..
ಶ್ರೀ ವರ ಮಹಾಲಕ್ಷ್ಮೀ ಸ್ತುತಿ
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ....
ವರವ ಕೊಡೆ ತಾಯೇ ವರಲಕ್ಷ್ಮೀ ।
ವರಗಿರಿ ತಿಮ್ಮಪ್ಪನ ರಾಣಿ -
ದಯವ ತೋರೇ ।। ಪಲ್ಲವಿ ।।
ಪಂಚಾಕ್ಷರಿ ಪಂಚ-
ಪ್ರಾಣಧಾರನ ವಲ್ಲಭೇ ।
ಪಂಚಭೇದ ಮತ -
ಜ್ಞಾನವ ಕೊಡಮ್ಮಾ ।। ಚರಣ ।।
ಪದ್ಮಮುಖಿ ಪದುಮೆ -
ಪದ್ಮನಾಭನ ಪ್ರಿಯೇ ।
ಪದ್ಮಭವ ನುತ -
ಪದ್ಮೇಶನ ತೋರಮ್ಮಾ ।। ಚರಣ ।।
ಸಿಂಧು ಸುತೆಯ ಬಾರಮ್ಮಾ ।
ಚಂದ್ರ ಸಹೋದರಿ -
ಪೊರೆಯಮ್ಮಾ ।। ಚರಣ ।।
ಇಂದು ಮುಖಿಯಳೇ ನೋಡಮ್ಮಾ ।
ಸಿಂಧುಶಯನನ ಪಾದ -
ಸೇವೆಯ ನೀಡಮ್ಮಾ ।। ಚರಣ ।।
ಮಧ್ವರಾಯರ ಮುದ್ದಿನ ತಾಯೇ ।
ಮೋದದಿ ನೀ ಯೆನ್ನ ಕಾಯೇ ।। ಚರಣ ।।
ಶುದ್ಧ ಮನದಲಿ ನಿನ್ನ ಪತಿ -
ವೇಂಕಟನಾಥನ ಭಜಿಸುವ ।
ವೈಧಾತೃ ಜ್ಞಾನವ ಕರುಣಿಸಮ್ಮಾ ।। ಚರಣ ।।
" ವಿವರಣೆ "
ವರಗಿರಿ = ತಿರುಪತಿ
ಪಂಚಾಕ್ಷರೀ = ಕೃಷ್ಣಾಯ ನಮಃ
" ಪಂಚಪ್ರಾಣಾಧಾರ "
ಪ್ರಾಣ - ಅಪಾನ - ಸಮಾನ - ಉದಾನ - ವ್ಯಾನ ಎಂಬ 5 ಪ್ರಾಣಗಳಲ್ಲಿ ವ್ಯಾಪ್ತನಾದ ಶ್ರೀಮಹಾವಿಷ್ಣು
ಪದ್ಮಮುಖಿ = ಕಮಲದಂತಾ ಕಣ್ಣುಗಳುಳ್ಳವಳು
ಪದ್ಮಭವ = ಶ್ರೀ ಚತುರ್ಮುಖ ಬ್ರಹ್ಮದೇವರು
ಸಿಂಧು ಸುತೆ = ಸಮುದ್ರರಾಜನ ಮಗಳು
ವೈಧಾತೃ ಜ್ಞಾನ = ಬ್ರಹ್ಮ ಜ್ಞಾನ
ನಾಡಿನ ಸಕಲ ಸಾಧು ಸಜ್ಜನರಿಗೆ ಶ್ರೀ ವರಮಹಾಲಕ್ಷ್ಮೀದೇವಿಯರು ಸಕಲ ಸಂಪತ್ತು - ಆಯುರಾರೋಗ್ಯ ಕೊಟ್ಟು ರಕ್ಷಿಸಲೆಂದು "ಪ್ರಾರ್ಥಿಸುತ್ತಾ"- acharya nagaraju haveri
***
No comments:
Post a Comment