Monday, 6 September 2021

ಕಾಲವು ಮೀರಿತು ಕಾಯದಿಹುದು ಥರವೇ ಮಂತ್ರಾಲಯ ಪ್ರಭುವೇ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಕಮಾಚ್ ತಾಳ: ಆದಿ


ಕಾಲವು ಮೀರಿತು ಕಾಯದಿಹುದು ಥರವೇ ಮಂತ್ರಾಲಯ ಪ್ರಭುವೇ


ಕಾಲಬಲದಿ ವಸುಧಾಲತಾಂಗಿಯರ 

ಲೋಲುಪತೆಗೆ ಮನ ಮೇಳವಿಸಿತು ಹಾ ಅ.ಪ


ಭೂರಿಯಹಮ್ಮಮಕಾರದಿ ಧರ್ಮವಿಚಾರಗೈಯ್ಯದಪಚಾರಿಸುತಾ

ವೀರವೈಷ್ಣವರಸಾರಿ ವಾಯುಮತಸಾರವರಿಯದೆ ವಿಹಾರಿಸುತ

ಘೋರೈಸುವ ಸಂಸಾರಕಾಂತಾರದಿ ತಾರಿದೆ ದೀನೋದ್ಧಾರಿ ವಿಚಾರಿಸೋ 1

ಭೂಪತಿಜಾತಟಸ್ಥಾಪಿತ ಸದ್ಮ ಶ್ರೀಪ್ರಹ್ಲಾದ ಪ್ರತೀಪಜನೇ

ಶ್ರೀಪಾದಗುರುಪ್ರಾಪುತ ಜ್ಞಾನ ಸುಧಾಪರಮತಿಕೃತ ದೀಪಿಕನೇ

ತಾಪತ್ರಯದಹಿತಾಪತ್ಯನು ನಾ ನೀ ಪತಿಕರಿಸದೆ ಕಾಪಥಕಳೆವರೆ 2

ಶಿಷ್ಟಯಮಿಕುಲೋತ್ಕøಷ್ಟ ಹೃನ್ಮಧ್ಯನಿವಿಷ್ಟ ತಂದೆಶ್ರೀವೆಂಕಟೇಶಾ

ವಿಠಲ ಸೇವಾನಿಷ್ಠ ಆನತಪ್ರದೇಷ್ಟ ಕೃಷ್ಣ ರಾಘವ ವ್ಯಾಸ

ಹೃಷ್ಟಚರಣಸುಮ ಷಟ್ಪದ ಕರ್ಮಭ್ರಷ್ಟನ ಪೊರೆ ಸ್ಮಿತದೃಷ್ಟಿಯ ಬೀರಿ 3

***

ಅಪಚಾರಿಸುತ=ಹೀಯಾಳಿಸುತ; 

ಸಂಸಾರ ಕಾಂತಾರದಿ ತಾರಿದೆ=ಸಂಸಾರವೆಂಬ 

ಅಡವಿಯಲ್ಲಿ ಸೊರಗಿದೆ; ಪತಿಕರಿಸದೆ=ದಯತೋರದೆ; 

ಕಾಪಥ=ಕೆಟ್ಟ ದಾರಿ; 

ಶಿಷ್ಠಯಮಿ=ಶಿಷ್ಠ ಯತಿ; 

ನಿವಿಷ್ಠ=ಸೇರಿದ; 

ಪ್ರದೇಷ್ಟ=ಇಷ್ಟಪ್ರದ; ಹೃಷ್ಟ=ಆನಂದದಾಯಕ; 

ಸ್ಮಿತ ದೃಷ್ಟಿ=ಮುಗುಳು ನಗೆಯಿಂದ ಕೂಡಿದ ದೃಷ್ಟಿ;


No comments:

Post a Comment