Tuesday, 13 April 2021

ನಾರಾಯಣ ಗೋವಿಂದ ಮುರಾರೇ ankita venkata vittala

ನಾರಾಯಣ ಗೋವಿಂದ ಮುರಾರೇ ll ಪ ll


ದುರಿತದೂರ ಕರಿವರ ವರದ ಪರಾತ್ಪರ l

ಪರಮಪುರುಷ ನಿರುಪಮ ನರಹರೇ ll 1 ll


ಅಜಭವ ದೈವತ ಕರುಣಾಕರ l

ವ್ರಜವನಿತೇಶ ಗೋವಿಂದ ಮಾಯಾಚ್ಯುತ ll 2 ll


ಮತಿಜನ ವನಚರ ಪ್ರತಿಪಾಲನಾ l

ಘನ ಚಿನ್ಮಯಧವ ದಾನುಜಾಸೂದನಾ ll 3 ll


ಭವ ಭಯಹಾರಕ ಭುವನಾಧೀಶ್ವರ l

ಪರಪುರುಷ ವಿಭವ ಶುಭದಾಯಕ ll 4 ll


ಪಂಕಜನಾಭ ಅಕಳಂಕ ಚರಿತ ಮೀ l

ನಾಂಕ ಜನಕ ಶ್ರೀ ವೇಂಕಟವಿಟ್ಠಲ ll 5 ll

***


No comments:

Post a Comment