Monday, 6 September 2021

ಚೆಲುವ ರಾಯರ ನೋಡುವ ಬನ್ನಿ ಸುಲಭದಿ ವರ ಕೊಡುವ ankita gurushyamasundara

 ರಾಗ: [ಘೋರಕ್ ಕಲ್ಯಾಣಿ] ತಾಳ: [ಆದಿ]


ಚೆಲುವ ರಾಯರ ನೋಡುವ ಬನ್ನಿ

ಸುಲಭದಿ ವರ ಕೊಡುವ


ವರ ಪ್ರಹ್ಲಾದ ರಾಜರೆ ಇವರು

ಹರಿಯ ಕಂಭದಿ ತೋರ್ದವರು ನಿಜದಿ

ಹರಿಮತ ಸ್ಥಾಪಿಸಿದವರು

ಪರಿಪರಿ ಕಷ್ಟವ ಸಹಿಸುತ ಪಿತನಿಗೆ

ಪರಮ ಸಂಪದದ ವರ ಬೇಡಿದರು 1

ಮರಳಿ ಶ್ರೀವ್ಯಾಸರಾಜರಾಗುತಲಿ

ಭರದಿಂದಲಿ ಬಂದ ಭೂಪಾಲನಿಗೆ

ಸರುಪದ ವ್ಯಾಧಿಯ ನೀಗುತಲಿ

ಹರಿ ಗುರು ಮಧ್ವರ ಕರುಣೆಯ ಪಡೆಯುತ

ವರ ನ್ಯಾಯಾಮೃತ ಚಂದ್ರಿಕೆ ರಚಿಸಿದ 2

ತುಂಗಾತೀರದಿ ವಾಸವ ಮಾಡಿ

ಭಂಗಗೊಳಿಸುತ(?) ಸುಜನರ ಬೇಡಿಕೆ ನೀಡಿ

ಮಂಗಳ ಕೊಡುವ ಗ್ರಂಥವ ಮಾಡಿ

ಕಂಗಳಿಂದ ಹರಿ ನೋಡಿದ ಮಹಿಮರು

ತುಂಗ ಮಹಿಮ ಗುರುಶ್ಯಾಮಸುಂದರನ ದಾಸರು 3

****


No comments:

Post a Comment