Wednesday 1 September 2021

ಬಂದು ಬಾರದಾಯಿತು ನೋಡಿ ಇಂದು ನರದೇಹ ಸಂಗವ ಮಾಡಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಂದು ಬಾರದಾಯಿತು ನೋಡಿ | ಇಂದು ನರದೇಹ ಸಂಗವ ಮಾಡಿ ಪ 


ಮುತ್ತಿನಂಥಾ ಜನುಮದಿ ಬಂದು | ಚಿತ್ತ ಬೆರಿಯನು ವಿಷಯದಲಿಂದು 1 

ಸಾಧು ಸಂತರ ಮೊರೆ ಹೋಗಲಿಲ್ಲಾ | ಹಾದಿ ತಪ್ಪಿ ಮುಕ್ತಿಯು ಹೋಯಿತಲ್ಲಾ 2 

ಆಹಾರ ನಿದ್ರೆ ಭಯ ರತಿಸಂದಾ | ಅಹರ್ನಿಶಿಯಲಿದೇ ಮನದಂಗಾ 3 

ನಾನಾ ಶಾಸ್ತ್ರದ ಮಾರ್ಗಕ ಹೋದೀ | ಗಾಣದೆತ್ತಿನಂದದಿ ಕುರುಡಾದಿ 4 

ತಂದೆ ಮಹಿಪತಿ ಸ್ವಾಮಿಯ ನೆನೆದು | ಬಂದದ್ದು ಸಾರ್ಥಕ ಮಾಡದೆ ಬೆರೆದು 5

****


No comments:

Post a Comment