ಕಾಖಂಡಕಿ ಶ್ರೀ ಕೃಷ್ಣದಾಸರು
ಸಿಕ್ಕಲು ನೋಡೇ ಸತ್ಸಂಗ | ಯನ | ಗಕ್ಕಿತು ಸ್ವಾನುಭವದಂಗ | ಮಿಕ್ಕಿನವಿಷಯದಿ ಹಂಗಿಲ್ಲಾ | ಒಳ | ವಕ್ಕಲವಾದನು ಶ್ರೀನಲ್ಲಾ ಪ
ಜ್ಞಾನಾಂಜನವನು ತಂದಿಡಲಿ | ಅ | ಪರಿ ಬಿಡಲಿ | ಪರಿ ಭಾಸುವ ಕೋಶದಲೀ | ತಾನೇ ದೋರುವ ಜಗದೀಶಾ 1
ಭವ ಬಂಧವ ತಿಳಿಯಲು ನೆಲೆಯಾ | ತಾ | ಅವನಿಲಿ ಶುಕನಳಿ ಕನ್ಯಾಯಾ | ವಿವರಿಸಿಯನ್ನೊಳಗೆಚ್ಚರಿಸಿತೆ | ನಾ | ತವಕದಿ ಚಿದ್ಘನದೊಳು ಬೆರೆತೇ 2
ಏನೆಂದ್ಹೇಳಲಿ ಅಮ್ಮಮ್ಮಾ | ಯನ್ನಾನಂದದ ಸುಖ | ಸಂಭ್ರಮಾ | ಶ್ರೀನಿಧಿಗುರು ಮಹಿಪತಿ ಬೋಧಾ | ಸಲೆ | ತಾ ನಳಿಯಿತು ಕಲ್ಪನೆ ಬಾಧಾ 3
***
No comments:
Post a Comment