆಂದ13
ಬಂದಾಳಂದದಲಿ ಬಾಗಿಲೊಳಗೆ ದಿಂಧಿಮಿಕೆನ್ನುತ 14
ಚೆಲುವ ತುರುಬಿನಿಂದಲಿ ಜಗುಳುವ
ಚಲಿಸುವ ಪುಷ್ಪದಂದದಿ
ನಲಿನಲಿ ನಲಿದಾಡುತ್ತ ಮಲ್ಲಿಗೆ
ಝಲಝಲಝಲ ಝಲ್ಲೆಂದು ಉದುರುತ್ತ
ಕಿಲಿಕಿಲಿ ಕಿಲಿ ಕಿಲಿ ಕಿಲಿಯೆಂದು ನಗುತ್ತ 15
ಗದ್ಯ :ಥಳಥಳನೆ ಹೊಳೆವುತ್ತ ನಿಗಿನಿಗೀ ಮಿಂಚುತ್ತ ರನ್ನದ ಬುಟ್ಟಿಯ ಕೊಂಕಳಲಿಟ್ಟು ಧಿಗಿಧಿಗಿಯೆಂದು ನೃತ್ಯವನ್ನಾಡುತ್ತ ಎತ್ತರದಲಿ ಪ್ರತಿಫಲಿಸುವ ಮುತ್ತಿನಹಾರ ಉರದೊಳಲ್ಲಾಡುತ ನಿಜಭಾಜ ಮಾರ್ತಾಂಡ ಮಂಡಲ ಮಂಡಿತಾ ಪ್ರಭು ಪ್ರತಿಮ ದಿಶದಿಶ ವಿಲಸಿತವಾದ ಭುಜಕೀರ್ತಿಯಿಂದೊಪ್ಪುವ ಆಕರ್ಣಾಂತ ಸುಂದರ ಇಂದೀವರದಳಾಯತ ನಯನ ನೋಟಗಳಿಂದ ಚಂಚಲಿಸುವÀ ಮಿಂಚಿನಂತೆ ಮಿಂಚುವ ಕಾಂತೀ ಸಂಚಯಾಂಚಿತ ಕಾಂಚನೋದ್ದಾಮ ಕಾಂಚೀ ಪೀತಾಂಬರಾವಲಂಬನಾಲಂಬಿತಾ ನಿತಂಬದಿಂದೊಪ್ಪುವ ಝೇಂಕರಿಸುವ ಭೃಂಗಾಂಗನಾಸ್ವಾದಿತ ಜಗುಳುವ ಜುಗುಳಿಸುವ ಪರಿಮಳಿಸುವ ಜಘನ ಪ್ರದೇಶಗಳಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತ ನಿತಾಂತಕಾಂತಿಕಾಂತಾ ಸುಧಾಕುಂತಳ ಸಂತತಭರದಿಂದೊಪ್ಪುವ ಪುಂಜೀಕೃತ ಮಂಜುಭಾಷಣ ಅಪರಂಜಿ ಬಳ್ಳಿಯಂತೆ ಮನೋರಂಜಿತಳಾದ ಕೊರವಂಜಿಯು ನಿಶ್ಶಂಕೆಯಿಂದ ಕಂಕಣಕ್ಷಣತೆಯಿಂದ ಕೊಂಕಳ ಬುಟ್ಟಿಯ ಪೊಂಕವಾಗಿ ತನ್ನಂಕದಲ್ಲಿಟ್ಟುಕೊಂಡು ಬೆನ್ನಸಿಂಗನ ಮುಂದಿಟ್ಟು ಚೆಂದವಾಗಿ ರುಕುಮಿಣಿ ದೇವಿಯ ಕೊಂಡಾಡಿದಳು.
ಗದ್ಯ :ಅವ್ವವ್ವ ಏಯವ್ವ ಕೈಯ್ಯ ತಾರೆ ಕೈಯ್ಯ ತೋರೆ ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡ್ಹಾಗೆ ಪೇಳುವೆನವ್ವಾ.
ಗದ್ಯ :ಬ್ರಹ್ಮಾಣಿ ಸುರಾಗ್ರಣೀ ಸಕಲ ಸುಜನಾಂಬುಜದ್ಯುಮಣಿ ಕಲ್ಯಾಣಿ ಗುಣಮಣೀ ಕೋಗಿಲಾಲಾಪವಾಣೀ ಅಂಗನಾಮಣೀ ಶಿಖಾಮಣಿ ಏನೇ ರುಕುಮಿಣಿ ನಿನ್ನ ಚೆಲುವಿಕೆಯನೇನೆಂತು ಬಣ್ಣಿಪೆ.
ಗದ್ಯ : ತೆರೆದ ಕನ್ನಡಿಯಂತೆ ಥಳಥಳಿಸುವ ನಿನ್ನ ಮುಖಚಂದ್ರಜ್ಯೋತಿ-ನೀಲದ ಕಾಂತಿಯಂತೆ ದಿವ್ಯವಾದ ನಿನ್ನ ಕುಂತಳ ಸಂತತಿ ಬಾಲಚಂದ್ರನ ಸೋಲಿಸುವ ನಿನ್ನ ಪಟುವಾದ ದಿವ್ಯ ಲಲಾಟಫಲಕ ಏರಿದ ಬಿಲ್ಲ ನಿರಾಕರಿಸುವ ನಿನ್ನ ಹುಬ್ಬುರೆಪ್ಪೆಯುಗಳ ಎರಳೆಕಂಗಳ ತಿರಸ್ಕರಿಸುವ ನಿನ್ನ ಕಣ್ಣುನೋಟ ಮದನ ಚಕೋರನಿದಿರಿಸುವ ನಿನ್ನ ಕರ್ಣೋತ್ಪಲ ಸರಸಸಂಪಿಗೆ ಮೊಗ್ಗೆಯ ಸೋಲಿಸುವ ನಿನ್ನ ನಾಸಾಮಣೀ ಸುವರ್ಣ ಮರ್ಯಾದೆಗಳ ಧಿಕ್ಕರಿಸುವ ನಿನ್ನ ಗಲ್ಲಯುಗಳ ಕುಂದಕುಟ್ಮಲಗಳ ಮೋಹಿಸುವ ನಿನ್ನ ದಂತಪಂಕ್ತಿಯುಗಳಾ ಖಂಡ ಸಕ್ಕರೆಯಿಂದಧಿಕ ರಸವಾದ ನಿನ್ನ ಅಧರಬಿಂಬ ಭಕ್ತರ ಮನದ ಅಜ್ಞಾನವ ನಿರಾಕರಿಸುವ ನಿನ್ನ ಮುಗುಳುನಗೆಚಂದ್ರಿಕೆ ಹಚ್ಚೆಬೊಟ್ಟಿನಿಂದೊಪ್ಪುವ ನಿನ್ನ ಶುಭ ಚುಬುಕಾಗ್ರ ಮದನಕಂಬುಕಂಠಕೆ ಹೆಚ್ಚಿದ ನಿನ್ನ ಕಂಬುಕಂಠ ಕರಿಕರವು ಮೀರದ ನಿನ್ನ ದಿವ್ಯಭೂಷಣ ಕರಯುಗಳ ದಂತಿಕುಂಭಸ್ಥಳಗಳ ನಿರಾಕರಿಸುವ ನಿನ್ನ ಕುಚಕುಂಭಯುಗಳ ಹಾರ ರೋಮಾವಳಿಯಿಂದೊಪ್ಪುವ ನಿನ್ನ ನಾಭಿತ್ರಿವಳೀ ನವಮೇಘವನೆ ಸೋಲಿಸುವ ನಿನ್ನ ಸೀರೆ ರತ್ನ ಮೇಖಲಾ ಘಂಟೆ ಕಿಂಕಿಣೀ ಕಿಣಿಕಿಣೀಯೆಂಬ ಶಬ್ದದಿಂದೊಪ್ಪುವ ನಿನ್ನ ಕಟಿಯು ಪುಟ್ಟ ಬಾಳೆರೆಂಬೆಯನಿವ (ವಾ?) ಳಿಸುವ ನಿನ್ನ ಊರುಯುಗಳ ಎರಡು ನವರತ್ನ ಖಚಿತಕನ್ನಡಿಗಳ ಧಿಕ್ಕರಿಸುವ ನಿನ್ನ ಜಾನುಯುಗಳ ಹಸ್ತದಂತದಂಡವಲೀಯೆಂಬ ನಿನ್ನ ಗುಲ್ಫಯುಗಳ ಕೆಂದಾವರೆಯಿರವ ಝಲ್ಲನೇ ಮೋಹಿಸುವ ಪಾದಪದ್ಮಯುಗಳ ಸುಂದರಿಯಲ್ಲವೊ ರತಿಗನುಕೂಲವಾದ ಮನೋರಥದ ಗಿಣಿಯೋ ಇದು ಗಿಣಿಯಲ್ಲ ಇದು ಗಿಣಿಯಲ್ಲ ರಾಯರು ಮೆಚ್ಚಿದ ಹೆಚ್ಚಿನ ಪ್ರತಿಮೆಯೊ ಇದು ಪ್ರತಿಮಲ್ಲ ಇದು ಪ್ರತಿಮಲ್ಲ ಘನ್ನ ಹೆಚ್ಚಿದ ಮಿಂಚೊ ಇದು ಮಿಂಚಲ್ಲ ಇದು ಮಿಂಚಲ್ಲ ನವಲಾವಣ್ಯದ ಖಣಿಯೋ ಇದು ಖಣಿಯಲ್ಲ ಘಮ್ಮನೆ ಘಮ ಘಮಿಸುವ ಕನ್ನೈದಿಲ ಪುಷ್ಪದ ಚಂಡೊ ಇದು ಚಂಡಲ್ಲ ಇದು ಚಂಡಲ್ಲ ಹೀಗೆಂದು ಅಂಗನಾಮಣಿಗಳೊಳಗೆ ಅಮಿತ ರಸಶೃಂಗಾರದಿಂದೊಪ್ಪುವ ನಿನ್ನ ಕೀರ್ತಿಯ ಕೇಳಿ ಬಂದೆನಮ್ಮಾ
ಅಂಗ ವಂಗ ಕಳಿಂಗ ಕಾಶ್ಮೀರ ಕಾಂಭೋಜ
ಸಿಂಧೂ ದೇಶವನೆಲ್ಲ ತಿರುಗಿ ಬಂದೆನಮ್ಮಾ 16
ಮಾಳವ ಸೌರಾಷ್ಟ್ರ ಮಗಧ ಬಾಹ್ಲೀಕಾದಿ
ಚೋಳ ಮಂಡಲವನೆಲ್ಲ ಚರಿಸಿ ಬಂದೆನಮ್ಮಾ17
ಲಾಟ ಮರಾಟ ಕರ್ಣಾಟ ಸೌಮೀರಾದಿ
ಅಶೇಷ ಭೂಮಿಯ ನಾನು ನೋಡಿ ಬಂದೆನಮ್ಮಾ 18
ಶ್ಲೋಕ || ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ
ಅವಂತಿಕಾಪುರೀ ದ್ವಾರಾವತೀ ಚೇದಿ||
ಇವು ಮೊದಲಾದ ಪುಣ್ಯಪುರಗಳೆಲ್ಲ
ಮೆಚ್ಚಿ ಬಂದ ಕೊರವಿ ನಾನಮ್ಮ
ಪುರಗಳಿಗೆ ಹೋಗಿ ನರಪತಿಗಳಿಗೆ
ಸಾರಿ ಬರÀ ಹೇಳಿ ನಾ ಕಪ್ಪವ ತಂದೆ 19
ಸತ್ಯಮುಗಾ ಚೆಪ್ಪುತಾನಮ್ಮಾ ಸಂತೋಷಮುಗಾ ವಿನುವಮ್ಮ
ಸತ್ಯ ಹರುಶ್ಚಂದ್ರನಿಕಿ ಚಾಲ ಚೆಪ್ಪಿತಿ 20
ಕನ್ನೆ ವಿನವೆ ನಾ ಮಾಟ ನಿನ್ನ ಕಾಲಂನೆ ನೇನಿಕ್ಕು(?)
ಚಿನ್ನ ಸಿಂಗಾನೀ ತೋಡೂನೆ ಚೆಪ್ಪ್ಪೆಗಮ್ಮಾನೇ 21
ಗದ್ಯ :ಆಗ ರುಕುಮಿಣಿದೇವಿಯು ಚಿತ್ರವಿಚಿತ್ರ ಚಿತ್ತಾರ ಪ್ರತಿಮೋಲ್ಲಸಿತ ತಪ್ತ ರಜತರಂಜಿತಸ್ಫಟಿಕ ಮಣಿಗಣ ಪ್ರಚುರ ತಟಿಕ್ಕೋಟಿ ಜ್ವಾಲಾವಿಲಸಿತವಾದ ವಜ್ರಪೀಠದಲಿ ಕುಳಿತು ಚಿನ್ನದ ಮೊರಗಳಲ್ಲಿ ರನ್ನಗಳ ತಂದಿಟ್ಟುಕೊಂಡು ಕೊರವಂಜಿಯನೆ ಕುರಿತು ಒಂದು ಮಾತನಾಡಿದಳು.
ತಲ್ಲಿ ನಾ [ಅ] ಭೀಷ್ಟಮುಲೆಲ್ಲ ತಾಕ್ಕÀ್ರ್ಕಣ್ಯಮುಗಾ ಚರ್ಪಿತಿನಿಕ್ಕು
ವೊಲಿಸೀನ ಸೊಲ್ಮೂಲೆಲ್ಲ ವನಿತೆನೆ ನಿಂತೂ(?) 22
ಗದ್ಯ : ಆಗ ರುಕುಮಿಣಿದೇವಿಯಾಡಿದ ಮಾತ ಕೇಳಿ ಕೊರವಂಜಿಯುಯೇ-ನೆಂತೆಂದಳು.
ನೆನೆಸಿಕೊ ನಿನ್ನಭೀಷ್ಟವ ಎಲೆ ದುಂಡೀ ನೆನೆಸಿಕೊ
ವನಿತೆ ಶಿರೋಮಣಿಯೆ ಘನಮುದದಿಂದ ನೆನೆಸಿಕೊ 23
ರನ್ನೆ ಗುಣಸಂಪನ್ನೆ ಮೋಹನ್ನೆ
ಚೆನ್ನಾಗಿ ಮುರುಹಿಯ ಮಾಡಿ ನೆನೆಸಿಕೊ 24
ಗದ್ಯ :ಕಲ್ಯಾಣಿ ಪರಮಕಲ್ಯಾಣಿ ರುದ್ರಾಣಿ ಅಂಬಾ ಜಗದಂಬಾ ಮಹಾದೇವೀ ಮಹಾಲಕ್ಷ್ಮೀ ಕಾಳಿಂದೀ ಮಾಧವೀ ಸರಸ್ವತೀ ಪಾಂಡುರಂಗ ಕಸ್ತೂರಿರಂಗ ಬಿಂದು ಮಾಧವ ಸೇತುಮಾಧವ ವೀರರಾಘವ ಚಿದಂಬರೇಶ್ವರ ಅರುಣಾಚÀಲೇಶ್ವರ ಪಂಚನದೇಶ್ವರ ಶ್ರೀಮುಷ್ಣೇಶ್ವÀÀರ ಉಡುಪಿನ ಕೃಷ್ಣ ಮನ್ನಾರು ಕೃಷ್ಣ ಸೋದೆ ತ್ರಿವಿಕ್ರಮ ಬೇಲೂರು ಚೆನ್ನಪ್ರಸನ್ನ ವೆಂಕಟೇಶ್ವರ ಸೂರ್ಯನಾರಾಯಣ ಇವು ಮೊದಲಾದ ದೇವತೆಗಳೆಲ್ಲ ಎನ್ನ ವಾಕ್ಯದಲಿದ್ದು ಚೆನ್ನಾಗಿ ಸಹಕಾರಿಗಳಾಗಿ ಬಂದು ಪೇಳಿರಯ್ಯಾ
ಮಂಗಳದ ಕೈಯ್ಯ ತೋರೇ ಎಲೆದುಂಡೀ
ಬಯಸಿದೆಲ್ಲವನು ನಾನು ಪೇಳುವೆನು
ಕೈಯ ತೋರೆ ಕೈಯ ತೋರೆ 25
ಕೇಳೆ ರನ್ನಳೆ ಎನ್ನ ಮಾತ ಬೇಗ
ಇಳೆಯರಸನಾದನು ಪ್ರಿಯ26
ಕಳಸಕುಚಯುಗಳೆ ಚಿಂತೆ ಬೇಡ ನಿನ್ನ
ಕರೆದಿಂದು ಕೂಡ್ಯಾನು ರಂಗ 27
ನಾಡಿನೊಳಧಿಕನಾದ ನಾರಾಯಣನ
ಈಡಿಲ್ಲದ ಪತಿ ನೀನು ಮಾಡಿ
ಕೊಂಡೆನೆಂದು ಮನದಲ್ಲಿ
ನೆನಸಿದೆ ಕಂಡ್ಯಾ ನಮ್ಮ ಕೃಷ್ಣ ಕುತೂಹಲದಿ 28
ಅಲ್ಲವಾಡು ವಚ್ಚೀ ಕೂಡೇನಮ್ಮ ಇಂದುಬಿಂಬಮುಖೀ
ಸುಂದರಶ್ಯಾಮ
ಅಲ್ಲಿ ನÀಂದಾ ನಂದಾನಾಡುವಾನಂದಮುಗಾವಚ್ಚಿ ಕೂಡೇನಮ್ಮಾ 29
ಶಂಖಚಕ್ರಯುಗಲ
ಪಂಕಜನಾಭುಂಡು ಪಂಕಜಮುಖೀ ನೀವು
ಪ್ರಾಣಿಗ್ರಹಣಮು ಚೇಸಿ ಕೂಡೆನಮ್ಮಾ 30
ಚೆಲುವಾ ನಾ ಮಾಟಾ ನೀಕು ಪುಚ್ಚಾ
ಚೆಲುವಾ ನಾ ಮಾಟ
ಕಲ್ಲಗಾದು ನಾ ಕಣ್ಣೂಲಾನೂ
ಪಿಲ್ಲ ವಿನುವಮ್ಮ ಪಲ್ಲವಪಾಣೀ ಚೆಲುವಾ ನಾ ಮಾಟ31
ದಮಯಂತೀಕೀನೇ ಚೆಪ್ಪಿತಿ ನಮ್ಮವೆ ಮಾಟ
ಅಮರುಲಕೆಲ್ಲಾ ಅನುಮೈನವಾಡು ಚೆಪ್ಪೀ
ಅಮಿತ ಬಹುಮಾನಾಮಂದೀತೀನಮ್ಮಾ
ಚೆಲುವ ನಾ ಮಾಟ ಚೆಲುವ 32
ಬಂತೆ ಮನಸಿಗೆ ನಾ ಹೇಳಿದ್ದು ಚಿಂತೆ
ಸಂತೋಷದಿ ನಾನಾಡಿದ ಶಾಂತ
ಮಾತೆಲ್ಲ ಇದು ಪುಸಿಗಳಲ್ಲ
ಬೇಗ ಬಂದಾನೋ ನಲ್ಲಾ ಆಹಾ
ಆಹಾ ಬಂತೇ ಮನಸ್ಸಿಗೆ (incomplete?)
***
No comments:
Post a Comment